ಮೇಷ: ಈ ವಾರವು ಮೇಷ ರಾಶಿಯವರ ಪಾಲಿಗೆ ಉತ್ತಮ ಫಲ ನೀಡಲಿದೆ. ಆರಂಭದಲ್ಲಿ ನೀವು ಪ್ರಣಯಭರಿತ ತಾಣಕ್ಕೆ ಕಿರಿದಾದ ಪ್ರಯಾಣವನ್ನು ಯೋಜಿಸಬಹುದು. ನಿಮ್ಮ ಗೆಳೆಯರೊಂದಿಗೆ ನೀವು ವಿಹಾರದ ನಡಿಗೆಗೆ ಹೋಗಬಹುದು. ಪ್ರೇಮ ಸಂಬಂಧದಲ್ಲಿರುವವರು ಈ ವಾರದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಪ್ರೇಮಿಯು ನಿಮಗೆ ಏನಾದರೂ ಒಂದನ್ನು ಹೇಳಲಿದ್ದು, ಅವರ ವೈಯಕ್ತಿಕ ಸಮಸ್ಯೆಯ ಕಾರಣ ನೀವು ಇದನ್ನು ಇಷ್ಟಪಡದೆ ಇರಬಹುದು. ಇದನ್ನು ದೂರ ಮಾಡುವುದಕ್ಕಾಗಿ ನೀವು ಅವರನ್ನು ಎಚ್ಚರಿಕೆಯಿಂದ ಕೇಳಬೇಕು ಮತ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಬೇಕು. ವಿವಾಹಿತ ವ್ಯಕ್ತಿಗಳು ಸಾಮಾನ್ಯ ಬದುಕನ್ನು ಸಾಗಿಸಲಿದ್ದಾರೆ. ಈ ವಾರವು ವಿವಾಹಿತರಿಗೆ ಲಾಭದಾಯಕ ಎನಿಸಿದರೂ, ಯಾರಾದರೂ ಒಬ್ಬರು ನಿಮ್ಮ ವಿರುದ್ಧ ಸುಳ್ಳು ಆಪಾದನೆಯನ್ನು ಮಾಡಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಹಣಕಾಸಿನ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಬಹುದು. ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ.
ವೃಷಭ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ಆದಾಯದ ಹೆಚ್ಚುವರಿ ಮೂಲದೊಂದಿಗೆ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗುವ ಕಾರಣ ಹಣಕಾಸಿನ ವಿಚಾರದಲ್ಲಿ ನೀವು ಬಲಶಾಲಿ ಎನಿಸಲಿದ್ದೀರಿ. ವಾರದ ಮಧ್ಯದಲ್ಲಿ ಗೆಳೆಯರೊಂದಿಗೆ ಸಾಕಷ್ಟು ಮೋಜು ಅನುಭವಿಸಲಿದ್ದೀರಿ. ವಾರದ ಕೊನೆಗೆ ನೀವು ಹೆಚ್ಚಿನ ಸಮಯವನ್ನು ನಿಮ್ಮ ಕುಟುಂಬದ ಸದಸ್ಯರ ಜೊತೆ ಕಳೆಯಲಿದ್ದೀರಿ. ನೀವು ನಿಮ್ಮ ತಾಯಿಯ ಪ್ರೀತಿಯನ್ನು ನೋಡಲಿದ್ದೀರಿ. ನೀವು ಆಕೆಯಿಂದ ಉಡುಗೊರೆ ಪಡೆಯಲಿದ್ದೀರಿ. ಉದ್ಯೋಗಾಕಾಂಕ್ಷಿಗಳು ತಮ್ಮ ಕಠಿಣ ಶ್ರಮದ ಕಾರಣ ಯಶಸ್ಸು ಗಳಿಸಲಿದ್ದಾರೆ. ವ್ಯಾಪಾರಿಗಳು ಏನಾದರೂ ಹೊಸತನ್ನು ಯೋಚಿಸಬೇಕು. ಏಕೆಂದರೆ ನಿಮ್ಮ ವ್ಯವಹಾರದ ಗ್ರಾಫ್ ಸ್ಥಿರ ಮಟ್ಟದಲ್ಲಿ ನಿಂತು ಹೋಗುತ್ತದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನವು ಸಾಮಾನ್ಯ ಮಟ್ಟದಲ್ಲಿರುತ್ತದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಉತ್ತಮ ವಾರವೆನಿಸಲಿದೆ. ವಿದ್ಯಾರ್ಥಿಗಳು ಏನಾದರೂ ಹೊತಸನ್ನು ಕಲಿಯಲು ಅವಕಾಶ ಪಡೆಯಬಹುದು. ಒಟ್ಟಾರೆಯಾಗಿ ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.
ಮಿಥುನ:ಅವಳಿಗಳಿಗೆ ಇದು ಉತ್ತಮ ಸಮಯವಾಗಿದೆ. ನೀವು ಪ್ರಯಾಣಕ್ಕೆ ಹೋಗಲಿದ್ದು ಇದು ನಿಮಗೆ ಆನಂದ ನೀಡಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಚೆನ್ನಾಗಿರಲಿದೆ. ನೀವು ನಿಮ್ಮ ಜೀವನ ಸಂಗಾತಿಯ ಜೊತೆ ರೊಮ್ಯಾಂಟಿಕ್ ತಾಣವೊಂದಕ್ಕೆ ಭೇಟಿ ನೀಡಲಿದ್ದೀರಿ. ಪ್ರೇಮಿಗಳಿಗೆ ಇದು ಸಕಾಲ. ಏಕೆಂದರೆ ನಿಮ್ಮ ಪ್ರೇಮದಲ್ಲಿ ಪರಸ್ಪರ ಬಲ ಕಂಡುಬರಲಿದೆ. ಉದ್ಯೋಗದಲ್ಲಿರುವವರಿಗೆ ಇದು ಸೂಕ್ತ ಕಾಲ. ಏಕೆಂದರೆ ನಿಮ್ಮ ಕೆಲಸವನ್ನು ನೀವು ಚೆನ್ನಾಗಿ ನಿಭಾಯಿಸಲಿದ್ದೀರಿ. ಆದರೂ ನಿಮಗೆ ಚಿಂತೆ ಕಾಡಬಹುದು. ವೃತ್ತಿಪರ ಬದುಕಿನ ಒತ್ತಡವು ನಿಮ್ಮನ್ನು ಕಾಡಲಿದೆ. ನಿಮ್ಮ ಘನತೆಗೆ ಕುಂದುಂಟು ಮಾಡುವುದಕ್ಕಾಗಿ ನಿಮ್ಮ ವಿರೋಧಿಗಳು ಸಕ್ರಿಯರಾಗಲಿದ್ದಾರೆ. ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಒಂದಷ್ಟು ಮಾನಸಿಕ ಒತ್ತಡ ಇರಬಹುದು. ವ್ಯಾಪಾರಿಗಳಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ವ್ಯವಹಾರಕ್ಕೆ ವೇಗ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ಸೋಂಕಿನ ಕಾರಣ ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಆಹಾರ ಹಾಗೂ ಪಾನೀಯ ಸೇವನೆಯ ಕುರಿತು ಸಲಹೆ ನೀಡಿರಿ. ಶುಭಕರ ಯೋಗದ ಪ್ರಕಾರ, ವಾರದ ಮಧ್ಯ ಭಾಗವು ಪ್ರಯಾಣಕ್ಕೆ ಅನುಕೂಲಕರ. ವಿದ್ಯಾರ್ಥಿಗಳು ತಮ್ಮ ವೃತ್ತಿಯಲ್ಲಿ ಪ್ರಗತಿ ಸಾಧಿಸಲಿದ್ದಾರೆ.
ಕರ್ಕಾಟಕ:ಕರ್ಕಾಟಕ ರಾಶಿಯವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ಹಣಕಾಸಿನ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಆದರೂ ನೀವು ಆದಾಯದ ಹೊಸ ಮೂಲವನ್ನು ಕಂಡುಹಿಡಿಯಲಿದ್ದೀರಿ. ಸಾಮಾಜಿಕ ಬದುಕಿನಲ್ಲಿ ನೀವು ಹೊಸ ಸಂಪರ್ಕಗಳನ್ನು ಅಭಿವೃದ್ಧಿಪಡಿಸಲಿದ್ದೀರಿ. ನಿಮ್ಮ ವೈಯಕ್ತಿಕ ಬದುಕಿನಲ್ಲಿ ಒಂದಷ್ಟು ಸವಾಲುಗಳು ಎದುರಾಗಬಹುದು. ಹೀಗಾಗಿ ನೀವು ನಿಮ್ಮ ಸಂಬಂಧದಲ್ಲಿ ಸಮಸ್ಯೆ ಎದುರಿಸಬಹುದು. ಈ ವಾರವು ಕರ್ಕಾಟಕ ರಾಶಿಯಲ್ಲಿ ಹುಟ್ಟಿದ ಪ್ರೇಮಿಗಳಿಗೆ ಒಳ್ಳೆಯದು. ನಿಮ್ಮ ಪ್ರೇಮಿಯ ಹೃದಯವನ್ನು ಅರಿತುಕೊಳ್ಳುವುದಕ್ಕಾಗಿ ನಿಮ್ಮ ನಿಗೂಢ ಪ್ರಪಂಚದಿಂದ ನೀವು ಹೊರ ಬರಲಿದ್ದೀರಿ. ವೃತ್ತಿಪರ ಬದುಕು ಸಾಗಿಸುವವರಿಗೆ ಈ ವಾರವು ಒಳ್ಳೆಯದು. ಏಕೆಂದರೆ ನಿಮ್ಮ ಕಠಿಣ ಶ್ರಮಕ್ಕೆ ಉತ್ತಮ ಪುರಸ್ಕಾರ ದೊರೆಯಲಿದೆ. ವ್ಯಾಪಾರೋದ್ಯಮಿಗಳು ತೆರಿಗೆಗೆ ಸಂಬಂಧಿಸಿದಂತೆ ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ವಿದ್ಯಾರ್ಥಿಗಳು ತಮ್ಮ ವೃತ್ತಿಗಾಗಿ ಸರಿಯಾದ ಹಾದಿಯನ್ನು ಕಂಡುಕೊಳ್ಳಲಿದ್ದಾರೆ. ಈ ವಾರವು ಹೊರಗೆ ಸುತ್ತಾಡಲು ಸೂಕ್ತ ಸಮಯ.
ಸಿಂಹ:ಮುಂಬರುವ ವಾರವು ಸಿಂಹ ರಾಶಿಯವರಿಗೆ ಪ್ರಗತಿದಾಯಕ ಎನಿಸಲಿದೆ. ಹಣಕಾಸಿನ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದ್ದು ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ನಿಮ್ಮ ಆರೋಗ್ಯದಲ್ಲಿ ಒಂದಷ್ಟು ಏರುಪೇರು ಉಂಟಾಗಬಹುದು. ಹೀಗಾಗಿ ಯಾವುದೇ ಸಣ್ಣಪುಟ್ಟ ಕಾಯಿಲೆಗಳನ್ನು ನಿರ್ಲಕ್ಷಿಸಬೇಡಿ. ವಿವಾಹಿತರ ವಿಚಾರದಲ್ಲಿ ಹೇಳುವುದಾದರೆ, ಅವರ ಜೀವನ ಸಂಗಾತಿ ಕಾಯಿಲೆಗೆ ತುತ್ತಾಗಬಹುದು. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ಪ್ರೇಮ ಸಂಬಂಧದಲ್ಲಿರುವವರು ಮುಂದಿನ ಹಂತಕ್ಕೆ ತಲುಪಲು ಅವಕಾಶ ಸಿಗಲಿದೆ. ನಿಮ್ಮ ಸಂಗಾತಿಯಿಂದ ತುಂಬಾ ಧನಾತ್ಮಕ ಪ್ರತಿಕ್ರಿಯೆಯನ್ನು ಪಡೆಯಲಿದ್ದೀರಿ. ವೃತ್ತಿಪರರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ. ಆದರೆ ಕೆಲಸದ ಬದಲಾವಣೆಯ ಕುರಿತು ಯೋಚಿಸಲಿದ್ದಾರೆ. ಉದ್ಯೋಗಾಕಾಂಕ್ಷಿಗಳು ತಮ್ಮ ನಿರೀಕ್ಷೆಯ ಕೊಡುಗೆಯನ್ನು ಪಡೆಯಲಿದ್ದಾರೆ. ವ್ಯಾಪಾರೋದ್ಯಮಿಗಳು ಚಾಲ್ತಿಯಲ್ಲಿರುವ ತಮ್ಮ ಕೆಲಸದಲ್ಲಿ ಯಶಸ್ಸು ಗಳಿಸಲಿದ್ದಾರೆ. ಈ ವಾರವು ವಿದ್ಯಾರ್ಥಿಗಳಿಗೆ ಒಳ್ಳೆಯದು. ಸಣ್ಣಪುಟ್ಟ ಸವಾಲುಗಳ ಹೊರತಾಗಿಯೂ ಪರೀಕ್ಷೆಯಲ್ಲಿ ಅಗತ್ಯ ಅಂಕಗಳನ್ನು ಪಡೆಯಲಿದ್ದೀರಿ.
ಕನ್ಯಾ:ಈ ವಾರ ನಿಮಗೆ ಸಾಧಾರಣವಾಗಿ ಫಲಪ್ರದ ಎನಿಸಲಿದೆ. ನೀವು ಪ್ರೇಮ ಸಂಬಂಧದಲ್ಲಿ ಇದ್ದರೆ ಈ ವಾರವು ನಿಮ್ಮ ಪಾಲಿಗೆ ಸವಾಲಿನ ವಾರ ಎನಿಸಲಿದೆ. ನಿಮ್ಮ ಪ್ರೇಮಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಅಲ್ಲದೆ ನಿಮ್ಮ ಸಂಬಂಧದ ಕುರಿತು ವಿರೋಧದ ಮಾತುಗಳು ಕೇಳಿ ಬರಬಹುದು. ಹೀಗಾಗಿ ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಇಡಿ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಚೆನ್ನಾಗಿರಲಿದೆ. ಈ ವಾರದಲ್ಲಿ ನೀವು ಆಸ್ತಿ ಖರೀದಿಸುವಲ್ಲಿ ಯಶಸ್ವಿಯಾಗಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕೆ ಸಂಬಂಧಿಸಿದ ಕಠಿಣ ಶ್ರಮದ ಮೂಲಕ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆದರೆ ಮಾನಹಾನಿಯ ಸಾಧ್ಯತೆಗಳಿವೆ. ಹೀಗಾಗಿ ಎಚ್ಚರಿಕೆಯಿಂದ ಇರಿ. ವ್ಯಾಪಾರೋದ್ಯಮಿಗಳಿಗೆ ತಮ್ಮ ಕೆಲಸದ ವೇಗದ ಕುರಿತು ತೃಪ್ತಿ ದೊರೆಯಲಿದೆ. ವಿದ್ಯಾರ್ಥಿಗಳು ಅಧ್ಯಯನದ ಪ್ರಯೋಜನ ಪಡೆಯಲಿದ್ದಾರೆ. ಆದರೆ ಮಾನಸಿಕ ಒತ್ತಡದ ಕಾರಣ ಅಧ್ಯಯನದಲ್ಲಿ ಸಮಸ್ಯೆಗಳು ಎದುರಾಗಬಹುದು. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.
ತುಲಾ:ತುಲಾ ರಾಶಿಯವರು ಈ ವಾರದಲ್ಲಿ ಅನುಕೂಲಕರ ಸಮಯವನ್ನು ನಿರೀಕ್ಷಿಸಬಹುದು. ಮಾನಸಿಕವಾಗಿ ನೀವು ಸಂತಸ ಹಾಗೂ ಸದೃಢತೆಯನ್ನು ಹೊಂದಲಿದ್ದು, ಸಾಕಷ್ಟು ಉತ್ಸಾಹದಿಂದ ಕೆಲಸ ಮಾಡಿ ಯಶಸ್ಸು ಗಳಿಸಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲವನ್ನು ಪಡೆಯಲಿದ್ದಾರೆ. ನೀವು ನಿಮ್ಮ ಹಿರಿಯರಿಂದ ಬೆಂಬಲ ಪಡೆಯಲಿದ್ದೀರಿ. ಹೀಗಾಗಿ ನಿಮ್ಮ ಕಾರ್ಯದಕ್ಷತೆಯು ಮಿಂಚಲಿದೆ. ವ್ಯಾಪಾರೋದ್ಯಮಿಗಳಿಗೆ ಈ ವಾರವು ಒಳ್ಳೆಯದು. ಆದರೆ ಇವರು ಯಾವುದೇ ಕಾನೂನು ಹೋರಾಟದಲ್ಲಿ ಸಿಲುಕಿ ಬೀಳಬಾರದು. ಈ ವಾರದಲ್ಲಿ ನೀವು ಕಾನೂನಿಗೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ಪಾಲ್ಗೊಳ್ಳಬಾರದು. ವೈವಾಹಿಕ ಬದುಕು ಸಾಮಾನ್ಯ ಮಟ್ಟದಲ್ಲಿರಲಿದ್ದು, ಹೊಸ ವಾರಕ್ಕೆ ಮುಂದುವರಿಯಲಿದೆ. ಪ್ರೇಮಿಗಳು ತಮ್ಮ ಡೇಟಿಂಗ್ ಸಂಗಾತಿಯನ್ನು ಮೆಚ್ಚಿಸಲು ಒಂದಷ್ಟು ಪ್ರಯತ್ನ ಮಾಡಬೇಕು. ಉತ್ತಮ ಫಲಿತಾಂಶ ಪಡೆಯುವುದಕ್ಕಾಗಿ ವಿದ್ಯಾರ್ಥಿಗಳು ಕಠಿಣ ಶ್ರಮ ಪಡಬೇಕು. ಪ್ರಯಾಣಕ್ಕೆ ಇದು ಸೂಕ್ತ ಸಮಯ.
ವೃಶ್ಚಿಕ: ವೃಶ್ಚಿಕ ರಾಶಿಯಲ್ಲಿ ಹುಟ್ಟಿದವರಿಗೆ ಹೊಸ ವಾರವು ಯುಕ್ತ ಸಮಯ ಎನಿಸಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಯಾವುದಾದರೂ ವಿಷಯದಲ್ಲಿ ನೀವು ಹಠಮಾರಿತನದ ಧೋರಣೆಯನ್ನು ತೋರಬಹುದು. ಇದು ನಿಮಗೆ ಒಳ್ಳೆಯದಲ್ಲ. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಕಾಲಕ್ರಮೇಣ ಕೋಪದ ಕಾರಣ ನೀವು ತಪ್ಪು ಹೆಜ್ಜೆಯನ್ನು ಇಡಬಹುದು. ಇದರಿಂದ ನೀವು ದೂರವಿರುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ವೈಯಕ್ತಿಕ ಬದುಕು ಸಮಸ್ಯೆಗೆ ಈಡಾಗಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ಅನುಕೂಲಕರ. ಉದ್ಯೋಗದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನೀವು ಸಹೋದ್ಯೋಗಿಯ ಜೊತೆ ಕೆಲಸ ಮಾಡಲಿದ್ದು, ನಿಮ್ಮ ಕೆಲಸದಲ್ಲಿ ಪ್ರಗತಿ ಉಂಟಾಗಲಿದೆ. ವ್ಯಾಪಾರಿಗಳು ಈ ವಾರದಲ್ಲಿ ಮಹತ್ವದ ಹೆಜ್ಜೆ ಇಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ವ್ಯಾಪಾರಕ್ಕೆ ವೇಗ ದೊರೆಯುತ್ತದೆ ಹಾಗೂ ಅವರು ತಮ್ಮ ಕೆಲಸವನ್ನು ಮುಂದುವರಿಸಲಿದ್ದಾರೆ. ವೃಶ್ಚಿಕ ರಾಶಿಯ ವಿದ್ಯಾರ್ಥಿಗಳಿಗೂ ಈ ವಾರವು ಒಳ್ಳೆಯದು. ನಿಮ್ಮ ಕಠಿಣ ಶ್ರಮವು ಉತ್ತಮ ಫಲಿತಾಂಶ ತರಲಿದೆ. ಪ್ರಯಾಣಿಸಲು ಇಚ್ಛಿಸುವವರು ಈ ಉದ್ದೇಶಕ್ಕಾಗಿ ವಾರದ ಮೊದಲಾರ್ಧವನ್ನು ಪರಿಗಣಿಸಬಹುದು.
ಧನು:ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ವೈವಾಹಿಕ ಜೀವನ ಸಂತಸದಿಂದ ಕೂಡಿರಲಿದೆ. ನಿಮ್ಮ ಜೀವನ ಸಂಗಾತಿಯನ್ನು ಸಂತೃಪ್ತಿಪಡಿಸಿ ಹಾಗೂ ಅವರಿಗೆ ಉಡುಗೊರೆಯನ್ನು ನೀಡುವ ಮೂಲಕ ಅವರ ಮನ ಗೆಲ್ಲಲಿದ್ದೀರಿ. ವಾರದ ಮಧ್ಯ ಭಾಗವು ಅಷ್ಟೊಂದು ಚೆನ್ನಾಗಿರದು. ಹೀಗಾಗಿ ಈ ಸಂದರ್ಭದಲ್ಲಿ ಯಾವುದೇ ದೊಡ್ಡ ಹೂಡಿಕೆಯನ್ನು ಮಾಡಬೇಡಿ. ಯಾವುದೇ ದೊಡ್ಡ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ. ವಾರದ ಕೊನೆಯ ದಿನಗಳಲ್ಲಿ ಅದೃಷ್ಟವು ನಿಮ್ಮ ನೆರವಿಗೆ ಬರಲಿದೆ. ಹಠಾತ್ ಆಗಿ ನಿಮಗೆ ಒಳ್ಳೆಯ ಕಾಮಗಾರಿ ಸಿಗುವುದರಿಂದ ನಿಮ್ಮ ವ್ಯವಹಾರದಲ್ಲಿ ಶೀಘ್ರ ಪ್ರಗತಿ ಕಾಣಿಸಿಕೊಳ್ಳಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ವಿವಾಹಿತರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ನಿಮ್ಮ ಸಂಬಂಧದಲ್ಲಿ ಅಂತರವು ಕಾಡಲಿದೆ. ಹೀಗಾಗಿ ನಿಮ್ಮ ನಡುವೆ ಯಾವುದೇ ಅಂತರ ಬರದಂತೆ ನೋಡಿಕೊಳ್ಳಿ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ನೀವು ವೈದ್ಯರ ನಿಗಾದಲ್ಲಿ ಇರುವುದು ಒಳ್ಳೆಯದು. ನೀವು ಅಧ್ಯಯನಕ್ಕೆ ಸಂಪೂರ್ಣ ಗಮನ ನೀಡಲಿದ್ದು, ಉತ್ತಮ ಅಂಕ ಗಳಿಸಲಿದ್ದೀರಿ. ರಜೆಯಲ್ಲಿ ಪ್ರವಾಸಕ್ಕೆ ಹೋಗಲು ಇಚ್ಛಿಸುವವರು ವಾರದ ಕೊನೆಗೆ ಪ್ರಯಾಣದ ಯೋಜನೆಯನ್ನು ರೂಪಿಸಬಹುದು.
ಮಕರ :ಮಕರ ರಾಶಿಯವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ವಾರದ ಆರಂಭದಲ್ಲಿ ಸಣ್ಣಪುಟ್ಟ ಖರ್ಚು ಉಂಟಾಗಬಹುದು. ವಾರದ ಮಧ್ಯ ಭಾಗದಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಕಾಲ ಕಳೆಯಬಹುದು. ವಾರದ ಕೊನೆಯ ದಿನಗಳಲ್ಲಿ ನಿಮ್ಮ ಮಾನಸಿಕ ಒತ್ತಡ ಹೆಚ್ಚಬಹುದು. ಅನಗತ್ಯ ಖರ್ಚುವೆಚ್ಚಗಳು ನಿಮ್ಮನ್ನು ಕಾಡಬಹುದು. ನಿಮ್ಮ ಮನಸ್ಸಿನಲ್ಲಿರುವ ಅನೇಕ ವಿಚಾರಗಳ ಕುರಿತು ನಿಮಗೆ ಕೋಪ ಉಂಟಾಗಬಹುದು. ಉದ್ಯೋಗದಲ್ಲಿರುವ ವೃತ್ತಿಪರರಿಗೆ ಈ ವಾರವು ಒಳ್ಳೆಯದು. ಏಕೆಂದರೆ ಇವರ ಪ್ರಯತ್ನಕ್ಕೆ ತಕ್ಕುದಾದ ಫಲ ದೊರೆಯಲಿದೆ. ಈ ವಾರದಲ್ಲಿ ವ್ಯಾಪಾರೋದ್ಯಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ವಿವಾಹಿತ ವ್ಯಕ್ತಿಗಳು ಹೆಚ್ಚು ಒತ್ತಡಕ್ಕೆ ಒಳಗಾಗಬಹುದು. ಪ್ರೇಮಿಗಳು ತಮ್ಮ ಸಂಗಾತಿಯೊಂದಿಗೆ ಚೆನ್ನಾಗಿ ಸಮಯ ಕಳೆಯಲಿದ್ದಾರೆ. ಅಧ್ಯಯನಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶ ಪಡೆಯುವುದಕ್ಕಾಗಿ ವಿದ್ಯಾರ್ಥಿಗಳು ಹೆಚ್ಚಿನ ಗಮನ ನೀಡಬೇಕು.
ಕುಂಭ :ಕುಂಭ ರಾಶಿಯವರಿಗೆ ಸವಾಲಿನ ಸಮಯವಿದು. ನಿಮ್ಮ ಖರ್ಚುವೆಚ್ಚಗಳಿಗೆ ನೀವು ಸಾಕಷ್ಟು ಗಮನ ನೀಡಬೇಕು. ಏಕೆಂದರೆ ಇದು ನಿಮ್ಮ ಕೈ ಮೀರಿ ಹೋಗಬಹುದು ಹಾಗೂ ನಿಮ್ಮ ಚಿಂತೆಗೆ ಕಾರಣವಾಗಬಹುದು. ಆರೋಗ್ಯದಲ್ಲಿ ಒಂದಷ್ಟು ಸಮಸ್ಯೆ ಎದುರಾಗಬಹುದು. ನಿಮ್ಮಲ್ಲಿ ಜ್ವರ, ತಲೆನೋವು, ಕಾಲುಗಳಲ್ಲಿ ನೋವು, ಗಂಟು ನೋವು ಅಥವಾ ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ಹೇಳುವುದಾದರೆ ನಿಮ್ಮ ಆದಾಯವು ಸ್ಥಿರವಾಗಿರಲಿದೆ. ಹೀಗಾಗಿ ನೀವು ಹಣಕಾಸಿನ ನಿರ್ವಹಣೆಗೆ ಗಮನ ನೀಡಬೇಕು. ಕುಂಭ ರಾಶಿಯ ವೃತ್ತಿಪರರಿಗೆ ಈ ದಿನಗಳು ಉತ್ತಮ ಫಲಿತಾಂಶ ನೀಡಲಿವೆ. ವ್ಯಾಪಾರೋದ್ಯಮಿಗಳು ಅಲ್ಪ ಪ್ರಮಾಣದ ಲಾಭಕ್ಕೆ ತೃಪ್ತಿ ಪಡಬೇಕಾಗುತ್ತದೆ. ನಿಮ್ಮ ವ್ಯವಹಾರವನ್ನು ನೀವು ದೂರದ ಪ್ರದೇಶಗಳಿಗೆ ಅಥವಾ ರಾಜ್ಯಗಳಿಗೆ ವಿಸ್ತರಿಸಿದರೆ ನೀವು ಉತ್ತಮ ಲಾಭವನ್ನು ಗಳಿಸಬಹುದು. ವಿವಾಹಿತರಿಗೆ ಒಂದಷ್ಟು ಚಿಂತೆ ಕಾಡಬಹುದು. ಆದರೆ ಪರಸ್ಪರ ಅರ್ಥೈಸುವಿಕೆಯು ನಿಮ್ಮನ್ನು ಸವಾಲುಗಳಿಂದ ರಕ್ಷಿಸುತ್ತದೆ. ಕುಂಭ ರಾಶಿಯ ಪ್ರೇಮಿಗಳು ಈ ವಾರದಲ್ಲಿ ಪ್ರೇಮ ಮತ್ತು ಪ್ರಣಯವನ್ನು ಸಂಪೂರ್ಣವಾಗಿ ಅನುಭವಿಸಲಿದ್ದಾರೆ. ನಿಮ್ಮ ಪ್ರೇಮದ ಬದುಕನ್ನು ಸಂಪೂರ್ಣವಾಗಿ ಆನಂದಿಸಲಿದ್ದೀರಿ. ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಗಮನ ನೀಡಲಿದ್ದಾರೆ. ಧನಾತ್ಮಕ ಫಲಿತಾಂಶ ಪಡೆಯುವುದಕ್ಕಾಗಿ ನೀವು ಶಿಕ್ಷಣದಲ್ಲಿ ಗಂಭೀರ ಪ್ರಯತ್ನ ಮಾಡಲಿದ್ದೀರಿ. ವಾರಾಂತ್ಯದಲ್ಲಿ ಪ್ರಯಾಣಕ್ಕೆ ಹೋಗಬಹುದು.
ಮೀನ: ಹೊಸ ವಾರಕ್ಕೆ ಪ್ರವೇಶಿಸುವಾಗ ಮೀನ ರಾಶಿಯವರು ಅನುಕೂಲಕರ ಸಮಯವನ್ನು ಆನಂದಿಸಲಿದ್ದಾರೆ. ವೃತ್ತಿಪರ ಉದ್ಯೋಗಿಗಳು ತಮ್ಮ ಕೆಲಸದ ಕುರಿತು ಸಂಪೂರ್ಣ ಪ್ರಾಮಾಣಿಕತೆ ತೋರಿಸಿ ಈ ವಿಚಾರದಲ್ಲಿ ಸಂಪೂರ್ಣ ಗಮನ ನೀಡಲಿದ್ದಾರೆ. ವಾರದ ಮಧ್ಯ ಭಾಗದಲ್ಲಿ ಚಾಲ್ತಿಯಲ್ಲಿರುವ ನಿಮ್ಮ ಕೆಲಸಕ್ಕೆ ಹೆಚ್ಚು ಗಮನ ನೀಡಬೇಕು. ಮೀನ ರಾಶಿಯ ವ್ಯಾಪಾರೋದ್ಯಮಿಗಳು ತಮ್ಮ ಕೆಲಸದ ಕುರಿತು ಆತ್ಮವಿಶ್ವಾಸ ಹೊಂದಲಿದ್ದು, ವ್ಯವಹಾರವನ್ನು ಮುನ್ನಡೆಸಲು ತಮ್ಮ ದಕ್ಷ ನಾಯಕತ್ವವನ್ನು ತೋರಲಿದ್ದಾರೆ. ವಿವಾಹಿತರು ತಮ್ಮ ವೈಯಕ್ತಿಕ ಬದುಕಿನಲ್ಲಿ ಮಾನಸಿಕ ನಿರಾಳತೆ ಅನುಭವಿಸಲಿದ್ದಾರೆ. ಮೀನ ರಾಶಿಯ ಪ್ರೇಮಿಗಳು, ಸಂವಹನದ ಕೊರತೆಯನ್ನು ಸರಿದೂಗಿಸುವುದಕ್ಕಾಗಿ ತಮ್ಮ ಪ್ರೇಮಿಯ ಜೊತೆ ಪರಸ್ಪರ ಅರ್ಥೈಸುವಿಕೆಯನ್ನು ಬೆಳೆಸಿಕೊಳ್ಳಲಿದ್ದಾರೆ. ಮೀನ ರಾಶಿಯಲ್ಲಿ ಹುಟ್ಟಿದ ವಿದ್ಯಾರ್ಥಿಗಳು ತಮ್ಮ ವೃತ್ತಿ ಪಥದಲ್ಲಿ ಒಂದಷ್ಟು ಸಮಸ್ಯೆಗಳನ್ನು ಎದುರಿಸಬಹುದು. ನೀವು ಅಧ್ಯಯನದಲ್ಲಿ ಆಸಕ್ತಿ ತೋರಿದರೂ ಒಂದಷ್ಟು ಅಡೆತಡೆಗಳು ನಿಮ್ಮನ್ನು ಕಾಡಬಹುದು. ವಾರದ ಮೊದಲ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಈ ವಾರದಲ್ಲಿ ನೀವು ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬಹುದು.