ಕರ್ನಾಟಕ

karnataka

ETV Bharat / bharat

Weekly Horoscope: ಯಾವ ರಾಶಿಯವರಿಗೆ ಒಳಿತು-ಕೆಡಕು.. ಇಲ್ಲಿದೆ ಈ ವಾರದ ಭವಿಷ್ಯ - ವಾರದ ರಾಶಿ ಭವಿಷ್ಯ

ಈ ವಾರದ ರಾಶಿ ಭವಿಷ್ಯ ಹೀಗಿದೆ ನೋಡಿ..

Weekly Horoscope
ವಾರದ ಭವಿಷ್ಯ

By

Published : Dec 12, 2021, 6:03 AM IST

ಮೇಷ:ವಾರದ ಆರಂಭಿಕ ದಿನಗಳು ನಿಮಗೆ ಒಟ್ಟಾರೆ ಉತ್ತಮ ಫಲವನ್ನು ನೀಡಲಿವೆ. ನಿಮ್ಮ ವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ ಹಾಗೂ ಇದನ್ನು ನಿಯಂತ್ರಿಸುವುದು ನಿಮ್ಮ ಪಾಲಿಗೆ ಕಷ್ಟಕರವೆನಿಸಲಿದೆ. ಅನಗತ್ಯ ಖರ್ಚುವೆಚ್ಚಗಳು ನಿಮ್ಮನ್ನು ತೊಂದರೆಗೆ ಒಡ್ಡಬಹುದು. ಇದು ನಿಮ್ಮ ಆರೋಗ್ಯವನ್ನೂ ಕೆಡಿಸಬಹುದು. ಯಾವುದೇ ವಾಹನ ಅಪಘಾತದ ಕುರಿತು ನೀವು ಎಚ್ಚರಿಕೆ ವಹಿಸಬೇಕು. ವಾಹನ ಚಲಾಯಿಸುವಾಗ ನೀವು ಟ್ರಾಫಿಕ್‌ ನಿಯಮಗಳನ್ನು ಅನುಸರಿಸಬೇಕು. ಯಾವುದೇ ಗುಳ್ಳೆ, ಮೊಡವೆ ಅಥವಾ ಅಧಿಕ ಜ್ವರವು ನಿಮ್ಮ ಚಿಂತೆಗೆ ಕಾರಣವೆನಿಸಬಹುದು. ನಿಮ್ಮ ವೈವಾಹಿಕ ಬದುಕಿನಲ್ಲಿ ಇನ್ನಷ್ಟು ಪ್ರೇಮ ಉಕ್ಕಿ ಬರಬಹುದು. ನಿಮಗೆ ಇಷ್ಟವಾಗದ ಯಾವುದೇ ವಿಚಾರವನ್ನು ನಿಮ್ಮ ಪ್ರೇಮಿಯು ಮಾಡಬಹುದು. ಇದು ನೀವು ಮತ್ತು ನಿಮ್ಮ ಪ್ರೇಮಿಯ ನಡುವಿನ ಅಂತರವನ್ನು ಹೆಚ್ಚಿಸಲಿದೆ. ಆದರೆ ಇದು ತಪ್ಪು ಗ್ರಹಿಕೆ ಮಾತ್ರವೇ ಆಗಿದ್ದು ಕಾಲ ಕಳೆದಂತೆ ನೀವು ಇದನ್ನು ಬಗೆಹರಿಸಲಿದ್ದೀರಿ. ಕೆಲಸದಲ್ಲಿ ನೀವು ಅದ್ಭುತ ಅನುಭವ ಪಡೆಯಲಿದ್ದೀರಿ. ಆದರೆ ನೀವು ವ್ಯಾಪಾರೋದ್ಯಮಿ ಆಗಿದ್ದರೆ ಅನಗತ್ಯವಾಗಿ ಮಾತನಾಡಿ ನಿಮ್ಮ ಮತ್ತು ಇತರರ ಸಮಯವನ್ನು ಹಾಳು ಮಾಡಬೇಡಿ.

ವೃಷಭ:ಈ ವಾರವು ನಿಮಗೆ ಉತ್ತಮ ಫಲಿತಾಂಶಗಳನ್ನು ತರಲಿದೆ ಹಾಗೂ ಚಿಂತೆಗಳನ್ನು ದೂರ ಮಾಡಲಿದೆ. ನಿಮ್ಮ ಜೀವನ ಸಂಗಾತಿಯ ಆರೋಗ್ಯದಲ್ಲಿ ಮತ್ತೆ ಸುಧಾರಣೆ ಉಂಟಾಗಲಿದೆ ಹಾಗೂ ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸ ಕಾಣಿಸಿಕೊಳ್ಳಲಿದೆ. ಇದರ ನಂತರ ನಿಮ್ಮ ಸಂಗಾತಿಯು ನಿಮ್ಮ ಪರ ಕೃತಜ್ಞತೆಯ ಭಾವನೆಯನ್ನು ವ್ಯಕ್ತಪಡಿಸಲಿದ್ದಾರೆ. ನಿಮ್ಮ ಹೆಚ್ಚಿನ ಸಮಯವು ನಿಮ್ಮ ನೆಚ್ಚಿನ ಸಂಗಾತಿಯ ಸೌಂದರ್ಯವನ್ನು ಹೊಗಳುವುದರಲ್ಲೇ ಕಳೆದು ಹೋಗಲಿದೆ. ಪ್ರೇಮಿಗಳಿಗೂ ಇದು ಸಕಾಲ. ವ್ಯವಹಾರದಲ್ಲಿ ನಿಮಗೆ ಅತ್ಯುತ್ತಮ ಫಲಿತಾಂಶ ದೊರೆಯಲಿದೆ ಮತ್ತು ಸರ್ಕಾರಿ ಗುತ್ತಿಗೆಗಳನ್ನು ಪಡೆಯುವುದರಲ್ಲಿಯೂ ನಿಮಗೆ ಯಶಸ್ಸು ದೊರೆಯಲಿದೆ. ಸರ್ಕಾರಿ ಕೆಲಸಕ್ಕೆ ನೀವು ಟೆಂಡರ್‌ ನೀಡಿದ್ದರೆ ಇದು ಯಶಸ್ವಿಯಾಗಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ. ಆದರೆ ನೀವು ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಬೇಕು.

ಮಿಥುನ:ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ ಪಡೆಯುವ ಸಾಧ್ಯತೆಗಳಿವೆ. ನೀವು ಯಾರಾದರೂ ವ್ಯಕ್ತಿಯ ಜೊತೆಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಇಚ್ಛಿಸಿದ್ದಲ್ಲಿ, ಈ ವಾರವು ನಿಮ್ಮ ಪಾಲಿಗೆ ಉತ್ತಮ ವಾರ ಎನಿಸಲಿದೆ. ಉದ್ಯೋಗದಲ್ಲಿರುವವರು ತಮ್ಮ ಹಿರಿಯರಿಂದ ಬೆಂಬಲ ಪಡೆಯಲಿದ್ದಾರೆ. ಪ್ರೇಮಿಗಳಿಗೆ ಇದು ಸಕಾಲ. ಅವರು ತಮ್ಮ ಪ್ರೇಮ ಬದುಕನ್ನು ಆನಂದಿಸುವುದರಲ್ಲಿ ಮಗ್ನರಾಗಬೇಕು. ವಿವಾಹಿತ ಜೋಡಿಗಳ ವಿಚಾರದಲ್ಲಿ ಹೇಳುವುದಾದರೆ, ಈ ವಾರದಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಒಂದಷ್ಟು ಹೊಸ ತಿರುವುಗಳು ಕಾಣಿಸಿಕೊಳ್ಳಲಿವೆ. ನಿಮ್ಮ ಸಂಗಾತಿಯು ಒಂದಷ್ಟು ಅಸಹನೆಯನ್ನು ತೋರಬಹುದು ಮತ್ತು ಕಠಿಣ ಶಬ್ದಗಳಲ್ಲಿ ಅವರ ವಿಚಾರವನ್ನು ಒಪ್ಪಿಕೊಳ್ಳಲು ನಿಮ್ಮನ್ನು ಕೇಳಬಹುದು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ ಹಾಗೂ ಪ್ರತಿ ಸವಾಲನ್ನು ಕೂಡಾ ಧೈರ್ಯದಿಂದ ಎದುರಿಸಲು ನಿಮಗೆ ಸಾಧ್ಯವಾಗಲಿದೆ. ವಿರೋಧಿಗಳ ಕುರಿತು ನೀವು ಹೆದರುವ ಅಗತ್ಯವೇ ಇಲ್ಲ. ವಾರದ ಕೊನೆಯ ಭಾಗವು ಪ್ರವಾಸಕ್ಕೆ ಹೋಗಲು ಅನುಕೂಲಕರ.

ಕರ್ಕಾಟಕ: ಈ ವಾರವು ನಿಮಗೆ ಹಣಕಾಸಿನ ಸ್ಥಿರತೆಯನ್ನು ಒದಗಿಸಲಿದೆ. ನಿಮ್ಮ ಕೆಲಸದ ಹೊರೆಯೂ ಹೆಚ್ಚಲಿದೆ. ನಿಮ್ಮ ಪ್ರೀತಿಪಾತ್ರರು ಮತ್ತು ಕುಟುಂಬದ ಸದಸ್ಯರಿಗೆ ಸಮಯ ಮೀಸಲಿಡಲು ನಿಮಗೆ ಸಾಧ್ಯವಾಗದು. ಹೊಸ ಜನರು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ. ಇದು ನಿಮ್ಮ ಸಾಮಾಜಿಕ ವರ್ತುಲವನ್ನು ವೃದ್ಧಿಸಲಿದೆ. ನಿಮ್ಮ ತಂದೆ, ಹಿರಿಯರು ಅಥವಾ ಅಧಿಕಾರಿಗಳ ಜೊತೆ ಮಾತನಾಡುವಾಗ ಗೌರವದಿಂದ ಮಾತನಾಡಿ. ವಾರದ ನಂತರದ ದಿನಗಳಲ್ಲಿ ನೀವು ಸಮಯವನ್ನು ಧಾರ್ಮಿಕ ಕೆಲಸದಲ್ಲಿ ಕಳೆಯಬಹುದು. ವಾರದ ಕೊನೆಯ ಭಾಗದಲ್ಲಿ ವಿದ್ಯಾರ್ಥಿಗಳು ಕಠಿಣ ಶ್ರಮ ತೋರಬೇಕು. ವಾರದ ಮಧ್ಯ ಭಾಗದಲ್ಲಿ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಇದೇ ವೇಳೆ ಒತ್ತಡವು ನಿಮ್ಮ ನಿದ್ದೆಗೆ ಭಂಗ ತರಬಹುದು. ನಿಮ್ಮ ದಿನನಿತ್ಯದ ಕೆಲಸದಲ್ಲಿ ನೀವು ಶಿಸ್ತನ್ನು ಪಾಲಿಸಬೇಕು. ವಾರದ ಕೊನೆಗೆ ಕೆಲಸದ ಒತ್ತಡ ತಗ್ಗಿಸಲು ಯತ್ನಿಸಿ. ಏಕೆಂದರೆ ಕೆಲಸದ ಒತ್ತಡದ ಕಾರಣ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿಕೆಗೆ ಈಡಾಗಬಹುದು.

ಸಿಂಹ:ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮಗೆ ಹೊಸ ವ್ಯವಹಾರ ಅವಕಾಶಗಳು ಲಭಿಸಬಹುದು ಹಾಗೂ ಇದರಿಂದಾಗಿ ನಿಮ್ಮ ವ್ಯವಹಾರದಲ್ಲಿ ಪ್ರಗತಿ ಉಂಟಾಗಬಹುದು. ನಿಮ್ಮ ಆದಾಯದಲ್ಲೂ ಹೆಚ್ಚಳ ಉಂಟಾಗಲಿದೆ. ನಿಮ್ಮ ಖರ್ಚುವೆಚ್ಚಗಳಲ್ಲಿಯೂ ಅನಿರೀಕ್ಷಿತವಾಗಿ ಇಳಿಕೆ ಉಂಟಾಗಲಿದೆ. ಇದು ನಿಮ್ಮ ಪಾಲಿಗೆ ದೊಡ್ಡ ಮಟ್ಟದ ಸಾಂತ್ವನ ಎನಿಸಲಿದೆ. ಉದ್ಯೋಗದಲ್ಲಿರುವವರು ಈ ಸಮಯದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಿಮ್ಮ ವಿರುದ್ಧ ಯಾರಾದರೂ ಫಿತೂರಿ ಹೂಡುವ ಸಾಧ್ಯತೆ ಇರುವುದರಿಂದ ನೀವು ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ನಿಮ್ಮ ಕುಟುಂಬದಲ್ಲಿ, ವಿಶೇಷವಾಗಿ ನಿಮ್ಮ ತಾಯಿಯ ಆರೋಗ್ಯ ಹದಗೆಡುವ ಕಾರಣ ನಿಮಗೆ ತೊಂದರೆ ಉಂಟಾಗಲಿದೆ. ನಿಮ್ಮ ವಿವಾಹಿತ ಬದುಕು ಚೆನ್ನಾಗಿರಲಿದೆ. ನೀವು ನಿಮ್ಮ ಜೀವನ ಸಂಗಾತಿಯಿಂದ ಅನೇಕ ವಿಷಯಗಳನ್ನು ಕಲಿಯಲಿದ್ದೀರಿ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ ಹಾಗೂ ನೀವು ಕೆಲಸದಲ್ಲಿ ಯಶಸ್ಸು ಗಳಿಸಲಿದ್ದೀರಿ. ವಿದ್ಯಾರ್ಥಿಗಳ ಪಾಲಿಗೆ ಈ ವಾರವು ಚೆನ್ನಾಗಿರಲಿದೆ. ಈ ವಾರವು ಪ್ರಯಾಣಿಸಲು ಅನುಕೂಲಕರವಲ್ಲ.

ಕನ್ಯಾ: ಇದು ನಿಮ್ಮ ಪಾಲಿಗೆ ಹೆಚ್ಚಿನ ಕೆಲಸದ ವಾರ ಎನಿಸಲಿದೆ. ವಾರದ ಆರಂಭದಲ್ಲಿ ನಿಮ್ಮ ವ್ಯವಹಾರದ ಕುರಿತು ಧನಾತ್ಮಕ ಕಂಪನಗಳನ್ನು ಅನುಭವಿಸಲಿದ್ದೀರಿ. ನೀವು ಹೊಸ ಹೆಜ್ಜೆಗಳನ್ನು ಇಡಲಿದ್ದು ಇದು ವ್ಯವಹಾರದಲ್ಲಿ ನಿಮಗೆ ಲಾಭ ತಂದು ಕೊಡಲಿದೆ. ನಿಮ್ಮ ಆತ್ಮವಿಶ್ವಾಸವು ವೃದ್ಧಿಸಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ ಹಾಗೂ ಮುಂದುವರಿದು ಹೊಸ ಕೆಲಸಕ್ಕೆ ಕೈ ಹಾಕಲಿದ್ದಾರೆ. ಉತ್ತಮ ಸಾಧನೆಯ ಮೂಲಕ ಹಿರಿಯರನ್ನು ಸಂತೃಪ್ತಗೊಳಿಸಲಿದ್ದಾರೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ನೀವು ನಿಮ್ಮ ಕುಟುಂಬದ ಸದಸ್ಯರನ್ನು ತೃಪ್ತಿಪಡಿಸಲು ನೀವು ಯತ್ನಿಸಲಿದ್ದೀರಿ. ನಿಮ್ಮ ಸಂಬಂಧವು ವೃದ್ಧಿಸಲಿದೆ. ವಿವಾಹಿತ ವ್ಯಕ್ತಿಗಳು ಬದುಕನ್ನು ಆನಂದಿಸಲಿದ್ದಾರೆ. ನಿಮ್ಮ ಸಂಗಾತಿಯೊಂದಿಗೆ ಬದುಕಿನ ಎಲ್ಲಾ ಸಂತಸವನ್ನು ನೀವು ಆನಂದಿಸಲಿದ್ದೀರಿ. ವಾರದ ಆರಂಭಿಕ ಮತ್ತು ಕೊನೆಯ ದಿನಗಳು ಪ್ರಯಾಣಿಸಲು ಅನುಕೂಲಕರ.

ತುಲಾ:ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ತಪ್ಪುಗಳ ಕುರಿತು ನೀವು ಗಮನ ಹರಿಸಲಿದ್ದೀರಿ. ಏಕೆಂದರೆ ಈ ತಪ್ಪುಗಳು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಬಹುದು. ಹೀಗಾಗಿ ಎಚ್ಚರಿಕೆ ವಹಿಸಿ. ಅನಗತ್ಯವಾಗಿ ನಿಮ್ಮ ಹಣದ ಹೂಡಿಕೆ ಮಾಡಬೇಡಿ ಹಾಗೂ ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ಕುಟುಂಬವನ್ನು ಕಾಡುತ್ತಿರುವ ಸಮಸ್ಯೆಗಳನ್ನು ದೂರ ಮಾಡಲು ಯತ್ನಿಸಿ. ಎಚ್ಚರಿಕೆಯಿಂದ ಮುಂದುವರಿಯಿರಿ. ನಿಮಗೆ ಯಶಸ್ಸು ದೊರೆಯಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕಾರ್ಯಗಳ ಕುರಿತು ಕಾಳಜಿ ವಹಿಸಬೇಕು. ವ್ಯಾಪಾರೋದ್ಯಮಿಗಳು ತಮ್ಮ ಕೆಲಸದಲ್ಲಿ ಶಿಸ್ತಿನಿಂದ ಮುಂದುವರಿಯಬೇಕು. ಈ ವಾರವು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ತರಲಿದೆ. ಪ್ರೇಮಿಗಳು ತಮ್ಮ ಪ್ರೇಮದ ಬದುಕನ್ನು ಆನಂದಿಸಲಿದ್ದಾರೆ. ವಿವಾಹಿತ ಜೋಡಿಗಳು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಜೀವನ ಸಂಗಾತಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ನಿಮ್ಮ ಜಂಜಾಟದ ಬದುಕಿನಲ್ಲಿ ಅವರಿಗಾಗಿ ಒಂದಷ್ಟು ಸಮಯವನ್ನು ನೀವು ಮೀಸಲಿಡಬೇಕಾದೀತು.

ವೃಶ್ಚಿಕ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನೀವು ನಿಮ್ಮ ಅಧ್ಯಯನವನ್ನು ಆನಂದಿಸಲಿದ್ದೀರಿ ಹಾಗೂ ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ವಾರದ ಮಧ್ಯ ಭಾಗದಲ್ಲಿ ನೀವು ಬ್ಯಾಂಕಿನಿಂದ ಸಾಲ ಪಡೆಯಬಹುದು ಹಾಗೂ ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ವಾರದ ಕೊನೆಯ ದಿನಗಳಲ್ಲಿ ನೀವು ನಿಮ್ಮ ವೈಯಕ್ತಿಕ ಬದುಕನ್ನು ಆನಂದಿಸಲಿದ್ದೀರಿ. ನಿಮ್ಮ ವೈವಾಹಿಕ ಜೀವನವು ಚೆನ್ನಾಗಿರಲಿದೆ. ಒಂದಷ್ಟು ಸವಾಲುಗಳು ಎದುರಾಗಬಹುದು. ಆದರೆ ಅವುಗಳನ್ನು ಮೀರಿ ಹೇಗೆ ಮುಂದುವರಿಯಬೇಕು ಎನ್ನುವುದು ನಿಮಗೆ ತಿಳಿದಿದೆ. ಪ್ರೇಮಿಗಳು ಸಂತಸದಿಂದ ಕಾಲ ಕಳೆಯಲಿದ್ದಾರೆ ಹಾಗೂ ನಿಮ್ಮ ಪ್ರೇಮ ಬದುಕು ತುಂಬಾ ಚೆನ್ನಾಗಿರಲಿದೆ. ಉದ್ಯೋಗಿಗಳು ತಮ್ಮ ವೃತ್ತಿಯಲ್ಲಿ ಉತ್ತಮ ಲಾಭ ಗಳಿಸಲಿದ್ದಾರೆ. ವ್ಯಾಪಾರೋದ್ಯಮಿಗಳು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಇದರಿಂದಾಗಿ ನಿಮಗೆ ಸಾಕಷ್ಟು ನಿರಾಳತೆ ಒದಗಿ ಬರಲಿದೆ. ನಿಮ್ಮ ಗೆಳೆಯರ ಜೊತೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗಬಹುದು.

ಧನು: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ನಿಮ್ಮ ಮನೆಯ ಅಗತ್ಯತೆಗಳಿಗೆ ನೀವು ಹೆಚ್ಚಿನ ಗಮನ ನೀಡಲಿದ್ದೀರಿ. ನೀವು ಸಾಕಷ್ಟು ಭಾವುಕತೆಗೆ ಒಳಗಾಗಬಹುದು. ನಿಮ್ಮ ತಾಯಿಗೆ ನೀವು ಸಾಕಷ್ಟು ಪ್ರೀತಿ ಹಾಗೂ ವಾತ್ಸಲ್ಯ ತೋರಲಿದ್ದೀರಿ. ಈ ವಾರವು ಉದ್ಯೋಗಿಗಳ ಪಾಲಿಗೆ ಉತ್ತಮ ಫಲ ನೀಡಲಿದೆ. ನಿಮ್ಮ ಕೆಲಸದ ಮೇಲೆ ಹಿಡಿತ ಸಾಧಿಸಲಿದ್ದೀರಿ. ವ್ಯಾಪಾರೋದ್ಯಮಿಗಳು ಸಹ ಒಳ್ಳೆಯ ಪ್ರಗತಿ ಸಾಧಿಸಲಿದ್ದಾರೆ. ನಿಮ್ಮ ಕೌಟುಂಬಿಕ ಜೀವನವು ಚೆನ್ನಾಗಿರಲಿದೆ. ಪ್ರೇಮಿಗಳು ಒಂದಷ್ಟು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಜ್ವರ ಮತ್ತು ಋತುಮಾನಕ್ಕೆ ಸಂಬಂಧಿಸಿದ ರೋಗಗಳಿಂದ ದೂರವಿರಿ. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಮಕರ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಆದಾಯದಲ್ಲಿ ಸಾಕಷ್ಟು ಹೆಚ್ಚಳ ಉಂಟಾಗಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಇದು ನಿಮ್ಮ ಪಾಲಿಗೆ ದೊಡ್ಡ ಮಟ್ಟದ ನಿರಾಳತೆ ಒದಗಿಸಲಿದೆ. ನಿಮ್ಮ ವ್ಯಕ್ತಿತ್ವದಲ್ಲಿ ಸುಧಾರಣೆ ಕಂಡುಬರಲಿದೆ. ನಿಮ್ಮ ವ್ಯಕ್ತಿತ್ವದಲ್ಲಿ ಪ್ರೀತಿ ಹೆಚ್ಚಲಿದೆ. ಜನರು ನಿಮ್ಮಿಂದ ಪ್ರಭಾವಿತರಾಗಲಿದ್ದಾರೆ. ನಿಮ್ಮ ಕುಟುಂಬದ ಸಂಪತ್ತಿನಲ್ಲಿ ಹೆಚ್ಚಳ ಉಂಟಾಗಲಿದೆ. ನೀವು ನಿಮ್ಮ ಕುಟುಂಬದ ಸದಸ್ಯರ ಸಹಕಾರ ಪಡೆಯಲಿದ್ದೀರಿ. ನಿಮ್ಮ ಕೆಲಸದಲ್ಲಿ ಏರುಪೇರು ಉಂಟಾಗಬಹುದು. ಆದರೂ ನಿಮ್ಮ ಕೆಲಸದಲ್ಲಿ ಸಂತುಲನ ಕಾಪಾಡುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ಕಾಲವು ವ್ಯಾಪಾರೋದ್ಯಮಿಗಳಿಗೆ ಒಳ್ಳೆಯದು. ಪ್ರೇಮಿಗಳು ಪರಸ್ಪರ ಅರಿತುಕೊಳ್ಳಲು ಯತ್ನಿಸಬೇಕು. ವಿವಾಹಿತ ಜೋಡಿಗಳು ತಮ್ಮ ಕಠಿಣ ಶ್ರಮ ಮತ್ತು ಪ್ರಯತ್ನದ ಮೂಲಕ ಯಶಸ್ಸು ಸಾಧಿಸಲಿದ್ದಾರೆ. ನಿಮ್ಮ ಸಂಗಾತಿಯು ನಿಮ್ಮ ಹೃದಯವನ್ನು ಗೆಲ್ಲಲು ಎಲ್ಲಾ ಪ್ರಯತ್ನ ಮಾಡಲಿದ್ದಾರೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಕುಂಭ:ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನೀವು ಉತ್ತಮ ಆಹಾರವನ್ನು ಆನಂದಿಸಲಿದ್ದೀರಿ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ ಹಾಗೂ ನೀವು ಆರಾಮದಾಯಕ ಬದುಕನ್ನು ಸಾಗಿಸಲಿದ್ದೀರಿ. ಕೆಲವು ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಆದರೆ ಇದೆಲ್ಲವೂ ನಿಮ್ಮ ಒಳಿತಿಗಾಗಿಯೇ ನಡೆಯಲಿದೆ. ಹೀಗಾಗಿ ನೀವು ಅವುಗಳ ಕುರಿತು ಚಿಂತಿಸುವ ಅಗತ್ಯವಿಲ್ಲ. ಆದಾಯವು ಚೆನ್ನಾಗಿರಲಿದೆ. ವ್ಯಾಪಾರೋದ್ಯಮಿಗಳಿಗೆ ಇದು ಸಕಾಲ. ಉದ್ಯೋಗದಲ್ಲಿರುವವರಿಗೆ ಇದು ಸವಾಲಿನ ಸಮಯ. ಈ ಅವಕಾಶವನ್ನು ನೀವು ಚೆನ್ನಾಗಿ ಬಳಸಿಕೊಳ್ಳಬೇಕು. ಅಲ್ಲದೆ ನಿಮ್ಮ ಬಾಸ್ ಜೊತೆಗೆ ನೀವು ಉತ್ತಮ ಸಂಬಂಧವನ್ನು ಆನಂದಿಸಲಿದ್ದೀರಿ. ಕಾರ್ಯಸ್ಥಳದಲ್ಲಿ ನೀವು ಹೊಸ ಸೌಲಭ್ಯ ಅಥವಾ ಅಧಿಕಾರ ಪಡೆಯಲಿದ್ದೀರಿ. ವಿವಾಹಿತ ಜೋಡಿಗಳಿಗೆ ಸವಾಲಿನ ಪರಿಸ್ಥಿತಿ ಎದುರಾಗಲಿದೆ. ಹೀಗಾಗಿ ನೀವು ಎಚ್ಚರಿಕೆ ವಹಿಸಬೇಕು ಮತ್ತು ಸಹನೆಯಿಂದ ಕೆಲಸ ಮಾಡಬೇಕು. ಪ್ರೇಮಿಗಳಿಗೆ ಇದು ಸಕಾಲ. ವಾರದ ಮಧ್ಯ ಭಾಗದಲ್ಲಿ ನೀವು ಪ್ರಯಾಣಿಸಬಹುದು.

ಮೀನ:ಈ ವಾರ ನಿಮಗೆ ಅದ್ಭುತ ವಾರ ಎನಿಸಲಿದೆ. ನೀವು ಆತ್ಮವಿಮರ್ಶೆ ಮಾಡಲಿದ್ದು ನೀವು ಮಾಡಿರುವ ತಪ್ಪುಗಳನ್ನು ಅರಿತುಕೊಳ್ಳಲಿದ್ದೀರಿ ಹಾಗೂ ಆ ತಪ್ಪುಗಳಿಂದ ಏನನ್ನು ಕಲಿತಿದ್ದೀರಿ ಎಂಬುದನ್ನು ತಿಳಿದುಕೊಳ್ಳಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ತಮ್ಮ ಕೆಲಸಕಾರ್ಯಗಳಲ್ಲಿ ಅದ್ಭುತ ಪ್ರಯೋಜನ ದೊರೆಯಲಿದೆ. ನೀವು ವ್ಯಾಪಾರೋದ್ಯಮಿ ಆಗಿದ್ದರೆ, ನಿಮ್ಮ ವ್ಯವಹಾರವನ್ನು ಬಲಪಡಿಸುವುದಕ್ಕಾಗಿ ನೀವು ಹೊಸ ಕಾರ್ಯತಂತ್ರಗಳಿಗೆ ಕೈ ಹಾಕಬಹುದು. ಉತ್ತಮ ಮಾರ್ಕೆಟಿಂಗ್‌ ಕಾರ್ಯತಂತ್ರವನ್ನು ಅಳವಡಿಸುವ ಮೂಲಕ ನಿಮ್ಮ ಕೆಲಸದಲ್ಲಿ ನೀವು ಪ್ರಗತಿಯನ್ನು ಸಾಧಿಸಬಹುದು. ಪ್ರೇಮಿಗಳು ಒಂದಷ್ಟು ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಕುಟುಂಬದ ಕಿರಿಯ ಸದಸ್ಯರು ನಿಮಗೆ ಬೆಂಬಲ ನೀಡಬಹುದು ಮತ್ತು ಅವರ ಸಹಾಯದೊಂದಿಗೆ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಇದು ಸಕಾಲ. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ.

ABOUT THE AUTHOR

...view details