- ರಾಜ್ಯ ವಿಧಾನಮಂಡಲ ಅಧಿವೇಶನ: ಸಚಿವ ಈಶ್ವರಪ್ಪ ರಾಜೀನಾಮೆಗೆ ಪಟ್ಟು ಸಡಿಲಿಸದ ಕಾಂಗ್ರೆಸ್, ವಿಧಾನಸಭೆ, ಪರಿಷತ್ ಕಲಾಪಗಳು
- ಮಧ್ಯಾಹ್ನ 12.30ಕ್ಕೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ
- ಶಾಲಾ, ಕಾಲೇಜು ತರಗತಿಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ: ಹೈಕೋರ್ಟ್‌ನಲ್ಲಿ ಮಧ್ಯಾಹ್ನ 2.30ರಿಂದ ಮುಂದುವರೆಯಲಿರುವ ರಿಟ್ ಅರ್ಜಿಗಳ ವಿಚಾರಣೆ
- ಮಧ್ಯಾಹ್ನ 3.30ಕ್ಕೆ ಕೃಷ್ಣಾದಲ್ಲಿ ಸಿಎಂ ಭೇಟಿ ಮಾಡಲಿರುವ ರೈತ ಮುಖಂಡರ ನಿಯೋಗ
- ಬೆಳಗ್ಗೆ 10.30ಕ್ಕೆ ಅಶೋಕ ಹೋಟೆಲ್ ಸಂಜೀವಿನಿ ಸಂಸ್ಥೆಯ ‘ಸ್ಟಾರ್ಟ್ ಅಪ್ ಸಮಾವೇಶ’
- ಬೆಳಗ್ಗೆ 11ಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ವಜಾಗೊಳಿಸಲು ಆಗ್ರಹಿಸಿ ದಸಂಸ ಪ್ರತಿಭಟನೆ
- ಮಧ್ಯಾಹ್ನ 2.30ಕ್ಕೆ ಸಿಎಂರಿಂದ ಶಾಸಕರ ಭವನದ ರಿಸೆಪ್ಶನ್ ಕಚೇರಿ ಉದ್ಘಾಟನೆ
- ಬೆಳಗ್ಗೆ 10ಕ್ಕೆ ಕೆ.ಜಿ ರಸ್ತೆಯಲ್ಲಿ ಧನ್ವೀರ್ ಅಭಿನಯದ 'ಬೈ ಟು ಲವ್' ಸಿನಿಮಾ ಬಿಡುಗಡೆ ಸಮಾರಂಭ
- ಸಂಜೆ 4.30ಕ್ಕೆ ಕೃಷ್ಣಾದಲ್ಲಿ ಸಿಎಂಗೆ ನಿವೃತ್ತ ಮುಖ್ಯಕಾರ್ಯದರ್ಶಿ ವಿಜಯಕುಮಾರ್ ಅವರಿಂದ ಆಡಳಿತ ಸುಧಾರಣೆ ಆಯೋಗದ ವರದಿ ಸಲ್ಲಿಕೆ
- ಸಂಜೆ 5ಕ್ಕೆ ಟೌನ್ಹಾಲ್ ಮುಂಭಾಗ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಅಭಿನಂದನಾ ಕಾರ್ಯಕ್ರಮ
- ಮಹಾರಾಷ್ಟ್ರದಲ್ಲಿ ಹೊಸದಾಗಿ ನಿರ್ಮಿಸಿರುವ ಎರಡು ರೈಲು ಮಾರ್ಗಗಳನ್ನು ದೇಶಕ್ಕೆ ಸಮರ್ಪಿಸಲಿರುವ ಪ್ರಧಾನಿ ಮೋದಿ
- ಪಂಜಾಬ್ ವಿಧಾನಸಭೆ ಚುನಾವಣೆ: ಅಮೃತಸರದಲ್ಲಿ ಆಪ್‌ನ ಮನೀಶ್ ಸಿಸೋಡಿಯಾ ನೇತೃತ್ವದಲ್ಲಿ ಬೈಕ್ ಜಾಥಾ
- ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣ: ಅಪರಾಧಿಗಳಿಗೆ ಇಂದು ಶಿಕ್ಷೆಯ ಪ್ರಮಾಣ ಪ್ರಕಟ
- ಪ್ರೊ ಕಬಡ್ಡಿ ಇಂದಿನ ಪಂದ್ಯಗಳು: ಪುಣೇರಿ ಪಲ್ಟನ್ vs ಬೆಂಗಾಲ್ ವಾರಿಯರ್ಸ್, ತೆಲುಗು ಟೈಟನ್ಸ್ vs ದಬಂಗ್ ಡೆಲ್ಲಿ, ತಮಿಳ್ ತಲೈವಾಸ್ vs ಗುಜರಾತ್ ಜೈಂಟ್ಸ್
- ಮಹಿಳಾ ಕ್ರಿಕೆಟ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಕ್ವೀನ್ಸ್‌ಟೌನ್‌ನಲ್ಲಿ 3ನೇ ಏಕದಿನ ಪಂದ್ಯ
- ಭಾರತ vs ವೆಸ್ಟ್ ಇಂಡೀಸ್ 2ನೇ ಟಿ-20 ಕ್ರಿಕೆಟ್: ಕೋಲ್ಕತಾದಲ್ಲಿ ಸಂಜೆ 7ಕ್ಕೆ ಪಂದ್ಯ, ರೋಹಿತ್ ಶರ್ಮಾ ಬಳಗಕ್ಕೆ ಸರಣಿ ಗೆಲ್ಲುವ ತವಕ
- ಸಮಗ್ರ ಆರ್ಥಿಕ ಸಹಿಭಾಗಿತ್ವ ಒಪ್ಪಂದ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಬು ಧಾಬಿ ರಾಜ ಶೇಖ್ ಮಹಮ್ಮದ್ ಬಿನ್ ಜಾಯೆದ್ ಅಲ್ ನಹಯಾನ್ ಜೊತೆ ವರ್ಚುವಲ್ ಮಾತುಕತೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...