ಕರ್ನಾಟಕ

karnataka

ETV Bharat / bharat

ಇಂದಿನ ರಾಶಿ ಭವಿಷ್ಯ: ಅಸೂಯೆ ಮನಸ್ಸಿನ ನೆರೆಹೊರೆಯವರಿಂದ ಎಚ್ಚರದಿಂದಿರಿ - etv bharat ka

ಇಂದಿನ ರಾಶಿ ಭವಿಷ್ಯ ಹೀಗಿದೆ..

Etv bharat horoscope today
ಇಂದಿನ ರಾಶಿ ಭವಿಷ್ಯ... ಹೇಗಿದೆ ನಿಮ್ಮ ದಿನ?

By

Published : Jul 24, 2022, 6:48 AM IST

ಮೇಷ: ಇಂದು ನಿಮ್ಮ ನೋಟ ಹಾಗೂ ಸಾಮರ್ಥ್ಯಗಳಿಂದ ಪ್ರತಿಯೊಬ್ಬರ ಗಮನ ಸೆಳೆಯುತ್ತೀರಿ. ನಿಮ್ಮನ್ನು ನೀವು ನವೋತ್ಸಾಹಗೊಳಿಸಲು ಅತ್ಯುತ್ತಮ ಪ್ರಯತ್ನ ನಡೆಸಬೇಕು. ನೀವು ಪಡೆದ ಶಕ್ತಿಯಿಂದ ನೀವು ಸಾಕಷ್ಟು ಸಾಧನೆ ಮಾಡುತ್ತೀರಿ.

ವೃಷಭ: ಇಂದು, ನಿಮ್ಮ ಭಾವನೆಗಳು ಮತ್ತು ಅಭಿಪ್ರಾಯಗಳು ಉನ್ನತ ಮಟ್ಟದಲ್ಲಿರುತ್ತವೆ. ನಿಮಗೆ ಹತ್ತಿರದಲ್ಲಿರುವವರೊಂದಿಗೆ ಭಾವನಾತ್ಮಕ ಭೇಟಿಯ ದೃಢವಾದ ಸಾಧ್ಯತೆ ಇದೆ. ನೀವು ಈ ಕಾರ್ಯಕ್ರಮ/ಸಭೆಯಲ್ಲಿ ಇತರರಿಂದ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ. ಯಾವುದೇ ಬಗೆಯ ವಿವಾದ ಅಥವಾ ಬಿಕ್ಕಟ್ಟಿಗೆ ಸಿಲುಕಿಕೊಳ್ಳುವುದನ್ನು ತಪ್ಪಿಸಿ.

ಮಿಥುನ: ನೀವು ನಿಜಕ್ಕೂ ಇಷ್ಟಪಡುವ ಕೆಲಸಗಳನ್ನು ಮಾಡುತ್ತಾ ದಿನವನ್ನು ಕಳೆಯುವ ಮನಸ್ಥಿತಿಯಲ್ಲಿರುತ್ತೀರಿ. ಜನರ ಕಷ್ಟಗಳಲ್ಲಿ ನೆರವಾಗುವುದನ್ನು ಇಷ್ಟಪಡುತ್ತೀರಿ ಮತ್ತು ಉದಾರ ಮನಸ್ಥಿತಿಯಲ್ಲಿರುತ್ತೀರಿ. ನಿಮ್ಮ ಮನಸ್ಸಿನ ಸೇವಾಸಕ್ತಿ ನಿಮಗೆ ಸಾಮಾಜಿಕ ಸ್ಥಾನಮಾನ ಮತ್ತು ಆತ್ಮಗೌರವ ತರುತ್ತದೆ. ಈ ದಿನ ಒಟ್ಟಾರೆ ವಿನೋದ ಮತ್ತು ಮನರಂಜನೆಯಿಂದ ಕೂಡಿರುತ್ತದೆ.

ಕರ್ಕಾಟಕ: ಕೆಲಸದಲ್ಲಿ ಮಹತ್ತರ ಪಾಲುದಾರಿಕೆಗಳನ್ನು ಹೊಂದುವ ಸಾಮರ್ಥ್ಯದಿಂದ ನಿಮ್ಮ ಮಹತ್ವಾಕಾಂಕ್ಷೆಯ ಯೋಜನೆಯೊಂದರಲ್ಲಿ ಯಶಸ್ಸು ಕಾಣುತ್ತೀರಿ. ಆದಾಗ್ಯೂ, ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ನೀವು ಎಚ್ಚರವಾಗಿರಬೇಕು. ವ್ಯವಹಾರ ಮುಗಿಸುವ ಮುನ್ನ ಅದರ ವಿವರಗಳನ್ನು ಸರಿಯಾಗಿ ಓದಿಕೊಳ್ಳುವುದು ಮುಖ್ಯ.

ಸಿಂಹ: ಹಳೆಯ ಪರಿಚಯಗಳನ್ನು ನವೀಕರಿಸಲು ಮತ್ತು ಹೊಸ ಬಾಂಧವ್ಯಗಳನ್ನು ಮಾಡಿಕೊಳ್ಳಲು ಇಂದು ಒಳ್ಳೆಯ ದಿನವಾಗಿದೆ. ನಿಮ್ಮ ಮಿತ್ರರು ಹಾಗೂ ಬಂಧುಗಳು ಬಹುಶಃ ಇಂದು ನಿಮ್ಮನ್ನು ಭೇಟಿ ಮಾಡುತ್ತಾರೆ. ನಿಮ್ಮ ಮನೆಯಲ್ಲಿ ಆನಂದದ ಭಾವನೆ ತುಂಬಿರುತ್ತದೆ. ನಿಮ್ಮ ಅತಿಥಿಗಳಿಗೆ ನೀವು ಅದ್ಧೂರಿ ಪಾರ್ಟಿ ನೀಡುತ್ತೀರಿ.

ಕನ್ಯಾ: ವ್ಯಾಪಾರ ಮತ್ತು ಸಂತೋಷಗಳನ್ನು ಚೆನ್ನಾಗಿ ಸಮತೋಲನ ಮಾಡಲಾಗುತ್ತದೆ. ನೀವು ಇಂದು ಔತಣಕೂಟದಲ್ಲಿ ಪಾಲ್ಗೊಳ್ಳುತ್ತೀರಿ. ನಿಮ್ಮ ಹಣಕಾಸಿನ ಹೊರಹರಿವು ಸುತ್ತಾಡುವ ಸಮಯಕ್ಕೆ ನೇರವಾದ ಪ್ರಮಾಣದಲ್ಲಿರುತ್ತದೆ. ಆದಾಗ್ಯೂ, ನೀವು ಎಚ್ಚರಿಕೆಯಿಂದ ಖರ್ಚು ಮಾಡಬೇಕು ಮತ್ತು ಅದರ ಕುರಿತು ಚಿಂತೆ ಮಾಡಬಾರದು.

ತುಲಾ: ತರ್ಕ ಹಾಗೂ ಭಾವನೆಗಳು ನಿಮ್ಮ ಬಾಂಧವ್ಯದಲ್ಲಿ ಇಂದು ಪ್ರಭಾವ ಬೀರುತ್ತವೆ. ಸಂಪರ್ಕ ಮತ್ತು ಅಭಿವ್ಯಕ್ತಿ ಇಂದು ನೀವು ಕೆಲಸದಲ್ಲಿ ಇರಿಸಿಕೊಳ್ಳಬೇಕಾದ ಎರಡು ಅಂಶಗಳು. ನೀವು ಇಂದು ಮಾಡುವ ಕೆಲಸದಲ್ಲಿ ನಿಷ್ಠೆ ಕಾಣುತ್ತೀರಿ. ವ್ಯಾಪಾರದಲ್ಲಿ ಲಾಭ ಗಳಿಸುತ್ತೀರಿ.

ವೃಶ್ಚಿಕ: ತಿದ್ದುಪಡಿಗಳು ಜೀವನದ ಕೇಂದ್ರಬಿಂದು. ನಿಮ್ಮ ಪ್ರೀತಿಪಾತ್ರರು ನೀವು ಹತ್ತಿರದಲ್ಲಿರುವಾಗ ಹೇಗೆ ಭಾವಿಸುವಂತೆ ಮಾಡುತ್ತೀರಿ ಎಂದು ತಿಳಿಯುವುದು ಮುಖ್ಯ. ಅವರನ್ನು ಅಸಾಧಾರಣ ಎಂದು ಭಾವಿಸುವಂತೆ ಮಾಡಿರಿ; ಆದರೆ ಅವರನ್ನು ನಿಯಂತ್ರಿಸಲು ಪ್ರಯತ್ನಿಸಬೇಡಿ.

ಮೀನ: ನೀವು ಬಾಲ್ಯದ ನೆನಪುಗಳಲ್ಲಿ ಮುಳುಗಿ ಹೋಗುತ್ತೀರಿ. ನೀವು ದಿಢೀರ್ ರಜೆ ಪೆದುಕೊಂಡು ನಗರದ ಹೊರವಲಯಕ್ಕೆ ಟ್ರಿಪ್ ಮಾಡಬಹುದು. ಅಲ್ಲದೆ ಹಳೆಯ ಮಿತ್ರರ ಬಳಿಗೆ ಹೋಗುವುದು ನಿಮ್ಮ ಅನುಭವ ಉತ್ತಮಪಡಿಸುತ್ತದೆ.

ಮಕರ: ಕೆಲಸದಲ್ಲಿ ನಿಮಗೆ ಮಾನ್ಯತೆ ಮತ್ತು ಪುರಸ್ಕಾರಗಳು ಕಾಯುತ್ತಿವೆ ಮತ್ತು ಬಹಳಷ್ಟು ಸಂದರ್ಭಗಳಲ್ಲಿ ಆಗುವಂತೆ ಸಹೋದ್ಯೋಗಿಗಳು ನಿಮ್ಮ ಯಶಸ್ಸಿನ ಕುರಿತು ಈರ್ಷ್ಯೆ ಪಡುವುದಿಲ್ಲ. ಅವರು ಹೊಸ ಹಾಗೂ ಸವಾಲಿನ ಯೋಜನೆಗಳನ್ನು ಕೈಗೊಳ್ಳಲು ಅತ್ಯಂತ ಅಗತ್ಯವಾದ ಉತ್ತೇಜನ ನೀಡುತ್ತಾರೆ. ಉದ್ಯೋಗ ಬದಲಿಸಲು ಬಯಸಿರುವವರು, ಕೊಂಚ ಕಾಯಿರಿ, ಇದು ನಿಮಗೆ ಸರಿಯಾದ ಕಾಲವಲ್ಲ.

ಕುಂಭ: ಇಂದು ನಿಮ್ಮ ದಿನವಲ್ಲ. ನಿಮ್ಮ ಮನೆಯಲ್ಲಿ ಶಾಂತಿಯುತ ವಾತಾವರಣ ಸೃಷ್ಟಿಸಲು ನೀವು ವಿಫಲರಾಗುತ್ತೀರಿ ಮತ್ತು ಈ ಸಮಸ್ಯೆಗೆ ಪೂರಕವಾಗಿ ನಿಮ್ಮ ಮಕ್ಕಳು ನಿಮಗೆ ನಿರ್ವಹಿಸಲೇ ಕಷ್ಟವಾಗುವಂತೆ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ. ಕೆಲ ಕೌಟುಂಬಿಕ ವಿವಾದಗಳೂ ಉಂಟಾಗಬಹುದು, ಮತ್ತು ಅಸೂಯೆ ಹೊಂದಿರುವ ನೆರೆಹೊರೆಯವರು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಾರೆ.

ಮೀನ:ನಿಮ್ಮ ದೈನಂದಿನ ದಿನಚರಿಯನ್ನು ಸಂಘಟಿಸಲು ಕಠಿಣ ಪರಿಶ್ರಮ ಪಡುತ್ತೀರಿ, ನಿಮ್ಮ ಗ್ರಹಗಳ ಕೆಟ್ಟ ಜೋಡಣೆಯಿಂದ ಇಂದು ನೀವು ವಿಷಯಗಳನ್ನು ಪರಿಣಾಮಕಾರಿಯಾಗಿ ಇತ್ಯರ್ಥಪಡಿಸಲು ಸಾಧ್ಯವಿಲ್ಲ. ನೀವು ತಾಳ್ಮೆಯಿಂದ ಇರಲು ಮತ್ತು ವಿಷಯಗಳು ಅವು ಹೇಗಿರುತ್ತವೋ ಹಾಗೆಯೇ ಇರುವಂತೆ ಮಾಡಲು ಅಲ್ಲದೆ ಬದಲಾವಣೆಯ ಭಾವನೆಗಳಿಗೆ ಕೊಂಚ ತಡೆ ಹೇರುವುದು ಸೂಕ್ತ.

ABOUT THE AUTHOR

...view details