ಕರ್ನಾಟಕ

karnataka

ETV Bharat / bharat

ಭಾನುವಾರದ ದಿನ ಭವಿಷ್ಯ: ಯಾರಿಗೆ ಒಳಿತು ಮಾಡಲಿದೆ ಇಂದಿನ ಭವಿಷ್ಯ? - Today Rashi Bhavishya

ಭಾನುವಾರದ ರಾಶಿ ಭವಿಷ್ಯ.. ಇಂದಿನ ರಾಶಿಯಲ್ಲಿ ನಿಮ್ಮ ಭವಿಷ್ಯ ಹೇಗಿದೆ ನೋಡಿ...

Etv bharat horoscope today
Etv bharat horoscope today

By

Published : Feb 13, 2022, 5:40 AM IST

ಮೇಷ:ಇಂದು ನಿಮಗೆ ಸುಂದರ ಮತ್ತು ವಿದೇಶಿ ವಸ್ತುಗಳ ಮೇಲೆ ಕಣ್ಣಿರುತ್ತದೆ. ಈ ವಿಷಯಗಳಲ್ಲಿ ನೀವು ವ್ಯಾಪಾರ ಪ್ರಾರಂಭಿಸುವ ಸಾಧ್ಯತೆಯೂ ಇರುತ್ತದೆ. ಆದಾಗ್ಯೂ, ನೀವು ಅದರ ಕುರಿತು ಇನ್ನೂ ತೀರ್ಮಾನಕ್ಕೆ ಬಂದಿಲ್ಲ. ಆದರೆ ನಿಮ್ಮ ಆಯ್ಕೆಯನ್ನು ಮುಕ್ತವಾಗಿರಿಸಿಕೊಳ್ಳುತ್ತೀರಿ.

ವೃಷಭ:ನೀವು ಉದ್ಯೋಗದಲ್ಲಿ ಸಾಕಷ್ಟು ಕೆಲಸಗಳಿಂದ ಒತ್ತಡಕ್ಕೆ ಸಿಲುಕುತ್ತೀರಿ. ಆದರೆ, ನೀವು ತುಂಬಾ ಕಾಳಜಿ ವಹಿಸುವವರೊಂದಿಗೆ ಹೊರಗಡೆ ಸುತ್ತಾಡಿ ಆನಂದಿಸಲು ನಿಮಗೆ ನೆರವಾಗುತ್ತದೆ. ನೀವು ಎಲ್ಲವನ್ನೂ ಮರೆತು ಆನಂದಿಸುವುದು ಸೂಕ್ತ, ಅದು ನಿಮಗೆ ನಿಜಕ್ಕೂ ಅಗತ್ಯವಾಗಿದೆ.

ಮಿಥುನ:ಈ ದಿನ ನೀವು ಶಕ್ತಿ ಮತ್ತು ಉತ್ಸಾಹದಿಂದ ತುಂಬಿ ತುಳುಕುವ ದಿನವಾಗಿದೆ. ನಿಮಗೆ ಜೀವನ ಕುರಿತು ಭರವಸೆಯ ನೋಟವಿದೆ, ಮತ್ತು ಇದು ನಿಮಗೆ ಯಶಸ್ಸು ತಂದುಕೊಡುವಲ್ಲಿ ನೆರವಾಗುತ್ತದೆ. ನಿಮ್ಮ ಮುಕ್ತವಾದ ಇಚ್ಛಾಶಕ್ತಿಯನ್ನು ಬಳಸಿ ನೀವು ಇಷ್ಟಪಡುವ ಕೆಲಸಗಳನ್ನು ತೆಗೆದುಕೊಳ್ಳುತ್ತೀರಿ. ಈ ದಿನ ಒತ್ತಡದಿಂದ ಕೂಡಿದ್ದರೂ ಅದು ನಿಮಗೆ ಪುರಸ್ಕಾರ ತಂದುಕೊಡುತ್ತದೆ.

ಕರ್ಕಾಟಕ:ಕುಟುಂಬ ಸದಸ್ಯರಿಂದ ಬೆಂಬಲದ ಕೊರತೆ ನಿಮ್ಮ ಪ್ರಯತ್ನಗಳನ್ನು ವಿಫಲಗೊಳಿಸುತ್ತದೆ. ಮಕ್ಕಳು ಕೂಡಾ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ಕುಟುಂಬದಲ್ಲಿ ನಿರ್ಲಕ್ಷ್ಯ ಅಥವಾ ಭಿನ್ನಾಭಿಪ್ರಾಯ ಉಂಟಾಗಬಹುದು. ನೆರೆಹೊರೆಯವರ ಬಗ್ಗೆ ಎಚ್ಚರದಿಂದಿರಿ. ಪರಿಸ್ಥಿತಿಗಳನ್ನು ಕಿರುನಗೆಯಿಂದ ನಿಭಾಯಿಸಿ.

ಸಿಂಹ:ಇಂದು ನೀವು ಅಸಾಧಾರಣ ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ದೃಢ ನಿರ್ಧಾರ ಕೈಗೊಳ್ಳಲು ಶಕ್ತರಾಗುತ್ತೀರಿ. ಇಂದು ನಿಮ್ಮ ಕೆಲಸಗಳನ್ನು ಪೂರೈಸುವಲ್ಲಿ ಯಾವುದೇ ಕಷ್ಟಗಳನ್ನು ಕಾಣುವುದಿಲ್ಲ ಮತ್ತು ಯಶಸ್ಸು ಸಾಧಿಸುತ್ತೀರಿ.

ಕನ್ಯಾ:ಇಂದು ಕೊಂಚ ಬಿಡುವು ತೆಗೆದುಕೊಳ್ಳಿರಿ, ಮತ್ತು ನಿಮ್ಮಲ್ಲಿ ನೀವು ನೋಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ನಿಮ್ಮ ಕಛೇರಿಯಲ್ಲಿ ಕೆಲ ಕಹಿ ಜಗಳಗಳು ನಡೆಯಬಹುದು, ಆದ್ದರಿಂದ ನೀವು ಎಚ್ಚರಿಕೆಯಿಂದ ಇರುವುದು ಅಗತ್ಯ ಮತ್ತು ವಿಷಯಗಳು ಬಹಳ ಕಠಿಣವಾಗುವುದನ್ನು ತಡೆಯಲು ಪ್ರಯತ್ನಿಸಿ. ಪ್ರೀತಿಯ ವಿಷಯದಲ್ಲಿ, ಹೊಸ ಪ್ರಣಯವೊಂದು ರೂಪುಗೊಳ್ಳಬಹುದು.

ತುಲಾ:ಬಾಕಿ ಇರುವ ಯಾವುದೇ ಕಾನೂನು ಸಮಸ್ಯೆಗಳು ಇಂದು ನ್ಯಾಯಾಲಯದಲ್ಲಿ ಅಥವಾ ನ್ಯಾಯಾಲಯದ ಹೊರಗಡೆ ಪರಿಹಾರವಾಗಬಹುದು. ನಿಮ್ಮ ಕಾರ್ಯದೊತ್ತಡ ಇಂದು ಕಡಿಮೆಯಾಗಲಿದೆ, ಮತ್ತು ನೀವು ಕೆಲ ಸಮಸ್ಯಾತ್ಮಕ ಸನ್ನಿವೇಶಗಳಿಂದ ದೂರ ಹೋಗಲು ಶಕ್ತರಾಗುತ್ತೀರಿ.

ವೃಶ್ಚಿಕ:ನಿಮ್ಮನ್ನು ಇಂದು ಖಂಡಿತವಾಗಿಯೂ `ಪರ್ಫೆಕ್ಷನಿಸ್ಟ್’ ಎಂದು ಕರೆಯಬಹುದು. ಸರಿಯಾದ ಸಮಯಕ್ಕೆ ಅಲ್ಲದೆ ಕೆಲಸದಲ್ಲಿ ವ್ಯವಸ್ಥಿತ ವಿಧಾನ ಅನುಸರಿಸುವ ಮೂಲಕ ಎಲ್ಲವನ್ನೂ ಮಾಡುತ್ತೀರಿ. ಒಟ್ಟಾರೆ, ನಿಮ್ಮ ಸುತ್ತಲಿನ ಜನರಿಗೆ ನೀವು ಸೂಕ್ತ ಉದಾಹರಣೆ ನಿರ್ಮಿಸಿದ್ದೀರಿ.

ಧನು:ಹಾರುವ ಮುನ್ನ ಒಮ್ಮೆ ನೋಡಿ. ಕಾಮನು ಬಿಲ್ಲು ಬಾಗಿಸಿ ಬಾಣವನ್ನು ನಿಮ್ಮತ್ತ ನೆಟ್ಟಿದ್ದಾನೆ. ಪ್ರೀತಿಯ ಪರಿಶ್ರಮದಿಂದ ನಿಮಗೆ ಯುವ, ನವಿರಾದ ಹೃದಯ ಗೆಲ್ಲಲು ಸುಲಭಗೊಳಿಸುತ್ತದೆ. ಸುಲಭದ ಆಸೆಗಳಿಂದ ಬಲಿಯಾಗದಿರಿ ಮತ್ತು ನಿಮ್ಮ ಪ್ರತಿಷ್ಠೆಯನ್ನು ಎಲ್ಲ ರೀತಿಯಿಂದಲೂ ಕಾಪಾಡಿಕೊಳ್ಳಿ.

ಮಕರ:ನೀವು ಅತ್ಯಂತ ಒತ್ತಡದಲ್ಲಿರುತ್ತೀರಿ. ನಿಮ್ಮ ಕೆಲಸದ ಬೇಡಿಕೆಗಳಿಂದ ಕೈ ಕಟ್ಟಿರುವುದರಿಂದ ನಿಮಗೆ ನಿಮ್ಮ ಕುರಿತು ಆಲೋಚಿಸುವುದೂ ಬಹಳ ಕಷ್ಟವಾಗಿದೆ. ನೀವು ಸೃಜನಶೀಲರಾಗಲು ಬಯಸಿದರೆ ಕಾರ್ಯದೊತ್ತಡದಿಂದ ಅಂತಹ ಸ್ವಾತಂತ್ರ್ಯ ದೊರೆಯುವುದಿಲ್ಲ. ನೀವು ಸಮಯ ನಿರ್ವಹಣೆಯ ಕಲೆಯನ್ನು ಕಲಿತಿದ್ದೀರಿ. ಆದ್ದರಿಂದ, ನೀವು ನಿಮ್ಮ ಆದ್ಯತೆಗಳನ್ನು ಸರಿಯಾಗಿ ರೂಪಿಸಿಕೊಂಡಿದ್ದೀರಿ ಮತ್ತು ನಿಮಗಾಗಿ ಯಶಸ್ಸು ಕಾಯುತ್ತಿದೆ.

ಕುಂಭ:ಇಂದು ನೀವು ಸರಿಯಾಗಿ ಗುರಿ ಇಟ್ಟು ಹೊಡೆಯುತ್ತೀರಿ. ಅತ್ಯಂತ ಸಣ್ಣದರಿಂದ ದೊಡ್ಡದರವರೆಗೆ, ನಿಮ್ಮ ಎಲ್ಲ ಯೋಜನೆಗಳೂ ವಾಸ್ತವಗೊಳ್ಳುತ್ತವೆ. ನಿಮ್ಮ ದಾರಿಯಲ್ಲಿ ಕೆಲ ಅಡೆತಡೆಗಳಿದ್ದರೆ ನಿರಾಶೆಗೊಳ್ಳಬೇಡಿ; ನೀವು ಸವಾಲುಗಳನ್ನು ಎದುರಿಸಲು ಸಂಪೂರ್ಣ ಸನ್ನದ್ಧರಾಗಿದ್ದೀರಿ ಮತ್ತು ವಿಜಯೋತ್ಸಾಹದಿಂದ ಹೊರಬರುತ್ತೀರಿ. ನಿಮ್ಮನ್ನು ಅತ್ಯಂತ ಉತ್ಸಾಹದಲ್ಲಿರಿಸಿ, ಖಂಡಿತವಾಗಿಯೂ ನೀವು ಯಶಸ್ವಿಯಾಗುತ್ತೀರಿ.

ಮೀನ:ನಿಮ್ಮ ಗ್ರಹಗಳ ಜೋಡಣೆ ಪೂರಕವಾಗಿಲ್ಲ, ನೀವು ಇಂದು ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸುವುದು ಉತ್ತಮವಲ್ಲ. ಇಂದು ಯಾವುದೇ ಯೋಜನೆಯಿಂದ ಪಡೆಯುವ ಅನುಕೂಲಗಳು ಅದರೊಂದಿಗೆ ಒಳಗೊಂಡಿರುವ ರಿಸ್ಕ್ ಗಳಿಂದಾಗಿ ಸಮರ್ಥನೀಯವಲ್ಲ. ವ್ಯಾಪಾರದಲ್ಲಿರುವ ಜನರು ತಮ್ಮ ಎಲ್ಲ ವ್ಯವಹಾರಗಳಲ್ಲೂ ಹೆಚ್ಚು ಜಾಗರೂಕರಾಗಿರಬೇಕು. ವೈಯಕ್ತಿಕ ಜೀವನ ದೇವರ ಕೃಪೆಯಿಂದ ಶಾಂತಿಯುತವಾಗಿರುತ್ತದೆ.

ABOUT THE AUTHOR

...view details