ಮೇಷ:ನಿಮ್ಮ ಗಮನಾರ್ಹ ಅಂತರ-ವ್ಯಕ್ತೀಯ ಸಾಮರ್ಥ್ಯಗಳಿಂದ ಇಂದು ನೀವು ಮಹತ್ತರ ಸಾಧನೆ ಮಾಡುತ್ತೀರಿ. ನಿಮ್ಮ ಅಭಿವ್ಯಕ್ತಿಯ ಶಕ್ತಿ ಹಲವು ಜನರನ್ನು ಪ್ರಭಾವಿತಗೊಳಿಸುತ್ತದೆ. ಹಣಕಾಸಿನ ಪುರಸ್ಕಾರಗಳು ದೊರೆಯಲಿವೆ, ಆದರೆ ಸಣ್ಣ ಪುಟ್ಟ ಅಪಘಾತಗಳು ಮತ್ತು ಅನಾರೋಗ್ಯದ ಬಗ್ಗೆ ಎಚ್ಚರದಿಂದಿರಿ.
ವೃಷಭ:ನಿಮಗೆ ಅತ್ಯಂತ ಆಹ್ಲಾದಕರ ದಿನ ಮುಂದಿದೆ. ನೀವು ಸ್ವಭಾವತಃ ಅವಿಶ್ರಾಂತ ಮತ್ತು ಉತ್ಸಾಹಿ ವ್ಯಕ್ತಿಯಾಗಿದ್ದರೂ ನೀವು ಇಂದು ಏನೇ ಮಾಡಿದರೂ ಅತ್ಯಂತ ಸ್ಥಿರ ಹಾಗೂ ಗಮನವಿಟ್ಟು ಮಾಡುತ್ತೀರಿ. ನಂತರ ನೀವು ನಿಮ್ಮ ಮಿತ್ರರ ಜೊತೆಯಲ್ಲಿ ಆನಂದಿಸುತ್ತೀರಿ ಮತ್ತು ಅವರೊಂದಿಗೆ ಮಾತನಾಡಲು ಮತ್ತು ಗಾಸಿಪ್ ಹಂಚಿಕೊಳ್ಳಲು ಕರೆ ಮಾಡುತ್ತೀರಿ.
ಮಿಥುನ:ನೀವು ಇಂದು ಹಲವು ಜನರಿಂದ ಹಲವಾರು ಬೇಡಿಕೆಗಳನ್ನು ಎದುರಿಸುತ್ತೀರಿ, ಮತ್ತು ನೀವು ಅವರ ಎಲ್ಲರ ಬೇಡಿಕೆಗಳಲ್ಲೂ ಪೂರೈಸುವುದು ಕಷ್ಟಕರ ಎಂದು ಕಾಣುತ್ತೀರಿ. ಆದರೆ, ನೀವು ಇಂದು ಪರಿಹಾರವಾಗಬೇಕಾದ ಅಗತ್ಯವನ್ನು ಪೂರೈಸಲು ಸಮರ್ಥರಾಗುತ್ತೀರಿ. ಜನರು ನಿಮ್ಮ ಜಾಣ್ಮೆ ಮತ್ತು ಸೃಜನಶೀಲತೆಯನ್ನು ಪ್ರಶಂಸೆ ಮಾಡುತ್ತಾರೆ.
ಕರ್ಕಾಟಕ:ಬದಲಾವಣೆಯ ಗಾಳಿಯನ್ನು ಗಮನಿಸಿರಿ ಮತ್ತು ಅದಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿ. ನೀವು ಶಾಂತವಾಗಿರುವುದು ಅಗತ್ಯ. ನೀವು ಪರಿಸ್ಥಿತಿಗಳಿಗೆ ಹೊಂದಿಕೊಂಡರೆ ನಿಮ್ಮ ಗುರಿಸಾಧನೆ ಸುಲಭವಾಗುತ್ತದೆ. ವಿನೋದ ಮತ್ತು ಮನರಂಜನೆ ಇಂದಿನ ಪಾಸ್ವರ್ಡ್. ಸಾಮಾಜಿಕ ವಲಯ, ವ್ಯಾಪಾರದಲ್ಲಿ ನಿಮಗೆ ಯಶಸ್ಸು ದೊರೆಯುತ್ತದೆ.
ಸಿಂಹ:ಮಾರಾಟ ಮತ್ತು ಮಾರ್ಕೆಟಿಂಗ್ ಉದ್ಯೋಗಗಳಲ್ಲಿ ತೊಡಗಿಕೊಂಡವರು ಉತ್ಪಾದಕ ಸಭೆಗಳಲ್ಲಿ ಭಾಗವಹಿಸುತ್ತಾರೆ ಮತ್ತು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುತ್ತಾರೆ. ಆದರೆ, ಪ್ರಯಾಣದಲ್ಲಿ ತಡವಾಗುವ ಸಾಧ್ಯತೆ ಇದೆ. ನಿಮ್ಮ ಆಂತರಿಕ ಸಾಮರ್ಥ್ಯಗಳನ್ನು ಗುರುತಿಸಲು ಇದು ಅತ್ಯುತ್ತಮ ಸಮಯ. ನೀವು ಮುಂದಿನ 2-3 ದಿನಗಳಲ್ಲಿ ನಿಮ್ಮ ಮೌಲ್ಯವನ್ನು ಸಾಬೀತುಪಡಿಸಲಿದ್ದೀರಿ.
ಕನ್ಯಾ:ನಿಮ್ಮ ದೈನಂದಿನ ಸಂಕಷ್ಟಗಳ ನಡುವೆ ಅತ್ಯಂತ ಅಗತ್ಯವಾಗಿರುವ ಬಿಡುವು ತೆಗೆದುಕೊಳ್ಳಿ. ನಿಮ್ಮ ದಿನವನ್ನು ತುಂಬಿರುವ ಎಲ್ಲ ಸಾಧಾರಣ ಕೆಲಸಗಳನ್ನು ವೈವಿಧ್ಯತೆಯ ಅಂಶವನ್ನು ಸೇರ್ಪಡೆ ಮಾಡಿ. ನೀವು ಖಾಸಗಿ ಮತ್ತು ಸಾಮಾಜಿಕ ಸಂತೋಷಕೂಟಗಳಿಗೆ ಭೇಟಿ ನೀಡಬಹುದು. ನಿಮ್ಮ ಉತ್ಸಾಹ ಹೆಚ್ಚಾಗಿ ಇರಿಸಲು ಇತರರೊಂದಿಗೆ ಬೆರೆಯುವುದು ಸೂಕ್ತ.
ತುಲಾ:ನೀವು ನಿಮ್ಮ ಕುಟುಂಬ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಹೆಚ್ಚು ಗಮನ ನೀಡುತ್ತೀರಿ. ನೀವು ನಿಮ್ಮ ಮನೆಯ ಒಳಾಂಗಣ ನವೀಕರಿಸಲು ಮತ್ತು ಬದಲಾಯಿಸಲು ಬಯಸುತ್ತೀರಿ ಅಥವಾ ಹೊಸ ಗ್ಯಾಡ್ಜೆಟ್ ಗಳು ಮತ್ತು ಗೃಹಾಲಂಕರಣದ ವಸ್ತುಗಳನ್ನು ಕೊಳ್ಳಲು ತೆರಳುತ್ತೀರಿ. ನೀವು ಇಂದು ನಿಮ್ಮ ಸಮಯವನ್ನು ನಿಮ್ಮ ಕುಟುಂಬ ಸದಸ್ಯರೊಂದಿಗೆ ಕಳೆಯುತ್ತೀರಿ.
ವೃಶ್ಚಿಕ: ನಮ್ಮ ಕುರಿತು ನಾವು ಅತ್ಯಂತ ನಿರ್ಲಕ್ಷ್ಯ ವಹಿಸುವುದು ನಮ್ಮ ಆರೋಗ್ಯ. ಆದರೆ ಇಂದು ಕೂಡಾ ಅದಕ್ಕೆ ಗಮನ ನೀಡಲು ಸಾಧ್ಯವಿಲ್ಲ. ನೀವು ಕಾಯಿಲೆ/ಗಳಿಂದ ಬಳಲುತ್ತಿರುವುದರಿಂದ ನಿಮ್ಮ ಆರೋಗ್ಯಕ್ಕೆ ತಕ್ಕಷ್ಟು ಗಮನ ನೀಡಬೇಕು. ಆರೋಗ್ಯಕರ ಆಹಾರ ಮತ್ತು ವ್ಯಾಯಾಮದಿಂದ ನೀವು ನಿಮ್ಮ ದಿನಚರಿಯನ್ನು ರೂಪಿಸಿಕೊಳ್ಳಿ.
ಧನು:ನೀವು ಇಂದು ಏನನ್ನೇ ತೆಗೆದುಕೊಳ್ಳಿರಿ, ನೀವು ಗೆಲುವು ಸಾಧಿಸುತ್ತೀರಿ. ನಾಯಕನಾಗಿ ನೀವು ನಿಮ್ಮ ಕೈ ಕೆಳಗಡೆ ಇರುವವರಿಗೆ ಅವರು ಬಯಸಿದಾಗ ಮಾರ್ಗದರ್ಶನ ಮತ್ತು ಸೂಚನೆ ನೀಡುತ್ತೀರಿ. ಒಂದು ರೀತಿಯಲ್ಲಿ, ನೀವು ಅವರನ್ನು ಉತ್ತೇಜನ ಹಾಗೂ ಪ್ರೇರೇಪಣೆಯನ್ನೂ ಮಾಡುತ್ತೀರಿ. ಒಟ್ಟಾರೆ, ದಿನದ ಅಂತ್ಯಕ್ಕೆ ನೀವು ಅತ್ಯಂತ ಸಂತೋಷದ ವ್ಯಕ್ತಿಯಾಗಿರುತ್ತೀರಿ!
ಮಕರ:ಕೆಲವೊಮ್ಮೆ, ಭಾವನೆಗಳು ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಸಾಧಿಸುತ್ತವೆ. ನಿಮ್ಮನ್ನು ಕೆಲವೊಮ್ಮೆ ಅಪ್ರಾಯೋಗಿಕವಾಗಿಸುತ್ತದೆ, ಈ ಪ್ರವೃತ್ತಿ ನಿಮಗೆ ಹಾನಿಕಾರಕವಾಗುತ್ತದೆ. ದಯವಿಟ್ಟು ಇದನ್ನು ನಿಮ್ಮ ಮುಖದ ಮೇಲೆ ತೋರಿಸಿಕೊಳ್ಳದಿರಿ, ಇದರಿಂದ ಇತರರು ನಿಮ್ಮ ದೌರ್ಬಲ್ಯದ ಪ್ರಯೋಜನ ಪಡೆದುಕೊಳ್ಳಬಹುದು. ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸದಿದ್ದರೆ, ಇದು ನಿಮ್ಮ ಯಶಸ್ಸಿನ ದಾರಿಯಲ್ಲಿ ಅಡ್ಡಿಯಾಗಬಹುದು.
ಕುಂಭ:ನೀವು ನಿಮ್ಮ ದೃಢತೆ ಸಾಬೀತುಪಡಿಸುವ ಮನಸ್ಥಿತಿಯಲ್ಲಿರುವುದರಿಂದ ನಿಮ್ಮ ಕಡುವಿರೋಧಿಗಳಿಗೆ ಎಚ್ಚರಿಕೆಯ ಸೂಚನೆ ನೀಡಿರಿ ಮತ್ತು ಹಣಕ್ಕಾಗಿ ಓಡುವಂತೆ ಮಾಡಿತ್ತೀರಿ. ಅನುಮಾನಗಳು ಮತ್ತು ಪ್ರತಿಬಂಧಗಳು ಗಾಳಿಯಲ್ಲಿ ಸೇರಿಕೊಂಡು ಕಣ್ಮರೆಯಾಗುತ್ತವೆ, ಮತ್ತು ನೀವು ನಿಮ್ಮ ಗುರುತನ್ನು ಛಾಪಿಸಲು ನಿರ್ಧಾರ ಹೊಂದಿದ್ದೀರಿ. ನೀವು ಯಶಸ್ಸಿನ ದಾರಿಯಲ್ಲಿರುವಾಗ ಹಲವು ಜನರ ಹೃದಯಗಳನ್ನು ಗೆಲ್ಲುತ್ತೀರಿ.
ಮೀನ:ಇಂದು ನಿಮ್ಮ ಬೌದ್ಧಿಕ ಸಾಮರ್ಥ್ಯ ಮುಂಬದಿಗೆ ಬರುತ್ತದೆ. ನೀವು ನಿಮ್ಮ ಕುತೂಹಲದಲ್ಲಿ ಮುಳುಗಿಹೋಗುತ್ತೀರಿ ಮತ್ತು ನೈಸರ್ಗಿಕ ವಿದ್ಯಮಾನದಲ್ಲಿ ಆಸಕ್ತಿ ವಹಿಸುತ್ತೀರಿ. ನಿಮ್ಮ ನಂಬಿಕೆ ನಿಮಗೆ ಸುಲಭವಾಗಿ ಬಾಕಿ ಇರುವ ಎಲ್ಲ ಕೆಲಸಗಳನ್ನೂ ಪೂರ್ಣಗೊಳಿಸಲು ನೆರವಾಗುತ್ತದೆ. ನೀವು ವಿಷಯಗಳನ್ನು ವಿಧಿಯ ತೀರ್ಮಾನಕ್ಕೆ ಬಿಡುತ್ತೀರಿ. ನೀವು ವೃತ್ತಿಪರವಾದುದಕ್ಕಿಂತ ಬೌದ್ಧಿಕ ಅನ್ವೇಷಣೆಗಳತ್ತ ಹೊರಳುತ್ತೀರಿ. ಆದಾಗ್ಯೂ, ನಿಮ್ಮ ಜವಾಬ್ದಾರಿಗಳನ್ನು ನಿರ್ಲಕ್ಷಿಸಬೇಡಿ.