ಕರ್ನಾಟಕ

karnataka

ETV Bharat / bharat

ಇಂದು ಈ ರಾಶಿಯವರು ವಿವಾದಗಳಿಂದ ದೂರವಿರುವುದು ಉತ್ತಮ..! - Today horoscope

ಇಂದಿನ ರಾಶಿಭವಿಷ್ಯ ಇಲ್ಲಿದೆ.

Etv bharat horoscope on 24 September 2021
ಇಂದಿನ ರಾಶಿ ಭವಿಷ್ಯ

By

Published : Sep 24, 2021, 5:56 AM IST

ಮೇಷ:ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟ, ಆದರೆ, ಕಠಿಣ ನಿರ್ಧಾರ ನಿಮಗೆ ಬದ್ಧರಾಗಿರಲು ನೆರವಾಗುತ್ತದೆ. ಭಾವನಾತ್ಮಕತೆ ನಿಮ್ಮ ಉದ್ದೇಶವನ್ನು ಅಲ್ಲಾಡಿಸುತ್ತದೆ, ಆದರೆ ಒಮ್ಮೆ ನಿರ್ಧರಿಸಿದ ನಂತರ ನೀವು ಅದಕ್ಕೆ ಅಂಟಿಕೊಳ್ಳುವುದು ಅಗತ್ಯ. ಅಲ್ಲದೆ, ನೀವು ದಾಪುಗಾಲು ಇಡುವಲ್ಲಿ ಉಂಟಾಗುವ ಆಘಾತ ತಡೆದುಕೊಳ್ಳಲು ಕಲಿಯಿರಿ.

ವೃಷಭ: ಇಂದು ಖಂಡಿತವಾಗಿಯೂ ನಿಮ್ಮ ಕಾಲು ಕೊಳೆ ಮಾಡಿಕೊಳ್ಳುವ ಯೋಜನೆಗೆ ಉತ್ತಮ ದಿನವಲ್ಲ (ಪೆಡಿಕ್ಯೂರ್ ಆಗಬಹುದು). ನೀವು ಹೊಸ ಯೋಜನೆ ಪ್ರಾರಂಭಿಸುವುದನ್ನು ತಡ ಮಾಡಬಹುದು. ನಿಮ್ಮ ಪ್ರಿಯತಮೆಯೊಂದಿಗೆ ರೊಮ್ಯಾಂಟಿಕ್ ಪ್ರಯಾಣ ಅಥವಾ ಸ್ಪಾದಲ್ಲಿನ ದುಬಾರಿ ಮೇಕೋವರ್​​ ನಿಮ್ಮ ಇಂದಿನ ಜಡತ್ವವನ್ನು ಮೌಲ್ಯೀಕರಿಸುತ್ತದೆ. ಹೇಗಾದರೂ ಇದು ನಿಮ್ಮ ಜೇಬಿಗೆ ಭಾರವೇ ಸರಿ.

ಮಿಥುನ:ನೀವು ತರ್ಕ ಮತ್ತು ಭಾವನೆಗಳ ನಡುವೆ ಸಮತೋಲನ ಸಾಧಿಸಲು ಬಹಳ ಕಷ್ಟಪಡುತ್ತೀರಿ. ಜಗತ್ತಿನ ಮುಂದೆ ಅದರಲ್ಲಿ ನೀವು ಯಶಸ್ವಿಯಾದರೂ, ನೀವು ನಿಮ್ಮ ಮಿತ್ರರೊಂದಿಗೆ ವಿವೇಚನಾಯುಕ್ತರಾಗಿರುವುದಿಲ್ಲ. ನಿಮ್ಮ ಪ್ರಿಯತಮೆಯೊಂದಿಗೆ ನಿಮಗೆ ಅದ್ಭುತ ಸಮಯ ಕಳೆಯುತ್ತೀರಿ, ಆದರೆ ನಿಮ್ಮ ದೈಹಿಕ ಹೊರನೋಟ ನಿಮಗೆ ಕಾಳಜಿ ಉಂಟು ಮಾಡುತ್ತದೆ.

ಕರ್ಕಾಟಕ: ಇಂದು ಅದೃಷ್ಟದೇವತೆ ನಿಮ್ಮ ಕಡೆಗಿರುವಂತೆ ಕಾಣುತ್ತಿದೆ. ಸ್ಥಿರಾಸ್ತಿಗಳ ಮೇಲೆ ನಿಮ್ಮ ಹೂಡಿಕೆಗಳಿಗೆ ಅಪಾರ ಪ್ರತಿಫಲ ಪಡೆಯುವ ಸಾಧ್ಯತೆ ಇದೆ. ಕೆಲಸದ ವಿಷಯದಲ್ಲಿ, ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ನಿರೀಕ್ಷಿಸಬಹುದು. ಇಂದು ನಿಮ್ಮ ಎಲ್ಲ ಪ್ರಯತ್ನಗಳಿಗೂ ಪ್ರತಿಫಲ ಪಡೆಯುವ ದಿನವಾಗುವ ಸಾಧ್ಯತೆ ಇದೆ.

ಸಿಂಹ:ನೀವು ಏನೋ ಒಂದು ವಿಭಿನ್ನವಾದುದನ್ನು ಮಾಡುವ ಬಯಕೆ ಹೊಂದಿರುವಂತೆ ಭಾವಿಸುತ್ತೀರಿ. ಸಂತೋಷದ ಮನಸ್ಥಿತಿ ಇಡೀ ದಿನ ನಿಮ್ಮ ಜೊತೆಯಲ್ಲಿರುತ್ತದೆ. ತಾರೆಗಳು ನಿಮಗೆ ಪೂರಕವಾಗಿರುವುದರಿಂದ ನೀವು ಹಾಕುವ ಶಕ್ತಿಗೆ ಅನುಗುಣವಾಗಿ ನೀವು ಎಲ್ಲ ಸವಾಲುಗಳನ್ನೂ ಎದುರಿಸುವಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ.

ಕನ್ಯಾ:ಹಣಕಾಸಿನ ವಿಷಯದಲ್ಲಿ ನೀವು ಕೆಲ ಅಡೆತಡೆಗಳನ್ನು ಎದುರಿಸಬಹುದು. ನಿಮ್ಮ ಹೃದಯಕ್ಕಲ್ಲ, ಮನಸ್ಸಿಗೆ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಅವಕಾಶ ನೀಡಿ. ನಿಮ್ಮ ಬೆಲೆಬಾಳುವ ಸ್ವತ್ತುಗಳ ಕುರಿತು ಜಾಗರೂಕರಾಗಿರಿ. ಹೊಸ ಯೋಜನೆಗಳು ಮತ್ತು ಕಾನೂನು ಕರ್ತವ್ಯಗಳ ಕುರಿತು ಮಾತನಾಡುವಾಗ, ನೀವು ಏನು ಮಾಡಲು ನಿರ್ಧರಿಸಿದ್ದೀರಿ ಎಂದು ತಿಳಿದಿರಲಿ. ಏಕೆಂದರೆ ಅದು ನಿಮ್ಮ ಮೇಲೆ ಸುದೀರ್ಘ ಪರಿಣಾಮ ಬೀರಬಹುದು.

ತುಲಾ:ಇಂದು ನೀವು ಎಷ್ಟು ಪ್ರತಿಭಾವಂತರು ಎಂದು ಜಗತ್ತಿನ ಎದುರು ಪ್ರದರ್ಶಿಸಲು ಪರಿಪೂರ್ಣ ದಿನದಂತೆ ಕಾಣುತ್ತದೆ. ಬಟ್ಟೆಗಳನ್ನು ಕೊಳ್ಳುವಲ್ಲಿ ಸಂತೋಷ ಪಡುವವರು, ಇಂದು ಅವುಗಳನ್ನು ಕೊಳ್ಳಲು ಅವಕಾಶ ಪಡೆಯಬಹುದು. ನಿಮಗೆ ಸಂಬಂಧಿಸಿದ ವಿಷಯಕ್ಕೆ ಮಾಡಲು ಮತ್ತು ಹೇಳಲು ಲಕ್ಷ್ಯ ನೀಡುವುದು ಅಗತ್ಯ. ನೀವು ಇಂದಿನ ಬಹುತೇಕ ದಿನವನ್ನು ಹಗಲುಗನಸಿನಲ್ಲಿ ಕಳೆಯಬಹುದು. ಆದರೆ ಒಟ್ಟಾರೆ ಪ್ರತಿಯೊಂದು ಕೂಡಾ ನಿಮಗೆ ಸುಸೂತ್ರವಾಗಿರುತ್ತದೆ.

ವೃಶ್ಚಿಕ:ನಿಮ್ಮ ದಿನ ನಿಮಗೆ ಕಿರಿಕಿರಿ ಮತ್ತು ಆಕ್ರಮಣಶೀಲತೆ ತರಬಹುದು, ಅದು ನಿಮ್ಮ ಅದೃಷ್ಟವನ್ನೂ ದೂರ ಮಾಡಬಹುದು. ನಿಮಗೆ ತೊಂದರೆ ಉಂಟು ಮಾಡುವ ಯಾವುದೇ ವಿವಾದಗಳಿಂದ ದೂರವಿರುವುದು ಉತ್ತಮ. ಆದರೆ ಸಂಜೆಯ ವೇಳೆಗೆ, ನಿಮ್ಮ ಅದೃಷ್ಟ ಬದಲಾಗುತ್ತದೆ ಮತ್ತು ನೀವು ಶಾಂತಿ ಮತ್ತು ನಿರಾಳತೆಯನ್ನು ಎದುರು ನೋಡಬಹುದು.

ಧನು:ನಿಮ್ಮ ದಿನ ಸಂಪೂರ್ಣ ಭರವಸೆ ಮತ್ತು ಸಂತೋಷದಿಂದ ಕೂಡಿದೆ. ಹೆಚ್ಚು ಪರಿಶೀಲನೆ ಅಗತ್ಯವಾಗಿದ್ದ ಕೆಲಸವೂ ಬಹಳ ಬೇಗನೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ನೀವು ದೀರ್ಘಾವಧಿ ವಿವಾದಗಳನ್ನು ಕೂಡಾ ತಾರ್ಕಿಕ ವಿವರಣೆಯೊಂದಿಗೆ ಪರಿಹರಿಸಲು ನೆರವಾಗುತ್ತೀರಿ.

ಮಕರ:ಕಳೆದ ಕೆಲ ತಿಂಗಳು ಕಠಿಣವಾಗಿದ್ದು, ನೀವು ನಿಮ್ಮ ಬಂಧುಮಿತ್ರರೊಂದಿಗೆ ಸಂತೋಷಪಡುವುದನ್ನು ಕಳೆದುಕೊಂಡಿದ್ದೀರಿ. ನಿಮ್ಮ ಬದ್ಧತೆ ಮತ್ತು ಶ್ರಮ ನಿಮಗೆ ನೀವು ಬಯಸಿದ ಹಂತಕ್ಕೆ ತಂದಿದೆ. ನೀವು ಈಗ ಕುಳಿತುಕೊಂಡು, ಅದರ ಪ್ರತಿಫಲ ಪಡೆಯುವುದು ಮತ್ತು ವೈಭವ ಅನುಭವಿಸುವ ಕಾಲ.

ಕುಂಭ:ಇಂದು ನೀವು ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಸುಲಭ ಎಂದು ಕಾಣುವ ದಿನವಾಗಿದೆ. ಜನರು ಸುಲಭವಾಗಿ ಜವಾಬ್ದಾರಿಯನ್ನು ನಿಮ್ಮ ಹೆಗಲ ಮೇಲೆ ಸರಿಸುವ ಜನರನ್ನು ಕಾಣುತ್ತೀರಿ. ಎಚ್ಚರದಿಂದಿರಿ, ಕಿರಿಕಿರಿ ಅನುಭವಿಸಬೇಡಿ, ನಿಮ್ಮ ದೌರ್ಬಲ್ಯಗಳೇ ನಿಮ್ಮ ಬಲವಾದ ಅಂಶಗಳಾಗುವ ಸುವರ್ಣಾವಕಾಶ ನಿಮಗಾಗಿ ಕಾದಿದೆ.

ಮೀನ:ಇಂದು ನಿಮ್ಮ ತಾರೆಗಳು ಪೂರಕವಾಗಿಲ್ಲದೇ ಇರುವುದರಿಂದ ನಿಮ್ಮ ಹಣಕಾಸು ವ್ಯವಹಾರಗಳ ಕುರಿತು ಒಂದು ಕಣ್ಣಿಡಿ. ಹಣಕಾಸಿಗೆ ಸಂಬಂಧಿಸಿದ ವಿಷಯಗಳ ಕುರಿತು ನೀವು ಜಾಗರೂಕತೆಯಿಂದ ಇರುವುದು ಉತ್ತಮ.

ABOUT THE AUTHOR

...view details