ವೃಷಭ:ನೀವು ಉದ್ಯೋಗದಲ್ಲಿ ಸಾಕಷ್ಟು ಕೆಲಸಗಳಿಂದ ಒತ್ತಡಕ್ಕೆ ಸಿಲುಕುತ್ತೀರಿ. ಆದರೆ, ನೀವು ತುಂಬಾ ಕಾಳಜಿ ವಹಿಸುವವರೊಂದಿಗೆ ಹೊರಗಡೆ ಸುತ್ತಾಡಿ ಆನಂದಿಸಲು ನಿಮಗೆ ನೆರವಾಗುತ್ತದೆ. ನೀವು ಎಲ್ಲವನ್ನೂ ಮರೆತು ಆನಂದಿಸುವುದು ಸೂಕ್ತ, ಅದು ನಿಮಗೆ ನಿಜಕ್ಕೂ ಅಗತ್ಯವಾಗಿದೆ.
ಮಿಥುನ:ಈ ದಿನ ನೀವು ಶಕ್ತಿ ಮತ್ತು ಉತ್ಸಾಹದಿಂದ ತುಂಬಿ ತುಳುಕುವ ದಿನವಾಗಿದೆ. ನಿಮಗೆ ಜೀವನದ ಕುರಿತು ಭರವಸೆಯ ನೋಟವಿದೆ. ಇದು ನಿಮಗೆ ಯಶಸ್ಸು ತಂದುಕೊಡುವಲ್ಲಿ ನೆರವಾಗುತ್ತದೆ. ನಿಮ್ಮ ಮುಕ್ತವಾದ ಇಚ್ಛಾಶಕ್ತಿಯನ್ನು ಬಳಸಿ ನೀವು ಇಷ್ಟಪಡುವ ಕೆಲಸಗಳನ್ನು ತೆಗೆದುಕೊಳ್ಳುತ್ತೀರಿ. ಈ ದಿನ ಒತ್ತಡದಿಂದ ಕೂಡಿದ್ದರೂ ಅದು ನಿಮಗೆ ಪುರಸ್ಕಾರ ತಂದುಕೊಡುತ್ತದೆ.
ಕರ್ಕಾಟಕ:ನಿಮಗೆ ಅವಿಶ್ರಾಂತ ಮತ್ತು ಕಿರಿಕಿರಿಯ ಮನಸ್ಥಿತಿಯ ಸಾಧ್ಯತೆ ಇದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶಾಂತ ಮತ್ತು ಸಮಚಿತ್ತತೆಯಿಂದ ಇರಿ. ಹಾಗೆ ಮಾಡಿದಲ್ಲಿ ನೀವು ಸದಾ ಜೀವನದಲ್ಲಿ ಯಶಸ್ವಿಯಾಗುತ್ತೀರಿ. ನೀವು ಕೋಪಗೊಳ್ಳುತ್ತಿದ್ದರೆ ಪ್ರತಿಕೂಲತೆಯನ್ನು ನಿವಾರಿಸುವುದು ಕಷ್ಟ.
ಸಿಂಹ:ನೀವು ಅಸಾಧಾರಣ ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ದೃಢ ನಿರ್ಧಾರ ಕೈಗೊಳ್ಳಲು ಶಕ್ತರಾಗುತ್ತೀರಿ. ಇಂದು ನಿಮ್ಮ ಕೆಲಸಗಳನ್ನು ಪೂರೈಸುವಲ್ಲಿ ಯಾವುದೇ ಕಷ್ಟಗಳನ್ನು ಕಾಣುವುದಿಲ್ಲ ಮತ್ತು ಯಶಸ್ಸು ಸಾಧಿಸುತ್ತೀರಿ.
ಕನ್ಯಾ:ನೀವು ಅತ್ಯಂತ ಸ್ಫೂರ್ತಿಯುತವಾಗಿದ್ದೀರಿ. ನಿಮ್ಮ ಸೃಜನಶೀಲ ಪ್ರತಿಭೆಗಳು ಮತ್ತು ಸಾಮರ್ಥ್ಯಗಳು ನಿಮ್ಮ ಶ್ರೇಷ್ಠ ಕಲಾವಿದರಾಗಿ ಪ್ರತ್ಯೇಕವಾಗಿ ನಿಲ್ಲಿಸುತ್ತವೆ. ನೀವು ನಿಮ್ಮ ಸೃಜನಶೀಲತೆಗೆ ದಾರಿ ಮಾಡಿಕೊಟ್ಟರೆ ಮಾತುಗಳು ಸರಾಗವಾಗಿ ಹರಿದುಬರುತ್ತವೆ, ಮತ್ತು ನೀವು ಹಾಡಲು ಮತ್ತು ನೃತ್ಯ ಮಾಡಲು ಬಯಸಿದರೆ ಎಲ್ಲರ ಕೇಂದ್ರಬಿಂದುವಾಗುತ್ತೀರಿ. ನೀವು ಪ್ರದರ್ಶನ ಕಲೆಗಳು ಅಥವಾ ಬರಹವನ್ನು ಹವ್ಯಾಸಗಳಾಗಿ ಹೊಂದುವುದು ಸೂಕ್ತ.
ತುಲಾ:ಬಾಕಿ ಇರುವ ಯಾವುದೇ ಕಾನೂನು ಸಮಸ್ಯೆಗಳು ಇಂದು ನ್ಯಾಯಾಲಯದಲ್ಲಿ ಅಥವಾ ನ್ಯಾಯಾಲಯದ ಹೊರಗಡೆ ಪರಿಹಾರವಾಗಬಹುದು. ನಿಮ್ಮ ಕಾರ್ಯದೊತ್ತಡ ಇಂದು ಕಡಿಮೆಯಾಗಲಿದೆ, ಮತ್ತು ನೀವು ಕೆಲ ಸಮಸ್ಯಾತ್ಮಕ ಸನ್ನಿವೇಶಗಳಿಂದ ದೂರ ಹೋಗಲು ಶಕ್ತರಾಗುತ್ತೀರಿ.
ವೃಶ್ಚಿಕ:ನೀವು ನಿಮ್ಮ ಕೆಲಸದಲ್ಲಿ ಮುಳುಗಿ ಹೋಗುತ್ತೀರಿ. ಹಗಲಿನ ವೇಳೆ, ನೀವು ಕರ್ತವ್ಯಗಳು ಮತ್ತು ಜವಾಬ್ದಾರಿಗಳಲ್ಲಿ ತುಂಬಿರುತ್ತೀರಿ. ಆದರೆ, ಸಂಜೆಗೆ ನಿಮ್ಮ ಕಥೆ ಬೇರೆಯದೇ ಆಗಿರುತ್ತದೆ. ಎಂದಿನಂತೆ ಉತ್ಸಾಹದಲ್ಲಿದ್ದು, ನಿಮ್ಮ ಮಿತ್ರರೊಂದಿಗೆ ಹೊರಗಡೆ ಹೋಗಿ ಆರಾಮವಾಗಿ ಕಾಲ ಕಳೆಯಿರಿ.
ಧನು:ಹಾರುವ ಮುನ್ನ ಒಮ್ಮೆ ನೋಡಿ. ಕಾಮನು ಬಿಲ್ಲು ಬಾಗಿಸಿ ಬಾಣವನ್ನು ನಿಮ್ಮತ್ತ ನೆಟ್ಟಿದ್ದಾನೆ. ಪ್ರೀತಿಯ ಪರಿಶ್ರಮದಿಂದ ನಿಮಗೆ ಯುವ, ನವಿರಾದ ಹೃದಯ ಗೆಲ್ಲಲು ಸುಲಭಗೊಳಿಸುತ್ತದೆ. ಸುಲಭದ ಆಸೆಗಳಿಂದ ಬಲಿಯಾಗದಿರಿ ಮತ್ತು ನಿಮ್ಮ ಪ್ರತಿಷ್ಠೆಯನ್ನು ಎಲ್ಲ ರೀತಿಯಿಂದಲೂ ಕಾಪಾಡಿಕೊಳ್ಳಿ.
ಮಕರ:ಇಂದು ನೀವು ಬೆನ್ನು ಬಾಗುವಷ್ಟು ಕೆಲಸದಲ್ಲಿ ಸಿಲುಕುತ್ತೀರಿ, ದಿನದ ಅಂತ್ಯಕ್ಕೆ ನೀವು ಅತ್ಯಂತ ಆಯಾಸಗೊಳ್ಳುತ್ತೀರಿ. ವ್ಯಾಪಾರ ಜಗತ್ತಿಗೆ ಬಂದರೆ ತೀವ್ರ ಸ್ಪರ್ಧೆಯಿದೆ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ವ್ಯಾಪಾರ ಹಾಗೂ ಪ್ರತಿಷ್ಠೆಗೆ ಧಕ್ಕೆ ತರಲು ಒಂದು ಸಣ್ಣ ಅವಕಾಶ ದೊರೆತರೂ ಸಾಕು ಎಂದು ಕಾಯುತ್ತಿದ್ದಾರೆ. ಆದರೆ ನೀವೇನೂ ಕಡಿಮೆಯಿಲ್ಲ.
ಕುಂಭ:ಶೈಕ್ಷಣಿಕವಾಗಿ ನೀವು ಅತ್ಯಂತ ಉತ್ತಮ ಸಾಧನೆ ಮಾಡಿದ್ದೀರಿ. ನೀವು ಸಾಕಷ್ಟು ಜನರಿಗೆ ಸ್ಫೂರ್ತಿ ತುಂಬುತ್ತೀರಿ ಮತ್ತು ಉತ್ತೇಜಿಸುತ್ತೀರಿ ಮತ್ತು ಅಭಿಮಾನಿಗಳನ್ನೂ ಗಳಿಸುತ್ತೀರಿ. ಆದರೆ ಇದರ ಅರ್ಥ ನೀವು ಎದೆಯುಬ್ಬಿಸಿ ನಡೆಯಬೇಕಿಲ್ಲ. ಇತರರ ಕುರಿತು ವಿನಯ ಹಾಗೂ ಸೌಜನ್ಯಪೂರಿತರಾಗಿರಿ.
ಮೀನ: ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ಕಠಿಣ ಪರಿಶ್ರಮ ಪಡುವವರು ಇಂದು ಉತ್ತಮ ಸಾಧನೆ ತೋರುತ್ತಾರೆ. ವ್ಯಾಪಾರಕ್ಕೆ ಇದು ಒಳ್ಳೆಯ ದಿನ. ನಿಮ್ಮ ಉದ್ಯೋಗ-ವ್ಯಾಪಾರದಲ್ಲಿ ಸಾಕಷ್ಟು ಹೊಸ ವಿಷಯಗಳನ್ನು ಮಾಡಲು ನೀವು ಶಕ್ತರಾಗುತ್ತೀರಿ. ದೇವರ ಕೃಪೆಯಿಂದ ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ, ಆದರೆ ನೀವು ನಿರುತ್ಸಾಹಗೊಳ್ಳದೆ ಕಠಿಣ ಪರಿಶ್ರಮ ಪಡಬೇಕು.