ಕರ್ನಾಟಕ

karnataka

ETV Bharat / bharat

Horoscope Today: ಭಾನುವಾರದ ಇಂದು ಯಾವ ರಾಶಿಯವರಿಗೆ ಲಾಭ, ನಷ್ಟ? - today astrology

ಇಂದಿನ ರಾಶಿ ಭವಿಷ್ಯ(Horoscope) ಹೀಗಿದೆ...

Etv bharat horoscope on 21 november 2021
ಇಂದಿನ ರಾಶಿ ಭವಿಷ್ಯ

By

Published : Nov 21, 2021, 4:09 AM IST

ಮೇಷ:ನೀವು ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ನೀವು ಕಠಿಣ ಹೋರಾಟ ನಡೆಸಿದರೂ ಅದು ನಿಮಗೆ ಪೂರಕವಾಗುವುದಿಲ್ಲ. ಆದ್ದರಿಂದ ಹಾಗೆ ಮಾಡಬೇಡಿ. ವಿಶ್ರಾಂತಿಗೆ ಕೊಂಚ ಸಮಯ ತೆಗೆದುಕೊಳ್ಳಿ. ಏಕೆಂದರೆ ನೀವು ಏನೇ ಮಾಡಿದರೂ ವಿಷಯಗಳು ನಿಮ್ಮತ್ತ ಸಾಗಿ ಬರುವುದಿಲ್ಲ.

ವೃಷಭ:ಇಂದು ಅತಿಯಾದ ಆಲೋಚನೆ ಮತ್ತು ಅತಿಯಾದ ಒತ್ತಡ ತಂದುಕೊಳ್ಳಬೇಡಿ. ನಿಮ್ಮ ಸ್ವಾಮ್ಯತೆಯ ಸ್ವಭಾವ ಮತ್ತು ಕೋಪ ಅನಗತ್ಯ ಜಗಳಗಳಿಗೆ ಕಾರಣವಾಗಬಹುದು. ನೀವು ಆತ್ಮಾವಲೋಕನ ಮಾಡಲು ಆಲೋಚಿಸುತ್ತೀರಿ, ಏಕೆಂದರೆ ಅದೊಂದೇ ನಿಮ್ಮ ಬಹುತೇಕ ಸಮಸ್ಯೆಗಳಿಗೆ ಉತ್ತರ ತಂದುಕೊಡುವ ದಾರಿಯಾಗಿದೆ.

ಮಿಥುನ:ನೀವು ಇಂದು ದಣಿವಿನ ಭಾವನೆ ಹೊಂದುವ ಸಾಧ್ಯತೆ ಇದೆ, ಆದರೆ ಅದು ನಿಮ್ಮ ಪ್ರೀತಿಪಾತ್ರರ ಮೇಲೆ ಪರಿಣಾಮ ಬೀರಲು ಬಿಡಬೇಡಿ, ಏಕೆಂದರೆ ಅದರ ಪರಿಣಾಮವನ್ನು ನೀವೇ ಎದುರಿಸಬೇಕಾಗುತ್ತದೆ. ನಿಮ್ಮ ಕೋಪ ಅನಗತ್ಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟು ಇತರರಿಗೆ ನೋವುಂಟು ಮಾಡುವುದರಿಂದ ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ನೀವು ಇಡೀ ದಿನ ನಿಮ್ಮನ್ನು ನಿಯಂತ್ರಣದಲ್ಲಿರಿಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೀರಿ.

ಕರ್ಕಾಟಕ:ಇಂದು ನಿಮಗೆ ಅನುಗ್ರಹಗಳ ದಿನವಾಗಿರುವ ಸಾಧ್ಯತೆ ಇದೆ. ದೇವರ ಆಶೀರ್ವಾದದಿಂದ, ನಿಮ್ಮಲ್ಲಿ ಹುಟ್ಟಿಕೊಳ್ಳುವ ಪ್ರತಿ ಆಲೋಚನೆಯೂ ಪರಿಣಾಮಕಾರಿಯಾಗಿರುತ್ತದೆ ಮತ್ತು ನಿಮ್ಮದೇ ಆದ ಶೋತೃಗಳನ್ನು ಸಂಘಟಿಸುತ್ತದೆ. ಇಂದು, ನಿಮ್ಮ ಸೃಜನಶೀಲ ಗೆರೆ ಗಡಿಗಳನ್ನು ಒಡೆಯುತ್ತದೆ ಮತ್ತು ನಿಮ್ಮ ಕಡೆಗೆ ಪುರಸ್ಕಾರಗಳು ಬರುತ್ತವೆ.

ಸಿಂಹ:ನೀವು ಇಂದು ಯಾವುದೇ ಅವಕಾಶವನ್ನೂ ಬಿಡಬೇಡಿ. ನಿಮ್ಮ ಗುರಿಗಳಿಗೆ ನೀವು ಬದ್ಧರಾಗಿರುವ ಮತ್ತು ನಿಮ್ಮ ಸಹೋದ್ಯೋಗಿಗಳಿಗೆ ಅವರ ಕರ್ತವ್ಯಗಳಲ್ಲಿ ಕೊರತೆಯಾಗಲು ಅವಕಾಶ ನೀಡಬೇಡಿ. ನಿಮ್ಮ ಜೀವನದಲ್ಲಿ ಸಂತೋಷ ತರಲು, ನೀವು ಕೊಂಚ ಸಮಯ ತೆಗೆದುಕೊಳ್ಳಬೇಕಾಗಬಹುದು. ನಿಮ್ಮ ಮೇಲಧಿಕಾರಿಗಳ ಆಶೀರ್ವಾದದಿಂದ ನಿಮಗೆ ಇಡೀ ದಿನ ನೆರವಾಗುತ್ತದೆ.

ಕನ್ಯಾ:ನಿಮ್ಮ ವಿಶ್ವಾಸ ನಿಮಗೆ ಸುಲಭವಾಗಿ ಗೊತ್ತಿಲ್ಲದ ದಾರಿಗಳಲ್ಲಿ ಸಂಚರಿಸಲು ನೆರವಾಗುತ್ತದೆ. ಇಂದು, ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮ ವ್ಯಾಪಾರ ಸಾಮರ್ಥ್ಯಗಳನ್ನು ಕೂಡಾ ಪರೀಕ್ಷಿಸಲಾಗುತ್ತದೆ. ಪರಿಹಾರವಾಗದ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಲು ನೀವು ಆವಿಷ್ಕಾರಕ ವಿಧಾನಗಳನ್ನು ಆಲೋಚಿಸುವ ಸಾಧ್ಯತೆ ಇದೆ.

ತುಲಾ:ನಿಮ್ಮ ಸುತ್ತಲಿನ ಎಲ್ಲರೂ ನಿಮ್ಮ ಆಲೋಚನೆಗಳು ಮತ್ತು ಪುರಸ್ಕಾರಗಳಿಗಾಗಿ ನಿಮ್ಮನ್ನು ಶ್ಲಾಘಿಸುತ್ತಿರುತ್ತಿರುವ ಕೇಂದ್ರಬಿಂದುವಾಗಿರುತ್ತೀರಿ. ನೀವು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಸುವರ್ಣಾವಕಾಶ ಕಂಡುಕೊಳ್ಳುತ್ತೀರಿ. ನಿಮ್ಮ ಸ್ವಯಂ-ಹಣಕಾಸಿನ ಸ್ವಾವಲಂಬಿ ಗುರಿಯ ಮೂಲಕ ನೀವು ನಿಮ್ಮದೇ ಬಾಸ್ ಆಗಲು ಬಯಸಿದ್ದರೆ ಈ ಅವಧಿ ನಿಮಗೆ ಅತ್ಯಂತ ಪೂರಕವಾಗಿದೆ.

ವೃಶ್ಚಿಕ:ಪುರಸ್ಕಾರಗಳ ಕುರಿತು ಆಲೋಚಿಸದೆ ಸತತವಾಗಿ ಕಠಿಣ ಪರಿಶ್ರಮಪಡುತ್ತಿರಿ. ಕೆಲಸದ ವಿಷಯದಲ್ಲಿ ಸದಾ ಸನ್ನದ್ಧರಾಗಿರಿ. ನೀವು ಜಂಟಿ ಸಹಯೋಗದಲ್ಲಿ ಕೆಲಸ ಮಾಡಲು ಬಯಸಿದರೆ, ನೀವು ತಾಳ್ಮೆ ತಂದುಕೊಳ್ಳಬೇಕು ಮತ್ತು ನಿಮ್ಮ ಪ್ರಯತ್ನಗಳಿಗೆ ಮಾನ್ಯತೆ ದೊರೆಯಲು ಕಾಯಬೇಕು.

ಧನು:ನೀವು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದ್ದು ನೀವು ವಿಜಯಿಯಾಗಿ ಹೊರಹೊಮ್ಮಲು ಮರುಹೋರಾಟ ನಡೆಸಬೇಕು. ಇಡೀ ದಿನ ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿರಿ. ಸಂಜೆಯ ವೇಳೆಗೆ, ಅನಿರೀಕ್ಷಿತ ಫಲಿತಾಂಶಗಳು ನಿಮ್ಮನ್ನು ಆಶ್ಚರ್ಯಗೊಳಿಸುತ್ತವೆ ಮತ್ತು ನಿಮ್ಮನ್ನು ಅತ್ಯಂತ ಸಂತೋಷಗೊಳ್ಳುವಂತೆ ಮಾಡುತ್ತವೆ.

ಮಕರ:ಪ್ರತಿನಿತ್ಯ ಏನೋ ಒಂದ ಹೊಸದನ್ನು ನಿಮಗೆ ತರುತ್ತದೆ. ನೀವು ಕೊಂಚ ಗೊಂದಲದ ಭಾವನೆ ಅನುಭವಿಸುತ್ತೀರಿ, ಅದರಿಂದ ಇಡೀ ದಿನ ಕೊಂಚ ಮಂಕಾಗಿರುತ್ತೀರಿ. ಆದರೆ ಕೆಲಸದ ವಿಷಯದಲ್ಲಿ ನಿಮ್ಮ ಪ್ರಯತ್ನಗಳಿಗೆ ಪುರಸ್ಕರಿಸಲಾಗುತ್ತದೆ ಮತ್ತು ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಸದೃಢ ತಳಹದಿ ನಿರ್ಮಿಸಬಹುದು.

ಕುಂಭ:ನಿಮ್ಮ ದಿನ ಅತ್ಯಂತ ಘಟನೆಗಳ ದಿನವಾಗಿದೆ. ನೀವು ಹೊಸ ಜನರನ್ನು ಭೇಟಿಯಾಗಬಹುದು, ಅರ್ಥಪೂರ್ಣ ಸಂವಹನಗಳನ್ನು ನಡೆಸಬಹುದು ಮತ್ತು ನಿಮ್ಮ ಜ್ಞಾನದ ಪರಿಧಿ ವಿಸ್ತರಿಸಿಕೊಳ್ಳಬಹುದು. ಈ ದಿನ ನಿಮಗೆ ನಿಮ್ಮ ಎಲ್ಲಾ ಶಕ್ತಿಯನ್ನು ಬಳಸಿಕೊಳ್ಳಲು ಮತ್ತು ನೀವು ಸುಸ್ತು ಹಾಗೂ ಆಯಾಸಪಡುವಂತೆ ಮಾಡಬಹುದು. ಆದರೆ ಒಟ್ಟಾರೆಯಾಗಿ ಈ ದಿನ ನಿಮಗೆ ಸಾಕಷ್ಟು ಉತ್ಸಾಹ ತರುತ್ತದೆ.

ಮೀನ:ಕೆಲಸದಲ್ಲಿ ನೀವು ಆತಂಕವನ್ನು ಎದುರಿಸುವ ಸಾಧ್ಯತೆ ಇದೆ, ನಿಮ್ಮಲ್ಲಿ ನೀವು ನಂಬಿಕೆ ಕಳೆದುಕೊಳ್ಳಬೇಡಿ. ನೀವು ನಿಮ್ಮದೇ ಹೋರಾಟಗಳನ್ನು ನಡೆಸಬೇಕಾಗಬಹುದು ಮತ್ತು ಫಲಿತಾಂಶದ ಕುರಿತು ತಾಳ್ಮೆಯಿಂದಿರಿ. ದಿನ ಮುಂದುವರೆದಂತೆ, ನೀವು ನಿಮ್ಮ ಪ್ರಯತ್ನಗಳಿಗೆ ಪ್ರತಿಫಲವನ್ನು ಆನಂದಿಸಲು ಶಕ್ತರಾಗುತ್ತೀರಿ.

ABOUT THE AUTHOR

...view details