ಕರ್ನಾಟಕ

karnataka

ETV Bharat / bharat

ಈ ದಿನ ಯಾವ ರಾಶಿಯವರಿಗೆ ಮಂಗಳಕರ?

ಮಂಗಳವಾರದ ರಾಶಿಫಲ ಇಂತಿದೆ.

horoscope
ರಾಶಿಫಲ

By

Published : May 4, 2021, 5:01 AM IST

ಮೇಷ: ಕೆಲವೊಮ್ಮೆ ನೀವು ಒತ್ತಡದಲ್ಲಿರುವುದು ಒಳ್ಳೆಯದು. ಏಕೆಂದರೆ ಇದು ನಿಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಹೊರತರುತ್ತದೆ. ನೀವು ನಿಮ್ಮ ಕೆಲಸದಲ್ಲಿ ಎಲ್ಲ ನಿಮ್ಮ ಸಹೋದ್ಯೋಗಿಗಳನ್ನೂ ಮೀರುತ್ತೀರಿ. ಆದರೆ, ಫಲಿತಾಂಶಗಳು ನಿಮ್ಮ ನಿರೀಕ್ಷೆಗಳಿಗೆ ಹೊಂದಿಕೊಳ್ಳುವುದಿಲ್ಲ. ಫಲಿತಾಂಶಗಳು ರಾತ್ರೋರಾತ್ರಿ ಬರುವುದಿಲ್ಲವಾದ್ದರಿಂದ ನೀವು ತಾಳ್ಮೆಯಿಂದ ಇರಬೇಕು.

ವೃಷಭ: ನಿಮ್ಮದೇ ಮೈಲಿಗಲ್ಲುಗಳನ್ನು ಯೋಜಿಸುವುದು ಮತ್ತು ಮಿತ್ರರ ಯಶಸ್ಸನ್ನು ಸಂಭ್ರಮಿಸುವುದು ಇಂದಿನ ಕಾರ್ಯಸೂಚಿ. ವ್ಯಾಪಾರ ಅಥವಾ ಕೆಲಸದಲ್ಲಿ ನಿಮ್ಮ ಆಲೋಚನೆಗಳು ಪ್ರಗತಿಪರವಾಗಿರುತ್ತವೆ ಮತ್ತು ಯಾವುದೇ ಯೋಜನೆಗಳು ನಿಮ್ಮ ಭವಿಷ್ಯಕ್ಕೆ ಸದೃಢ ತಳಹದಿ ನಿರ್ಮಿಸುತ್ತವೆ. ಸಾಮಾಜಿಕ ಸಭೆಗಳು ಮತ್ತು ಪಾರ್ಟಿಗಳು ಉಲ್ಲಾಸ ತರುತ್ತವೆ.

ಮಿಥುನ: ನೀವು ನಿಮ್ಮ ಹಣಕಾಸು, ಜಂಟಿಯಾಗಿ ಹೊಂದಿರುವ ಸಂಪತ್ತುಗಳು ಮತ್ತು ಸ್ಥಿರಾಸ್ತಿಯ ವಿಷಯಗಳ ಕುರಿತು ಆತಂಕಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಇಂದು ನೀವು ಕೊಂಚ ಅವಿಶ್ರಾಂತರಾಗುತ್ತೀರಿ. ಅತ್ಯಂತ ನಿರ್ಲಕ್ಷಿಸಬಹುದಾದ ಸಮಸ್ಯೆಗಳೂ ನಿಮ್ಮ ಮನಸ್ಸು ಹಾಳು ಮಾಡಬಹುದು. ನೀವು ಹಣಕಾಸಿನ ವಿಷಯಗಳಲ್ಲಿ ರಿಸ್ಕ್ ತೆಗೆದುಕೊಳ್ಳಬಹುದು.

ಕರ್ಕಾಟಕ:ಜನರು ನಿಮ್ಮನ್ನು ಸುತ್ತುವರಿಯುತ್ತಾರೆ. ನಿಮ್ಮ ಮನರಂಜನೆಯಿಂದ ಅವರನ್ನು ತೊಡಗಿಸಿಕೊಳ್ಳುತ್ತೀರಿ. ಸಾಮಾಜಿಕ ಸಂಪರ್ಕಗಳು ನಿಮಗೆ ಲಾಭ ತರುತ್ತವೆ. ವಿದ್ಯಾರ್ಥಿಗಳು ನಿರೀಕ್ಷೆ ಮೀರುತ್ತಾರೆ. ತಮ್ಮ ಕೆಲಸಕ್ಕೆ ಗಮನ ನೀಡುತ್ತಾರೆ. ಒಟ್ಟಾರೆ ಎಲ್ಲರಿಗೂ ಇದು ಒಳ್ಳೆಯ ದಿನವಾಗಿದೆ.

ಸಿಂಹ:ನೀವು ಒತ್ತಡದ ಕಾರ್ಯಗಳನ್ನು ಪ್ರಭಾವಿಸಲು ಯತ್ನಿಸುತ್ತಿರುವುದರಿಂದ ಕೊಂಚ ಒತ್ತಡ ಅನುಭವಿಸುತ್ತೀರಿ. ನೀವು ನಿಮ್ಮ ಮಾನಸಿಕ ಮತ್ತು ದೈಹಿಕ ಸೌಖ್ಯ ಕಾಪಾಡಿಕೊಳ್ಳಬೇಕು. ಪ್ರಮುಖ ಸಭೆಗಳು ಯಶಸ್ವಿಯಾಗಿ ಮುಗಿಯುತ್ತವೆ. ಆದರೆ ಎಲ್ಲ ಕೆಲಸ ನಿಮ್ಮನ್ನು ದಿನದ ಅಂತ್ಯಕ್ಕೆ ನಿರುತ್ಸಾಹಗೊಳಿಸುತ್ತವೆ. ನಿರಾಳ ಮತ್ತು ವಿಶ್ರಾಂತಿಗೆ ದಾರಿಗಳನ್ನು ಹುಡುಕಿರಿ.

ಕನ್ಯಾ: ಆರೋಗ್ಯದ ವಿಷಯಕ್ಕೆ ಬಂದರೆ ನಿರ್ಲಕ್ಷ್ಯ ಅಥವಾ ಮುಂದೂಡಿಕೆ ಬೇಡ. ನೀವು ಹಳೆಯ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದೀರಿ. ಆದರೆ, ಶಾಂತಿ ಮತ್ತು ಸಮೃದ್ಧಿ ದಿನದ ವಿಶೇಷತೆಗಳು. ನೀವು ಇಂದು ವಿನೋದ ಮತ್ತು ಮನರಂಜನೆಯಲ್ಲಿ ಸಮಯ ಖರ್ಚು ಮಾಡಿ.

ತುಲಾ: ಇಂದು ಸರ್ಕಾರದ ಸೇವೆಯಲ್ಲಿರುವವರಿಗೆ ಅದ್ಭುತ ದಿನವಾಗಿದೆ. ನಿಮ್ಮ ಕಠಿಣ ಪರಿಶ್ರಮ ಫಲ ನೀಡಿದೆ. ನಿಮ್ಮ ಪ್ರಶಂಸನೀಯ ಸೇವೆಗಳಿಗೆ ಸೂಕ್ತ ಮಾನ್ಯತೆ ಪಡೆಯುವುದು ಮತ್ತು ಪುರಸ್ಕರಿಸಲ್ಪಡುವುದು ಖಂಡಿತ. ಕಿವಿಗಳು ಮತ್ತು ಕಣ್ಣುಗಳನ್ನು ತೆರೆದಿರಿ ಮತ್ತು ತುಟಿಗಳನ್ನು ಬಿಚ್ಚದಿರಿ. ನಿಮ್ಮ ಮ್ಯಾನೇಜರ್​ಗಳು ನಿಮ್ಮೊಂದಿಗೆ ವಿಶ್ವಾಸವಿಟ್ಟು ವರ್ಗೀಕೃತ ವಿಷಯಗಳನ್ನು ಚರ್ಚಿಸುತ್ತಾರೆ.

ವೃಶ್ಚಿಕ: ಇದು ವ್ಯಾಪಾರಕ್ಕೆ ಸೂಕ್ತ ಸಮಯ ಮತ್ತು ನೀವು ಹೊಸ ಉತ್ಪನ್ನ ಬಿಡುಗಡೆ ಮಾಡುವ ಮೂಲಕ ನಿಮ್ಮ ಪ್ರತಿಸ್ಪರ್ಧಿಗಳಿಗೆ ಶಾಕ್ ನೀಡುತ್ತೀರಿ. ಆದರೆ, ತಾರೆಗಳು ಅನುಕೂಲಕರ ರೀತಿಯಲ್ಲಿ ಜೋಡಣೆಯಾಗಿಲ್ಲ. ಅವು ಕೆಲ ಅಡೆತಡೆಗಳನ್ನು ಉಂಟು ಮಾಡಬಹುದು ಎಂದು ಸೂಚಿಸುತ್ತಿವೆ. ಎಷ್ಟು ಸಾಧ್ಯವೋ ಅಷ್ಟು ಸಮಯ ತೆಗೆದುಕೊಳ್ಳಿ, ಅನಾನುಕೂಲ ಪರಿಹರಿಸಿಕೊಳ್ಳಿ ಮತ್ತು ಜಾಹೀರಾತು ಮತ್ತು ಸಂಭ್ರಮಾಚರಣೆಗಳ ಮೂಲಕ ನಿಮ್ಮ ಉತ್ಪನ್ನ ಬಿಡುಗಡೆ ಮಾಡಿ.

ಧನು: ನಿಮ್ಮ ಒಳಗಿರುವ ಋಷಿ ಇಂದು ನಾಯಕತ್ವ ವಹಿಸುತ್ತಾನೆ. ನೀವು ಮನಃಶಾಂತಿಗೆ ನಿಮ್ಮದೇ ಔಷಧ ಸೂಚಿಸಿಕೊಳ್ಳಲಿದ್ದೀರಿ. ನೀವು ಇಂದು ಜ್ಞಾನಿ ಮತ್ತು ಸಂತೃಪ್ತರು. ನಿಮ್ಮ ಸುತ್ತಲೂ ಜನರಿಗೆ ಅದೇ ಸಂದೇಶ ಹರಡುತ್ತೀರಿ.

ಮಕರ: ನಿಮ್ಮ ಅಸಾಧಾರಣ ಬೌದ್ಧಿಕ ಸಾಮರ್ಥ್ಯ ನಿಮಗೆ ಉತ್ಸಾಹಕರ ಫಲಿತಾಂಶಗಳನ್ನು ನೀಡುವುದೇ ಅಲ್ಲದೆ ನಿಮ್ಮ ಹತ್ತಿರದ ಮಿತ್ರರಿಗೆ ಮತ್ತು ಸಹ-ಕೆಲಸಗಾರರಿಗೆ ನಿಮ್ಮ ಮೌಲಿಕ ಸಲಹೆಯಿಂದ ಅವರ ವೃತ್ತಿಯಲ್ಲಿ ಮಹತ್ತರವಾಗಿ ಪ್ರಗತಿ ಕಾಣಲು ನೆರವಾಗುತ್ತದೆ. ಅಸಂಖ್ಯ ಸಮಸ್ಯೆಗಳು ನಿಮ್ಮ ದಾರಿಯಲ್ಲಿ ಬರಬಹುದು, ಆದರೆ ಒತ್ತಡಕ್ಕೆ ಕಾರಣವಿಲ್ಲ.

ಕುಂಭ: ನಿಮ್ಮ ಸಂವಹನ ಕೌಶಲ್ಯಗಳು ಇಂದು ಅದ್ಭುತಗಳನ್ನು ಮಾಡುತ್ತವೆ. ನಿಮ್ಮ ಮಾತುಗಾರಿಕೆ ನಿಮಗೆ ಪುರಸ್ಕಾರಗಳನ್ನು ತಂದುಕೊಡುತ್ತವೆ ಮತ್ತು ಸಭೆಗಳಲ್ಲಿ ಅತ್ಯಂತ ಅನುಕೂಲಕರವಾಗುತ್ತವೆ. ವಾಸ್ತವವಾಗಿ ನಿಮ್ಮ ವಾದಗಳು ಬಹಳ ಮನ ಒಲಿಸುವಂತಿರುತ್ತವೆ. ಜನರು ನಿಮ್ಮೊಂದಿಗೆ ಒಪ್ಪದೇ ಇರುವಾಗ ಕ್ಷೋಭೆಗೊಳ್ಳದೆ ಇರುವುದು.

ಮೀನ: ನೆರೆಹೊರೆಯವರನ್ನು ಪ್ರೀತಿಸಿ ಎನ್ನುವ ಆಜ್ಞೆಯನ್ನು ನೀವು ಅನುಷ್ಠಾನಗೊಳಿಸುತ್ತೀರಿ. ಇದು ಧರ್ಮಗ್ರಂಥಗಳು ಇಂದು ನಿಮಗೆ ಚಿಂತನೆ ಪ್ರಭಾವಿಸುತ್ತವೆ ಎನ್ನುವುದನ್ನು ಸೂಚಿಸುತ್ತದೆ. ಆಧ್ಯಾತ್ಮಿಕ ಆಸಕ್ತಿಗಳು ನಿಮ್ಮನ್ನು ಸಕ್ರಿಯವಾಗಿರಿಸುತ್ತವೆ. ನೀವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು.

ABOUT THE AUTHOR

...view details