ಕರ್ನಾಟಕ

karnataka

ETV Bharat / bharat

ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ..

ಸೋಮವಾರದ ರಾಶಿ ಭವಿಷ್ಯ ಇಂತಿದೆ.

horoscope
horoscope

By

Published : Apr 19, 2021, 5:01 AM IST

ಮೇಷ: ಇಂದು ಸಂಪೂರ್ಣವಾದ ಕ್ರಿಯೆಗಳನ್ನು ಒಳಗೊಂಡ ಸಮಸ್ಯಾತ್ಮಕ ದಿನವಾಗಿದೆ. ನೀವು ಕ್ಷುಲ್ಲಕ ವಿಷಯಗಳ ಕುರಿತು ನಿಮ್ಮ ಮಿತ್ರರೊಂದಿಗೆ ಜಗಳ ಮಾಡುತ್ತೀರ. ಬಾಕಿ ಇರುವ ಎಲ್ಲಾ ಕೆಲಸವನ್ನು ನೀವು ಪೂರೈಸುತ್ತೀರಿ, ಅದು ನಿಮಗೆ ನಿರಾಳತೆ ನೀಡುತ್ತದೆ.

ವೃಷಭ: ಇಂದು ನೀವು ಎಷ್ಟೇ ಕಷ್ಟಪಟ್ಟು ಪ್ರಯತ್ನಿಸಿದರೂ ಸಮಸ್ಯೆಗಳು ಮತ್ತು ಕಷ್ಟಗಳನ್ನು ದೂರವಿರಿಸಲು ಸಾಧ್ಯವಾಗುತ್ತಿಲ್ಲ. ನಿಮಗೆ ನೀಡಲಾದ ಅಥವಾ ಅಗತ್ಯವಾದ ಕೆಲಸ ಮಾಡಲು ಅನುಕೂಲಕರವಾಗಿಲ್ಲ. ಸುಮ್ಮನೆ ಏನೂ ಮಾಡದೆ ಕುಳಿತುಕೊಳ್ಳುತ್ತೀರಿ. ಸರಳ ಮತ್ತು ಸಹಜ ವಿಷಯಗಳಲ್ಲಿ ತೊಡಗಿಕೊಳ್ಳಿರಿ.

ಮಿಥುನ: ನೀವು ಎತ್ತ ಸಾಗುತ್ತಿದ್ದೀರಿ ಎಂದು ನಿಮಗೆ ತಿಳಿದಿದೆ. ನಿಮ್ಮ ಗುರಿಗಳನ್ನು ಮುಟ್ಟಲು ನೀವು ನಿಮ್ಮ ಪ್ರಯತ್ನಗಳನ್ನು ದುಪ್ಪಟ್ಟು ಮಾಡುತ್ತೀರಿ. ನೀವು ಸಂಪೂರ್ಣ ಶಕ್ತಿ ಮತ್ತು ಉತ್ಸಾಹದಿಂದ ಕೂಡಿದ್ದು, ಅದು ನಿಮಗೆ ನಿಮ್ಮ ಗುರಿಗಳನ್ನು ಸಾಧಿಸಲು ನೆರವಾಗುತ್ತದೆ. ನಿಮ್ಮ ಕಠಿಣ ಪರಿಶ್ರಮದಿಂದ ಅನಿರೀಕ್ಷಿತ ಲಾಭಗಳನ್ನು ಪಡೆಯುತ್ತೀರಿ. ಕಠಿಣ ದಿನದ ಶ್ರಮದ ನಂತರ ಅಪಾರ ಯಶಸ್ಸು ನಿಮ್ಮದಾಗುತ್ತದೆ.

ಕರ್ಕಾಟಕ: ನಿಮ್ಮ ಕುಟುಂಬ ನೆರವಿನ ಹಸ್ತ ಚಾಚದೇ ಇರಬಹುದು. ಆದ್ದರಿಂದ ನಿಮ್ಮ ಪ್ರಯತ್ನಗಳು ವಿಫಲವಾಗುತ್ತವೆ. ನಿಮ್ಮ ಮಕ್ಕಳು ಕೂಡಾ ನಿಮ್ಮನ್ನು ನಿರುತ್ಸಾಹಗೊಳಿಸುತ್ತಾರೆ. ನೀವು ನಿಮ್ಮ ಕುಟುಂಬದ ನಡುವೆ ಭಿನ್ನಾಭಿಪ್ರಾಯ ಎದುರಿಸಬಹುದು. ನೆರೆಹೊರೆಯವರ ಬಗ್ಗೆ ಎಚ್ಚರದಿಂದಿರಿ ಮತ್ತು ನಿಮ್ಮ ಸನ್ನಿವೇಶಗಳನ್ನು ಘನತೆ ಮತ್ತು ಸಮಚಿತ್ತತೆಯಿಂದ ಎದುರಿಸಿ.

ಸಿಂಹ: ಇಂದು ನೀವು ನಿಮ್ಮ ಸಹಕಾರದ ಮತ್ತು ಸರಿಪಡಿಸುವ ಪ್ರವೃತ್ತಿಯಿಂದ ಜನರನ್ನು ಪ್ರಭಾವಿಸಲು ಶಕ್ತರಾಗುತ್ತೀರಿ. ನಿಮ್ಮ ಜೊತೆ ಸಂಪರ್ಕಕ್ಕೆ ಬರುವ ಜನರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸುತ್ತೀರಿ. ನಿಮ್ಮಂತೆಯೇ ಆಲೋಚಿಸುವ ಜನರನ್ನು ನೀವು ಸಂಪರ್ಕಿಸುತ್ತೀರಿ.

ಕನ್ಯಾ: ಬಿಡುವು ತೆಗೆದುಕೊಂಡು ನಿಮ್ಮೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಅನುಕೂಲಕರ. ನೀವು ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳ ವಿರೋಧ ಎದುರಿಸುತ್ತೀರಿ. ಪರಿಸ್ಥಿತಿಗಳನ್ನು ನಿಯಂತ್ರಣದಲ್ಲಿಡಲು ತಾಳ್ಮೆಯ ಮುಖವನ್ನು ಇರಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಪ್ರೀತಿಯ ಜೀವನದಲ್ಲಿ ಹೊಸ ಬೆಳವಣಿಗೆಯಾಗುತ್ತದೆ.

ತುಲಾ: ನಿಮ್ಮ ಕೆಲಸದ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಿ ಜನರನ್ನು ಪ್ರಭಾವಿತಗೊಳಿಸುತ್ತೀರಿ. ನೀವು ಕಲೆ ಮತ್ತು ಕಲಾತ್ಮಕ ವಿಷಯಗಳ ಕುರಿತು ಆಸಕ್ತಿ ಬೆಳೆಸಿಕೊಳ್ಳುತ್ತೀರಿ.

ವೃಶ್ಚಿಕ: ಕೆಲಸದಲ್ಲಿ ನೀವು ಒತ್ತಡ ನಿಭಾಯಿಸುವ ಕೃಪೆ ನಿಮ್ಮ ಮೇಲಿರುವುದಕ್ಕೆ ಕೃತಜ್ಞರಾಗಿರಿ. ಏಕೆಂದರೆ ಇಂದು, ನೀವು ಸಾಕಷ್ಟು ಕೆಲಸದ ಒತ್ತಡದಿಂದ ದಣಿಯುತ್ತೀರಿ. ದಿನದ ಅಂತ್ಯಕ್ಕೆ, ಯೋಗ, ಧ್ಯಾನ ಅಥವಾ ಲಘು ಸಂಗೀತದಂತಹ ಒತ್ತಡ ನಿವಾರಿಸುವ ಚಟುವಟಿಕೆಗಳನ್ನು ಮಾಡಿರಿ.

ಧನು: ಈ ದಿನ ನಿಮಗೆ ಅತ್ಯಂತ ವಿವಾದಾತ್ಮಕ ಮತ್ತು ವದಂತಿಗಳ ದಿನವಾಗಿ ಬದಲಾಗಲಿದೆ. ನಿಮ್ಮ ಮೇಲೆ ತಮ್ಮ ಅಭಿಪ್ರಾಯಗಳನ್ನು ನೀಡಲು ಪ್ರಯತ್ನಿಸುವವರ ಜೊತೆಯಲ್ಲಿ ಆತ್ಮೀಯವಾಗಿರುವುದನ್ನು ಬಿಡಿ. ತಾಳ್ಮೆಯಿಂದ ಆಲಿಸಿದರೆ ಮತ್ತು ಅವರ ಅಭಿಪ್ರಾಯಗಳಿಗೆ ಅವಕಾಶ ನೀಡಿದರೆ ವಿವಾದಗಳು ಇತ್ಯರ್ಥವಾಗಬಹುದು.

ಮಕರ: ಇಂದು ನಿಮಗೆ ವಿಪರೀತ ಒತ್ತಡದ ಬಿಡುವಿಲ್ಲದ ದಿನವಾಗಿದೆ. ಅತಿಯಾದ ಉತ್ಸಾಹ ಬೇಡ ಮತ್ತು ಪ್ರತಿ ಕೆಲಸವನ್ನು ಅತ್ಯಂತ ಜಾಣ್ಮೆ ಮತ್ತು ವಿವೇಕದಿಂದ ಮಾಡಿರಿ. ಇದು ನಿಮಗೆ ಕಾರ್ಯದೊತ್ತಡ ಕಡಿಮೆ ಮಾಡಲು ನೆರವಾಗುತ್ತದೆ. ಕೂಲಂಕಷ ದೃಷ್ಟಿ, ಕುತೂಹಲ ಮತ್ತು ಸಂಘಟಿತರಾಗಿರುವುದು ಕೆಲಸ ಮಾಡುವಾಗ ತಪ್ಪುಗಳನ್ನು ಕಡಿಮೆ ಮಾಡುತ್ತದೆ.

ಕುಂಭ: ವಿಶ್ವದ ಎಲ್ಲ ಕಡೆಗಳಿಂದ ಏನೋ ಒಂದು ಸಕಾರಾತ್ಮಕತೆ ನಿಮ್ಮ ದಾರಿಯಲ್ಲಿದೆ. ಇಂದು ಇಡೀ ದಿನ ಧನಾತ್ಮಕವಾಗಿರುತ್ತೀರಾ. ನೀವು ನಿಮ್ಮ ಮಿತ್ರರು ಹಾಗೂ ಪ್ರೀತಿಪಾತ್ರರೊಂದಿಗೆ ದಿನವನ್ನು ಆನಂದಿಸುತ್ತೀರಿ.

ಮೀನ: ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಗ್ರಹಗಳು ಪರಿಪೂರ್ಣವಾಗಿ ಹೊಂದಿಕೊಂಡಿವೆ. ಕೆಲಸದಲ್ಲಿ ಇಂದು ನೀವು ಬಯಸಿದ ಫಲಿತಾಂಶವನ್ನು ಸ್ವಾಗತಿಸುತ್ತೀರಿ. ಆದ್ದರಿಂದ ಸಂತೋಷದಲ್ಲಿರುತ್ತೀರಿ. ಶೈಕ್ಷಣಿಕ ಉದ್ದೇಶಗಳಿಗೆ ಮನೆಯಿಂದ ಹೊರಗಡೆ ಹೋಗಲು ಬಯಸುವವರು ಪ್ರಗತಿಯನ್ನು ಕಾಣುತ್ತಾರೆ ಮತ್ತು ಅವರ ಕನಸಿನತ್ತ ಮುನ್ನಡೆಯುತ್ತಾರೆ.

ABOUT THE AUTHOR

...view details