ಕರ್ನಾಟಕ

karnataka

ETV Bharat / bharat

ನಿಮ್ಮ ಇಂದಿನ ರಾಶಿ ಭವಿಷ್ಯ - ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ ಹೀಗಿದೆ.

ETV Bharat horoscope of 27 June 2021
ಇಂದಿನ ಭವಿಷ್ಯ

By

Published : Jun 27, 2021, 12:02 AM IST

ಮೇಷ : ಕೆಲವೊಮ್ಮೆ ನೀವು ಒತ್ತಡದಲ್ಲಿರುವುದು ಒಳ್ಳೆಯದು. ಏಕೆಂದರೆ ಇದು ನಿಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಹೊರತರುತ್ತದೆ. ನೀವು ನಿಮ್ಮ ಕೆಲಸದಲ್ಲಿ ಎಲ್ಲ ನಿಮ್ಮ ಸಹೋದ್ಯೋಗಿಗಳನ್ನೂ ಮೀರುತ್ತೀರಿ. ಆದರೆ, ಫಲಿತಾಂಶಗಳು ನಿಮ್ಮ ನಿರೀಕ್ಷೆಗಳಿಗೆ ಹೊಂದಿಕೊಳ್ಳುವುದಿಲ್ಲ. ಫಲಿತಾಂಶಗಳು ತಡವಾಗುವುದರಿಂದ ನೀವು ತಾಳ್ಮೆಯಿಂದ ಇರಬೇಕು.

ವೃಷಭ :ನಿಮ್ಮದೇ ಸಾಧನೆಗಳನ್ನು ಯೋಜಿಸುವುದು ಮತ್ತು ಮಿತ್ರರ ಯಶಸ್ಸಿಗೆ ಕೊಡುಗೆ ನೀಡುವುದು ಇಂದಿನ ಕಾರ್ಯಸೂಚಿ. ವ್ಯಾಪಾರ ಅಥವಾ ಕೆಲಸದಲ್ಲಿ ನಿಮ್ಮ ಆಲೋಚನೆಗಳು ಚಲನಶೀಲವಾಗಿರುತ್ತವೆ ಮತ್ತು ಯಾವುದೇ ಯೋಜನೆಗಳು ನಿಮ್ಮ ಭವಿಷ್ಯಕ್ಕೆ ಸದೃಢ ತಳಹದಿ ನಿರ್ಮಿಸುತ್ತವೆ.

ಮಿಥುನ : ಇಂದು ಎಲ್ಲ ಬಗೆಯ ಪಾಲುದಾರಿಕೆಗಳಿಗೆ ಪ್ರವೇಶಿಸಲು ಅತ್ಯುತ್ತಮ ದಿನವಾಗಿದೆ. ನೀವು ನಿಮ್ಮ ಆತ್ಮೀಯ ಮಿತ್ರರೊಂದಿಗೆ ಬಂಧ ಬೆಳೆಸಿಕೊಳ್ಳಲು, ಜಂಟಿ ಖಾತೆ ತೆರೆಯಲು, ವ್ಯವಹಾರಗಳನ್ನು ನಡೆಸಲು ಮತ್ತು ಉಜ್ವಲ ಭವಿಷ್ಯಕ್ಕೆ ಯೋಜನೆ ರೂಪಿಸಬಹುದಾದ ದಿನ. ನೀವು ಮಾಡುವ ಪ್ರತಿಯೊಂದರಲ್ಲೂ ನೀವು ಮೊದಲ ಸ್ಥಾನದಲ್ಲಿರುತ್ತೀರಿ. ಮತ್ತಷ್ಟು ಅಧ್ಯಯನಗಳಿಗೆ ಹೋಗಲು ಬಯಸುವ ನಿಮ್ಮಲ್ಲಿ ಕೆಲವರು, ಮಾಹಿತಿಪೂರ್ಣ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಬಹುದು.

ಕರ್ಕಾಟಕ : ಜನರು ನಿಮ್ಮನ್ನು ಸುತ್ತುವರಿಯುತ್ತಾರೆ. ನೀವು ಹಾಸ್ಯಪ್ರಜ್ಞೆಯಿಂದ ಅವರನ್ನು ರಂಜಿಸುತ್ತೀರಿ. ಸಾಮಾಜಿಕ ಸಂಪರ್ಕಗಳು ನಿಮಗೆ ಅನುಕೂಲವಾಗುತ್ತವೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಔನ್ನತ್ಯ ಸಾಧಿಸುತ್ತಾರೆ ಮತ್ತು ಗಮನ ನೀಡುತ್ತಾರೆ. ಒಟ್ಟಾರೆ ಇದು ಒಳ್ಳೆಯ ದಿನವಾಗಿದೆ.

ಸಿಂಹ :ನೀವು ಒತ್ತಡದ ಕಾರ್ಯಗಳಿಂದ ದೂರ ಉಳಿಯುವಲ್ಲಿ ಕೊಂಚ ಆತಂಕ ಅನುಭವಿಸುತ್ತೀರಿ. ನೀವು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರಮುಖ ಸಭೆಗಳು ಯಶಸ್ವಿಯಾಗಿ ಮುಗಿಯುತ್ತವೆ, ಆದರೆ ಅವು ನಿಮ್ಮನ್ನು ದಿನದ ಅಂತ್ಯಕ್ಕೆ ನಿರುತ್ಸಾಹಗೊಳಿಸುತ್ತವೆ. ನಿರಾಳಗೊಳ್ಳಲು ದಾರಿಗಳನ್ನು ಹುಡುಕಿರಿ.

ಕನ್ಯಾ :ಆರೋಗ್ಯದ ವಿಷಯಕ್ಕೆ ಬಂದರೆ ಅನಿಶ್ಚಿತತೆ ಬೇಡ. ನೀವು ಹಳೆಯ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದೀರಿ. ಆದರೆ, ಶಾಂತಿ ಮತ್ತು ಸಮೃದ್ಧಿ ದಿನದ ವಿಶೇಷತೆಗಳು. ನೀವು ಇಂದು ವಿನೋದ ಮತ್ತು ಮನರಂಜನೆಯಲ್ಲಿ ಸಮಯ ಹೂಡಿಕೆ ಮಾಡಿ- ಕೇವಲ ಬ್ಯಾಟರಿ ಚಾರ್ಜ್ ಮಾಡಿಕೊಳ್ಳಲು ಎಂದು ತಿಳಿಯಿರಿ.

ತುಲಾ : ಸರ್ಕಾರಕ್ಕೆ ಕೆಲಸ ಮಾಡುವುದು ಸದಾ ಪ್ರಮುಖ ಜವಾಬ್ದಾರಿ. ಆದರೆ, ಎಲ್ಲ ದಿನಗಳಿಗಿಂತ ಇಂದು ಸರ್ಕಾರದ ಸೇವೆಯಲ್ಲಿರುವವರಿಗೆ ಅಸಾಧಾರಣ ಮತ್ತು ಅಪೂರ್ವ. ನಿಮ್ಮ ಕ್ರಿಯೆಗಳು ಸಾಧನೆಗಳಾಗುತ್ತವೆ, ಮತ್ತು ನೀವು ನಿಮ್ಮ ಪ್ರಶಂಸನೀಯ ಸೇವೆಗೆ ಮಾನ್ಯತೆ ಪಡೆಯುವುದು ಮತ್ತು ಪುರಸ್ಕರಿಸಲ್ಪಡುವುದು ಖಂಡಿತ.

ವೃಶ್ಚಿಕ : ಇದು ವ್ಯಾಪಾರದ ಸಮಯ, ಮತ್ತು ನೀವು ಹೊಸ ಉತ್ಪನ್ನ ಬಿಡುಗಡೆ ಮಾಡುವ ಮೂಲಕ ನಿಮ್ಮ ಪ್ರತಿಸ್ಪರ್ಧಿಗಳಿಗೆ ಶಾಕ್ ನೀಡುತ್ತೀರಿ. ಆದರೆ, ತಾರೆಗಳು ಅನುಕೂಲಕರ ರೀತಿಯಲ್ಲಿ ಜೋಡಣೆಯಾಗಿವೆ, ಅವು ನೀವು ಕೆಲ ಅಡೆತಡೆಗಳನ್ನು ದಾಟಬಹುದು ಎಂದು ಸೂಚಿಸುತ್ತಿವೆ. ನಿಮ್ಮ ಸಮಯ ತೆಗೆದುಕೊಳ್ಳಿ, ತೊಂದರೆಗಳನ್ನು ಪರಿಹರಿಸಿಕೊಳ್ಳಿ ಮತ್ತು ಅಭಿಮಾನಿಗಳು ಮತ್ತು ಸಂಭ್ರಮಾಚರಣೆಗಳ ಮೂಲಕ ನಿಮ್ಮ ಉತ್ಪನ್ನ ಬಿಡುಗಡೆ ಮಾಡಿ.

ಧನು : ನಿಮ್ಮ ಒಳಗಿರುವ ಋಷಿ ಇಂದು ನಾಯಕತ್ವ ವಹಿಸುತ್ತಾನೆ. ನೀವು ಮನಃಶಾಂತಿಗೆ ನಿಮ್ಮದೇ ಔಷಧ ಸೂಚಿಸಿಕೊಳ್ಳಲಿದ್ದೀರಿ. ನೀವು ಇಂದು ಜ್ಞಾನಿ ಮತ್ತು ಸಂತೃಪ್ತರು, ನಿಮ್ಮ ಸುತ್ತಲೂ ನೀವು ಪ್ರೀತಿಯ ಸಂದೇಶ ಹರಡುತ್ತೀರಿ. ಒಟ್ಟಾರೆ, ಇಂದು ನಿಮಗೆ ಶಾಂತಿಯುತ ದಿನ ಕಾದಿದೆ.

ಮಕರ : ನಿಮ್ಮ ಅಸಾಧಾರಣ ಬೌದ್ಧಿಕ ಸಾಮರ್ಥ್ಯ ನಿಮಗೆ ಉತ್ಸಾಹಕರ ಫಲಿತಾಂಶಗಳನ್ನು ನೀಡುವುದೇ ಅಲ್ಲದೆ ನಿಮ್ಮ ಹತ್ತಿರದ ಸಹವರ್ತಿಗಳಿಗೆ ನಿಮ್ಮ ಮೌಲಿಕ ಸಲಹೆಯಿಂದ ಅವರ ವೃತ್ತಿಯಲ್ಲಿ ಮಹತ್ತರವಾಗಿ ಪ್ರಗತಿ ಕಾಣಲು ನೆರವಾಗುತ್ತದೆ. ಅಸಂಖ್ಯ ಸಮಸ್ಯೆಗಳು ನಿಮ್ಮ ದಾರಿಯಲ್ಲಿವೆ, ಆದರೆ ನಿಮಗೆ ಆತಂಕಪಡಲು ಕಾರಣವಿಲ್ಲ. ನೀವು ಅವುಗಳ ಪ್ರತಿಯೊಂದನ್ನೂ ಸುಲಭವಾಗಿ ನಿವಾರಿಸುತ್ತೀರಿ. ಅನುಷ್ಠಾನಕ್ಕೆ ಅನುಮೋದನೆ ಪಡೆದ ಪ್ರಾಜೆಕ್ಟ್ ಯಶಸ್ವಿಯಾಗಲಿದೆ ಮತ್ತು ನಿಮಗೆ ಪರ್ಫೆಕ್ಷನಿಸ್ಟ್ ಎಂಬ ಗೌರವ ತಂದುಕೊಡಲಿದೆ.

ಕುಂಭ :ನಿಮ್ಮ ಸಂವಹನ ಕೌಶಲ್ಯಗಳು ಇಂದು ಅದ್ಭುತಗಳನ್ನು ಮಾಡುತ್ತವೆ. ನಿಮ್ಮ ಪರಿಣಿತ ಉಚ್ಛಾರಣೆ ನಿಮಗೆ ಪುರಸ್ಕಾರಗಳನ್ನು ತಂದುಕೊಡುತ್ತವೆ ಮತ್ತು ಕಾರ್ಯಕ್ರಮಗಳು ಹಾಗೂ ಸಭೆಗಳಲ್ಲಿ ಅತ್ಯಂತ ಅನುಕೂಲಕರವಾಗುತ್ತವೆ. ವಾಸ್ತವವಾಗಿ ನಿಮ್ಮ ಚರ್ಚೆಗಳು ಮತ್ತು ವಾದಗಳು ಶಕ್ತಿಯುತವಾಗಿರುತ್ತವೆ. ಜನರು ನಿಮ್ಮೊಂದಿಗೆ ಒಪ್ಪದೇ ಇರುವಾಗ ಕ್ಷೋಭೆಗೊಳ್ಳದೇ ಇರುವುದು ಮುಖ್ಯ.

ಮೀನ :ನೆರೆಹೊರೆಯವರನ್ನು ಪ್ರೀತಿಸಿ’ ಎನ್ನುವ ಆಜ್ಞೆಯನ್ನು ಅಕ್ಷರಶಃ ನೀವು ಅನುಷ್ಠಾನಗೊಳಿಸುತ್ತೀರಿ, ಇದು ಧರ್ಮಗ್ರಂಥಗಳು ಇಂದು ನಿಮಗೆ ಚಿಂತನೆಗೆ ಆಹಾರ ಒದಗಿಸುತ್ತವೆ ಎನ್ನುವುದನ್ನು ಸೂಚಿಸುತ್ತದೆ. ಆಧ್ಯಾತ್ಮಿಕ ಅನ್ವೇಷಣೆಗಳು ನಿಮ್ಮನ್ನು ಸಕ್ರಿಯಾಗಿರಿಸುತ್ತವೆ. ನೀವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು.

ABOUT THE AUTHOR

...view details