ಕರ್ನಾಟಕ

karnataka

ETV Bharat / bharat

ಇಲ್ಲಿದೆ ಈ ದಿನದ ನಿಮ್ಮ ರಾಶಿ ಭವಿಷ್ಯ.. ಯಾರಿಗೆಲ್ಲ ಅದೃಷ್ಟ - ಶುಕ್ರವಾರದ ರಾಶಿ ಭವಿಷ್ಯ

ಶುಕ್ರವಾರದ ರಾಶಿ ಭವಿಷ್ಯ ಇಂತಿದೆ.

Friday astrology
ಶುಕ್ರವಾರದ ರಾಶಿ ಭವಿಷ್ಯ

By

Published : Jun 11, 2021, 6:19 AM IST

ಮೇಷ: ಇಂದು ನಿಮಗೆ ಸುಂದರ ಮತ್ತು ವಿದೇಶಿ ವಸ್ತುಗಳ ಮೇಲೆ ಕಣ್ಣಿರುತ್ತದೆ. ಈ ವಿಷಯಗಳಲ್ಲಿ ನೀವು ವ್ಯಾಪಾರ ಪ್ರಾರಂಭಿಸುವ ಸಾಧ್ಯತೆಯೂ ಇರುತ್ತದೆ. ಆದಾಗ್ಯೂ, ನೀವು ಅದರ ಕುರಿತು ಇನ್ನೂ ತೀರ್ಮಾನಕ್ಕೆ ಬಂದಿಲ್ಲ. ಆದರೆ ನಿಮ್ಮ ಆಯ್ಕೆಯನ್ನು ಮುಕ್ತವಾಗಿರಿಸಿಕೊಳ್ಳುತ್ತೀರಿ.

ವೃಷಭ:ನೀವು ಉದ್ಯೋಗದಲ್ಲಿ ಸಾಕಷ್ಟು ಕೆಲಸಗಳಿಂದ ಒತ್ತಡಕ್ಕೆ ಸಿಲುಕುತ್ತೀರಿ. ಆದರೆ, ನೀವು ತುಂಬಾ ಕಾಳಜಿ ವಹಿಸುವವರೊಂದಿಗೆ ಹೊರಗಡೆ ಸುತ್ತಾಡಿ ಆನಂದಿಸಲು ನಿಮಗೆ ನೆರವಾಗುತ್ತದೆ. ನೀವು ಎಲ್ಲವನ್ನೂ ಮರೆತು ಆನಂದಿಸುವುದು ಸೂಕ್ತ. ಅದು ನಿಮಗೆ ನಿಜಕ್ಕೂ ಅಗತ್ಯವಾಗಿದೆ.

ಮಿಥುನ: ಈ ದಿನ ನೀವು ಶಕ್ತಿ ಮತ್ತು ಉತ್ಸಾಹದಿಂದ ತುಂಬಿ ತುಳುಕುವ ದಿನವಾಗಿದೆ. ನಿಮಗೆ ಜೀವನ ಕುರಿತು ಭರವಸೆಯ ನೋಟವಿದೆ ಮತ್ತು ಇದು ನಿಮಗೆ ಯಶಸ್ಸು ತಂದುಕೊಡುವಲ್ಲಿ ನೆರವಾಗುತ್ತದೆ. ನಿಮ್ಮ ಮುಕ್ತವಾದ ಇಚ್ಛಾಶಕ್ತಿಯನ್ನು ಬಳಸಿ ಇಷ್ಟಪಡುವ ಕೆಲಸಗಳನ್ನು ತೆಗೆದುಕೊಳ್ಳುತ್ತೀರಿ. ಈ ದಿನ ಒತ್ತಡದಿಂದ ಕೂಡಿದ್ದರೂ ಅದು ನಿಮಗೆ ಪುರಸ್ಕಾರ ತಂದುಕೊಡುತ್ತದೆ.

ಕರ್ಕಾಟಕ:ನಿಮಗೆ ಅವಿಶ್ರಾಂತ ಮತ್ತು ಕಿರಿಕಿರಿಯ ಮನಸ್ಥಿತಿಯ ಸಾಧ್ಯತೆ ಇದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶಾಂತ ಮತ್ತು ಸಮಚಿತ್ತತೆಯಿಂದ ಇರಿ. ಹಾಗೆ ಮಾಡಿದಲ್ಲಿ ನೀವು ಸದಾ ಜೀವನದಲ್ಲಿ ಯಶಸ್ವಿಯಾಗುತ್ತೀರಿ. ನೀವು ಕೋಪಗೊಳ್ಳುತ್ತಿದ್ದರೆ ಪ್ರತಿಕೂಲತೆಯನ್ನು ನಿವಾರಿಸುವುದು ಕಷ್ಟ.

ಸಿಂಹ: ಇಂದು ನೀವು ಅಸಾಧಾರಣ ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ದೃಢ ನಿರ್ಧಾರ ಕೈಗೊಳ್ಳಲು ಶಕ್ತರಾಗುತ್ತೀರಿ. ಇಂದು ನಿಮ್ಮ ಕೆಲಸಗಳನ್ನು ಪೂರೈಸುವಲ್ಲಿ ಯಾವುದೇ ಕಷ್ಟಗಳನ್ನು ಕಾಣುವುದಿಲ್ಲ ಮತ್ತು ಯಶಸ್ಸು ಸಾಧಿಸುತ್ತೀರಿ.

ಕನ್ಯಾ:ನೀವು ಅತ್ಯಂತ ಸ್ಫೂರ್ತಿಯುತವಾಗಿದ್ದೀರಿ. ನಿಮ್ಮ ಸೃಜನಶೀಲ ಪ್ರತಿಭೆಗಳು ಮತ್ತು ಸಾಮರ್ಥ್ಯಗಳು ನಿಮ್ಮ ಶ್ರೇಷ್ಠ ಕಲಾವಿದರಾಗಿ ಪ್ರತ್ಯೇಕವಾಗಿ ನಿಲ್ಲಿಸುತ್ತವೆ. ನಿಮ್ಮ ಸೃಜನಶೀಲತೆಗೆ ದಾರಿ ಮಾಡಿಕೊಟ್ಟರೆ ಮಾತುಗಳು ಸರಾಗವಾಗಿ ಹರಿದುಬರುತ್ತವೆ. ನೀವು ಪ್ರದರ್ಶನ ಕಲೆಗಳು ಅಥವಾ ಬರಹವನ್ನು ಹವ್ಯಾಸಗಳಾಗಿ ಹೊಂದುವುದು ಸೂಕ್ತ.

ತುಲಾ:ಬಾಕಿ ಇರುವ ಯಾವುದೇ ಕಾನೂನು ಸಮಸ್ಯೆಗಳು ಇಂದು ನ್ಯಾಯಾಲಯದಲ್ಲಿ ಅಥವಾ ನ್ಯಾಯಾಲಯದ ಹೊರಗಡೆ ಪರಿಹಾರವಾಗಬಹುದು. ನಿಮ್ಮ ಕಾರ್ಯದೊತ್ತಡ ಇಂದು ಕಡಿಮೆಯಾಗಲಿದೆ ಮತ್ತು ಕೆಲ ಸಮಸ್ಯಾತ್ಮಕ ಸನ್ನಿವೇಶಗಳಿಂದ ದೂರ ಹೋಗಲು ಶಕ್ತರಾಗುತ್ತೀರಿ.

ವೃಶ್ಚಿಕ:ಇಂದು ನೀವು ನಿಮ್ಮ ಕೆಲಸದಲ್ಲಿ ಮುಳುಗಿಹೋಗುತ್ತೀರಿ. ಹಗಲಿನ ವೇಳೆ ನೀವು ಕರ್ತವ್ಯಗಳು ಮತ್ತು ಜವಾಬ್ದಾರಿಗಳಲ್ಲಿ ತುಂಬಿರುತ್ತೀರಿ. ಆದರೆ, ಸಂಜೆಯ ವೇಳೆಗೆ ಎಂದಿನಂತೆ ಉತ್ಸಾಹದಲ್ಲಿದ್ದು, ನಿಮ್ಮ ಮಿತ್ರರೊಂದಿಗೆ ಹೊರಗಡೆ ಹೋಗಿ ಆರಾಮವಾಗಿ ಕಾಲ ಕಳೆಯಿರಿ.

ಧನು:ಪ್ರೀತಿಯ ಪರಿಶ್ರಮದಿಂದ ನಿಮಗೆ ಎಲ್ಲವು ದೊರಕುತ್ತದೆ. ಸುಲಭದ ಆಸೆಗಳಿಗೆ ಬಲಿಯಾಗದಿರಿ. ಜೊತೆಗೆ ನಿಮ್ಮ ಪ್ರತಿಷ್ಠೆಯನ್ನು ಎಲ್ಲ ರೀತಿಯಿಂದಲೂ ಕಾಪಾಡಿಕೊಳ್ಳಿ.

ಮಕರ: ಇಂದು ಸಾಕಷ್ಟು ಕೆಲಸದಲ್ಲಿ ಸಿಲುಕುತ್ತೀರಿ ಮತ್ತು ದಿನದ ಅಂತ್ಯಕ್ಕೆ ಹೆಚ್ಚು ಆಯಾಸಗೊಳ್ಳುತ್ತೀರಿ. ವ್ಯಾಪಾರ ಜಗತ್ತಿಗೆ ಬಂದರೆ ತೀವ್ರ ಸ್ಪರ್ಧೆಯಿದೆ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ವ್ಯಾಪಾರ ಹಾಗೂ ಪ್ರತಿಷ್ಠೆಗೆ ಧಕ್ಕೆ ತರಲು ಒಂದು ಸಣ್ಣ ಅವಕಾಶ ದೊರೆತರೂ ಸಾಕು ಎಂದು ಕಾಯುತ್ತಿದ್ದಾರೆ.

ಕುಂಭ: ಶೈಕ್ಷಣಿಕವಾಗಿ ನೀವು ಅತ್ಯಂತ ಉತ್ತಮ ಸಾಧನೆ ಮಾಡಿದ್ದೀರಿ. ನೀವು ಸಾಕಷ್ಟು ಜನರಿಗೆ ಸ್ಫೂರ್ತಿ ತುಂಬುತ್ತೀರಿ ಮತ್ತು ಉತ್ತೇಜಿಸುತ್ತೀರಿ. ಜೊತೆಗೆ ಅಭಿಮಾನಿಗಳನ್ನೂ ಗಳಿಸುತ್ತೀರಿ. ಆದರೆ ಇದರ ಅರ್ಥ ನೀವು ಎದೆಯುಬ್ಬಿಸಿ ನಡೆಯಬೇಕಿಲ್ಲ. ಇತರರ ಕುರಿತು ವಿನಯ ಹಾಗೂ ಸೌಜನ್ಯಪೂರಿತರಾಗಿರಿ.

ಮೀನ: ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ಕಠಿಣ ಪರಿಶ್ರಮ ಪಡುವವರು ಇಂದು ಉತ್ತಮ ಸಾಧನೆ ತೋರುತ್ತಾರೆ. ವ್ಯಾಪಾರಕ್ಕೆ ಇದು ಒಳ್ಳೆಯ ದಿನ. ನಿಮ್ಮ ಉದ್ಯೋಗ-ವ್ಯಾಪಾರದಲ್ಲಿ ಸಾಕಷ್ಟು ಹೊಸ ವಿಷಯಗಳನ್ನು ಮಾಡಲು ನೀವು ಶಕ್ತರಾಗುತ್ತೀರಿ. ದೇವರ ಕೃಪೆಯಿಂದ ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ. ಆದರೆ ನೀವು ನಿರುತ್ಸಾಹಗೊಳ್ಳದೆ ಕಠಿಣ ಪರಿಶ್ರಮ ಪಡಬೇಕು.

ABOUT THE AUTHOR

...view details