ನವದೆಹಲಿ :ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುಂತೆ ಒತ್ತಾಯಿಸಿ ಅನ್ನದಾತರು ಗಾಜಿಪುರ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ 35ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೇಂದ್ರ ಸರ್ಕಾರ ರೈತರ ಜೊತೆ ಮತ್ತೆ ಮಾತುಕತೆಗೆ ಮುಂದಾಗಿದೆ.
ಇದೀಗ, ಯುಪಿ ಗೇಟ್‌ನಲ್ಲಿ ರೈತರ ಆಂದೋಲನವನ್ನು ಮುನ್ನಡೆಸುತ್ತಿರುವ ರಾಕೇಶ್ ಟಿಕಾಯತ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಇವರು 1988ರಲ್ಲಿ ತಮ್ಮ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ನೇತೃತ್ವದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಆಗ ಸರ್ಕಾರ ರೈತರ ಬೇಡಿಕೆಗಳಿಗೆ ತಲೆಬಾಗಬೇಕಾಯಿತು.
ಈ ಹಿನ್ನೆಲೆ ಇಂದು ಕೇಂದ್ರದ ಜೊತೆ ನಡೆಯಲಿರೋ 7ನೇ ಸುತ್ತಿನ ಮಾತುಕತೆ ಪಂದ್ಯದಲ್ಲಿ ಕೂಡ ನಾವೇ ಗೆಲ್ಲಲಿದ್ದೇವೆ ಎಂದು ರಾಕೇಶ್ ಟಿಕಾಯತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಂದೆಯವರ ಹೋರಾಟದ ಸಮಯದಲ್ಲಿ ಅಂದಿನ ಸರ್ಕಾರವು ರೈತರಿಗೆ ಸ್ಪಂದಿಸುತ್ತಿತ್ತು. ಆದರೆ, ಇಂದಿನ ಸರ್ಕಾರವು ರೈತರಿಗೆ ತೊಂದರೆ ನೀಡುತ್ತಿದೆ ಎಂದು ಅವರು ಹೇಳಿದರು.