ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆ ನವೆಂಬರ್ 26ರಂದು ಒಂದು ವರ್ಷ ಪೂರೈಸಲಿದೆ. ಇದೇ ವೇಳೆ ಹೋರಾಟ ಇನ್ನಷ್ಟು ತೀವ್ರಗೊಳಿಸುವ ಸೂಚನೆಯನ್ನ ರೈತ ಮುಖಂಡ ರಾಕೇಶ್ ಟಿಕಾಯತ್ ನೀಡಿದ್ದಾರೆ. 26ರ ಒಳಗೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ರವಾನಿಸಿದ್ದಾರೆ.
ಈ ಕುರಿತಂತೆ ದೆಹಲಿಯಲ್ಲಿ ಮಾತನಾಡಿರುವ ಅವರು, ಗಾಜಿಪುರ ಗಡಿ ಈ ಮೊದಲು ರೈತ ಕ್ರಾಂತಿಯ ಕೇಂದ್ರವಾಗಿತ್ತು. ಆದರೆ. ಇದೀಗ ನಮ್ಮ ಮನೆಯಾಗಿ ಬದಲಾಗಿದೆ. ಕೇಂದ್ರ ಸರ್ಕಾರದ ಎಲ್ಲಾ ಮೂರು ಕೃಷಿ ಕಾನೂನುಗಳ ಹಿಂತೆಗೆದುಕೊಂಡ ದಿನವೇ ನಾವು ದೀಪಾವಳಿ ಆಚರಿಸುತ್ತೇವೆ. ಈ ಗಡಿಯೇ ನನ್ನ ಮನೆ ರೈತರೆ ನನ್ನ ಕುಟುಂಬ ಎಂದಿದ್ದಾರೆ.