ಮೇಷ:ಸದ್ಯದಲ್ಲೇ ನೀವು ನಿಮ್ಮ ದಾರಿಯಲ್ಲಿ ಬರುವ ಹೆಚ್ಚು ಒಪ್ಪಂದಗಳ ಮೂಲಕ ನಿಮ್ಮ ವ್ಯಾಪಾರದ ಮೈಲಿಗಲ್ಲುಗಳನ್ನು ರೂಪಿಸಿಕೊಳ್ಳಲು ಶಕ್ತರಾಗುತ್ತೀರಿ. ನಿಮ್ಮ ಪ್ರಯತ್ನಗಳಿಗೆ ಅನುಗುಣವಾಗಿ ಪ್ರತಿಫಲ ಪಡೆಯುತ್ತೀರಿ.
ವೃಷಭ:ಇಂದು ನೀವು ಕೆಲ ಲೆಕ್ಕಾಚಾರದ ನಿರ್ಧಾರಗಳನ್ನು ಕೈಗೊಳ್ಳಲು ನಿಮ್ಮ ವಿಶ್ಲೇಷಣಾತ್ಮಕ ಕೌಶಲ್ಯಗಳು ಅಗತ್ಯವಾಗಬಹುದು. ವಿಷಯಗಳು ನಿಮ್ಮ ಕಡೆಗೆ ಸಾಗುವಂತೆ ಮಾಡಲೂಬಹುದು. ನಿಮಗೆ ಹೊಡೆತ ನೀಡುವ ಯಾವುದೇ ಕಹಿ ಆಲೋಚನೆಗಳಿಂದ ದೂರ ಉಳಿಯಲು ಬಯಸಬಹುದು. ಆದರೆ ಈ ದಿನದ ಅಂತ್ಯಕ್ಕೆ ನಿಮ್ಮ ಬಹುತೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ.
ಮಿಥುನ : ನಿಮ್ಮ ಆ ಒಂದು ಕ್ರಿಯೆ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಎಂದು ನೆನಪಿನಲ್ಲಿಟ್ಟುಕೊಳ್ಳಿ. ಇತರರು ನಿಮ್ಮ ಕುರಿತು ತಪ್ಪು ತಿಳಿವಳಿಕೆ ಹೊಂದುವ ಸಾಧ್ಯತೆ ಇದೆ. ನಿಮ್ಮಷ್ಟಕ್ಕೆ ನೀವು ಕೊಂಚ ಸಮಯ ಕಳೆಯುವುದು ಉಪಯುಕ್ತ ಎಂದುಕೊಳ್ಳುತ್ತೀರಿ. ಅದಲ್ಲದೆ, ನೀವು ಮಿತ್ರರೊಂದಿಗೆ ಧಾರಾಳವಾಗಿ ಖರ್ಚು ಮಾಡುವ ಮೂಲಕ ಅವರನ್ನು ಪ್ರಭಾವಿತಗೊಳಿಸುತ್ತೀರಿ.
ಕರ್ಕಾಟ:ನೀವು ನಿಮ್ಮ ಪ್ರೀತಿಪಾತ್ರರ ಕುರಿತು ಬಹಳ ಕಾಳಜಿ ವಹಿಸುತ್ತೀರಿ. ನೀವು ಅವರ ಕುರಿತು ಏನು ಭಾವಿಸುತ್ತೀರಿ ಎಂದು ಹೇಳದೆ ಅವರ ಭಾವನೆಗಳನ್ನು ರಕ್ಷಿಸಲು ಪ್ರಯತ್ನಿಸುತ್ತೀರಿ. ಮಧ್ಯಾಹ್ನ ಸಣ್ಣ ಪ್ರವಾಸವನ್ನು ಕೊಳ್ಳಲು ಆಯೋಚನೆ ಮಾಡುತ್ತೀರಾ. ನೀವು ಚೆನ್ನಾಗಿ ಕಾಣಲು ಹಣ ವ್ಯಯ ಮಾಡುತ್ತೀರಿ.
ಸಿಂಹ:ಈ ದಿನ ಸಂಪತ್ತು ಮತ್ತು ಅದೃಷ್ಟ ಎರಡೂ ಇಂದು ನಿಮಗೆ ಜೊತೆಯಾಗಿರುವಂತೆ ಕಾಣುತ್ತಿದೆ. ಹಣ ಮತ್ತು ಅಧಿಕಾರ ಅನಿವಾರ್ಯವಾದರೂ ದಿನ ಮುಂದಕ್ಕೆ ಸಾಗಿದಂತೆ ನೀವು ನಿಮ್ಮ ಗಮನಾರ್ಹ ವ್ಯಕ್ತಿಗೆ ಉತ್ತಮ ಆಭರಣ ಕೊಡಿಸಲು ದುಬಾರಿಯಾಗಿ ಖರ್ಚು ಮಾಡಲು ಬಯಸುತ್ತೀರಿ. ಅದೇ ಸಮಯಕ್ಕೆ ನಿಮ್ಮ ಹಣ ಎಲ್ಲಿಗೆ ಹೋಗುತ್ತದೆ ಎನ್ನುವುದರ ಕುರಿತು ಕೊಂಚ ಎಚ್ಚರದಿಂದಿರಿ.
ಕನ್ಯಾ:ನಿಮ್ಮ ಕುಟುಂಬ ಇಂದು ನಿಮ್ಮ ಸಂತೋಷದ ಮನಸ್ಥಿತಿಯನ್ನು ನಿರ್ಧರಿಸಲಿದೆ. ಇದರಿಂದಾಗಿ ನೀವು ಅವರೊಂದಿಗೆ ಕಾಲ ಕಳೆಯಲು ಮತ್ತು ಅವರಿಗೆ ದುಬಾರಿ ಉಡುಗೊರೆಗಳನ್ನು ಕೊಡಿಸಿ ಸಂತೋಷಪಡಿಸಲು ಪ್ರಯತ್ನಿಸುತ್ತೀರಿ. ದಿನದ ನಂತರದಲ್ಲಿ ನೀವು ಪ್ರಣಯದಲ್ಲಿ ತೊಡಗಿಕೊಳ್ಳಲು ಬಯಸುವ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ.
ತುಲಾ:ನೀವು ಕವಲುದಾರಿಯಲ್ಲಿರುತ್ತೀರಿ, ಆದರೆ ನಿಮಗೆ ಹಲವು ಅವಕಾಶಗಳಿರುವುದರಿಂದ ನೀವು ನಿರಾಶೆಗೊಳ್ಳುವ ಅಗತ್ಯವಿಲ್ಲ. ದಿನ ಮುಂದುವರಿದಂತೆ ನಿಮ್ಮ ಜೀವನದಲ್ಲಿ ಹಣಕಾಸಿನ ಅನುಕೂಲಗಳು ನಿಮ್ಮ ದಾರಿಯಲ್ಲಿ ಬರುತ್ತವೆ. ನಿಮ್ಮ ಭವಿಷ್ಯ ಉತ್ತಮಪಡಿಸಲು ನೆರವಾಗುವ ಯಾವುದೋ ಒಂದರ ಹುಡುಕಾಟದಲ್ಲಿರುತ್ತೀರಿ, ಅದು ನಿಮಗೆ ಲಭಿಸುತ್ತದೆ. ಇಂದು ನಿಮ್ಮ ಎಲ್ಲಾ ಬಯಕೆಗಳೂ ಈಡೇರುವ ಸಾಧ್ಯತೆ ಇದೆ.
ವೃಶ್ಚಿಕ:ಈ ದಿನ ನಿಮ್ಮಂತೆಯೇ ಆಲೋಚಿಸುವ ಜನರೊಂದಿಗೆ ಸೇರಿಕೊಳ್ಳುವುದರಿಂದ ಉತ್ಸಾಹದಿಂದ ಕೂಡಿರುತ್ತದೆ. ಈ ದಿನ ನಿಮ್ಮನ್ನು ಒಂದಲ್ಲಾ ಒಂದು ಚಟುವಟಿಕೆಯಿಂದ ತೊಡಗಿಸಿರುತ್ತದೆ. ಎಚ್ಚರದಿಂದಿರಿ ಉದ್ವೇಗಗೊಳ್ಳಬೇಡಿ, ಅದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಈ ದಿನ ನಿಮಗೆ ಅತ್ಯಂತ ಶಕ್ತಿ ನೀಡುತ್ತದೆ. ನೀವು ಪ್ರೀತಿಸುವ ಜನರೊಂದಿಗೆ ಹಾರಾಟ ಮಾಡಲು ಬಯಸುತ್ತೀರಿ.
ಧನು:ನಿಮ್ಮ ವೈಯಕ್ತಿಕ ವಸ್ತುಗಳ ಕುರಿತು ಕೊಂಚ ಇಷ್ಟ ಹೆಚ್ಚಾಗಿರುತ್ತದೆ. ನೀವು ಅಭೂತಪೂರ್ವ ಪ್ರೇಮ ವ್ಯವಹಾರಗಳನ್ನು ಹೊಂದುವ ಅದೃಷ್ಟವಂತರಾಗಿರಬಹುದು. ಇಂದು ನೀವು ಮುಂದೂಡುತ್ತಿದ್ದ ಕೆಲಸ ಸುಲಭವಾಗಿ ಪೂರ್ಣಗೊಳ್ಳುತ್ತದೆ. ಈ ಅದೃಷ್ಟದ ದಿನದಂದು ತಾರೆಗಳ ಜೋಡಣೆ ನಿಮಗೆ ಭರವಸೆ ತರುತ್ತದೆ.
ಮಕರ: ನಿರೀಕ್ಷೆಗಳು ಮಿಶ್ರ ಭಾವನೆಗಳನ್ನು ಮೂಡಿಸುತ್ತವೆ. ನೀವು ಸುತ್ತಲಿನವರಿಂದ ಅಪಾರವಾಗಿ ನಿರೀಕ್ಷೆ ಮಾಡುವಾಗ ನಿರೀಕ್ಷಿತ ಫಲಿತಾಂಶಗಳನ್ನು ನೀವು ಪಡೆಯದೆ ಇರಬಹುದು. ನೀವು ಸ್ಮಾರ್ಟ್ ಯೋಜನೆ ಹಾಗೂ ಆಲೋಚನೆಗಳನ್ನು ಕಾರ್ಯ ರೂಪಕ್ಕೆ ತರಬೇಕು. ಹಣ ಖರ್ಚು ಮಾಡುವುದು ಕ್ಲಿಷ್ಟವಾಗುತ್ತದೆ. ನೀವು ಕಡಿಮೆ ಖರ್ಚು ಮಾಡಲು ಬಯಸುತ್ತೀರಿ. ಆದಾಗ್ಯೂ, ಸಾಮಾಜಿಕವಾಗಿ ಈ ಮಾದರಿ ನಿಮ್ಮ ಪ್ರತಿಷ್ಠೆಗೆ ಧಕ್ಕೆಯುಂಟು ಮಾಡುತ್ತದೆ.
ಕುಂಭ:ನಿಮ್ಮ ಕೆಲಸದಲ್ಲಿ ಅತ್ಯಂತ ಪ್ರಮುಖ ದಿನಗಳಲ್ಲಿ ಒಂದಾಗಿರುವುದರಿಂದ ಶಿಸ್ತಾಗಿ ಬಟ್ಟೆ ತೊಟ್ಟು ಹೊರಡಿ. ಇದು ಪ್ರಭಾವಗೊಳಿಸುವ ದಿನ ಮತ್ತು ಆದ್ದರಿಂದ ನಿರ್ಧಾರಗಳನ್ನು ಕೈಗೊಳ್ಳುವಾಗ ಜಾಣರಾಗಿರುವುದು ಮುಖ್ಯ. ದಿಢೀರ್ ನಿರ್ಣಯಗಳಿಗೆ ಬರುವುದು ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಎಚ್ಚರದಿಂದಿರಿ.
ಮೀನ:ಇಂದು ಉತ್ಸಾಹ ಮತ್ತು ಹುರುಪು ತುಂಬಿದ ಉಜ್ವಲ ದಿನವಾಗಿದೆ. ನೀವು ಹೊಸ ಜನರನ್ನು ಭೇಟಿಯಾಗುವ ಮೂಲಕ ನಿಮ್ಮ ಸಾಮಾಜಿಕ ವೃತ್ತವನ್ನು ಬೆಳೆಸಿಕೊಳ್ಳಬಹುದು ಅಥವಾ ನಿಮ್ಮ ವಿಶೇಷ ವ್ಯಕ್ತಿಯೊಂದಿಗೆ ಕಾಲ ಕಳೆಯಬಹುದು. ಯಾವುದೇ ನವೋತ್ಸಾಹ ತುಂಬುವ ವಸ್ತುಗಳು ನಿಮ್ಮ ಶಕ್ತಿ, ಡೈನಮಿಸಂ ಮತ್ತು ಸಾಮರ್ಥ್ಯಕ್ಕೆ ಕೆಲಸ ಮಾಡುವುದಿಲ್ಲ. ಕೆಲಸದಲ್ಲಿ ಅಥವಾ ವೈಯಕ್ತಿಕ ಜೀವನದಲ್ಲಿ ಹೊಸ ಯೋಜನೆಗಳನ್ನು ತೆಗೆದುಕೊಳ್ಳಲು ನೀವು ಭಯಪಡುವ ಸಾಧ್ಯತೆ ಇದೆ.