ಹೈದರಾಬಾದ್:ಮನರಂಜನಾ ಲೋಕದಲ್ಲಿ ಈಟಿವಿ ನೆಟ್‌ವರ್ಕ್ ದೊಡ್ಡ ಸ್ಥಾನ ಹೊಂದಿದೆ. ಕಿರಿಯ ವೀಕ್ಷಕರಾದ ಮಕ್ಕಳ ವಿಷಯಕ್ಕೆ ಸಂಬಂಧಿಸಿದಂತೆಯೂ ಹಿಂದೆ ಬೀಳದ ಸಂಸ್ಥೆ ಅವರಿಗಾಗಿ "ಈಟಿವಿ ಬಾಲ ಭಾರತ" ಪ್ರತ್ಯೇಕ ವಾಹಿನಿ ಹೊಂದಿದೆ. ಇದರಲ್ಲಿ ಆನಿಮೇಟೆಡ್ ಸರಣಿಗಳು ಮತ್ತು ವ್ಯಂಗ್ಯಚಿತ್ರಗಳೊಂದಿಗೆ ಉತ್ತಮವಾದ ಮತ್ತು ರೋಮಾಂಚನಕಾರಿ ಕಥಾ ಸರಣಿಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಬಾರಿಯ ಬೇಸಿಗೆ ರಜೆಯಲ್ಲಿ ಮಕ್ಕಳನ್ನು ರಂಜಿಸಲು ಇನ್ನಷ್ಟು ಸರಣಿಗಳನ್ನು ವಾಹಿನಿ ಭಿತ್ತರಿಸುತ್ತಿದೆ.
ಬೇಸಿಗೆ ರಜೆಯಲ್ಲಿ ಯಾವೆಲ್ಲಾ ಕಾರ್ಯಕ್ರಮ ಪ್ರಸಾರ :ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಏಪ್ರಿಲ್ 1 ರಿಂದಲೇ ನೂತನ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ವಾಹಿನಿಯು ಮಕ್ಕಳನ್ನು ರಂಜಿಸಲು ಭಾರತೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಆಧಾರದ ಮೇಲೆ ಹಲವು ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.
ಸಾಹಸ ಮತ್ತು ಆ್ಯಕ್ಷನ್ ಆಧರಿತ 'ಡೆನ್ನಿಸ್ ಮತ್ತು ಗ್ನಾಶರ್', ಬೇಬಿಸಿಟ್ಟಿಂಗ್ ಮಕ್ಕಳಿಗಾಗಿ 'ಬೇಬಿ ಶಾರ್ಕ್', ಉತ್ತಮ ಮನರಂಜನೆ ಮತ್ತು ಹಾಸ್ಯಭರಿತ ಜನಪ್ರಿಯವಾದ ‘ಸ್ಪಾಂಜ್‌ಬಾಬ್ ಸ್ಕ್ವೇರ್ಪ್ಯಾಂಟ್ಸ್' ಎಂಬ ನೂತನ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿದೆ..
ಹೊಸ ಕಾರ್ಯಕ್ರಮಗಳಲ್ಲದೇ, ವಾಹಿನಿಯಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿರುವ ಪ್ರಮುಖ ಮೂರು ಕಾರ್ಯಕ್ರಮಗಳಾದ ಮಹಿಳಾ ಆಧರಿತ ಶೋ ಆದ 'ದಿ ಸಿಸ್ಟರ್ಸ್', ಕ್ಲಾಸಿಕ್ ಅಡ್ವೆಂಚರ್ ಸೀರೀಸ್ 'ದಿ ಜಂಗಲ್ ಬುಕ್' ಮತ್ತು 'ಪಾಂಡೇಜಿ ಪೆಹೆಲ್ವಾನ್’ ಅಲ್ಲದೇ, ಈಟಿವಿ ಬಾಲ ಭಾರತದ್ದೇ ಕಥಾನಕವಾದ ಸೂಪರ್‌ಹೀರೋ ಕೈಲಾಸಪುರ ಕೂಡ ಈ ಬಾರಿಯ ಬೇಸಿಗೆಯಲ್ಲಿ ಮಕ್ಕಳನ್ನು ರಂಜಿಸಲಿವೆ.
ಸ್ಪಾಂಜ್‌ಬಾಬ್ ಸ್ಕ್ವೇರ್ಪ್ಯಾಂಟ್ಸ್:ಸ್ಪಾಂಜ್‌ಬಾಬ್ ಸ್ಕ್ವೇರ್ಪ್ಯಾಂಟ್ಸ್ ಸಮುದ್ರದ ಅಡಿ ವಾಸಿಸುವ ಸ್ಪಂಜುವಾಗಿದ್ದು, ರೆಸ್ಟೋರೆಂಟ್ ಅನ್ನು ನಡೆಸಿಕೊಂಡು ಸರಳವಾಗಿ ಜೀವನವನ್ನು ನಡೆಸುತ್ತದೆ. ಸ್ಪಂಜು ಎಂಬ ಕಾರ್ಟೂನ್ ತಮಾಷೆಗಳು ಮಕ್ಕಳಿಗೆ ಬಹುಪ್ರಿಯವಾಗಿರಲಿದೆ.
ಬೇಬಿ ಶಾರ್ಕ್:ಬೇಬಿ ಶಾರ್ಕ್ ತನ್ನ ಕುಟುಂಬದೊಂದಿಗೆ ವಾಸಿಸುವ ಕಾರ್ಟೂನ್ ಪ್ರಾಣಿಯಾಗಿದೆ. ಅದು ಮತ್ತು ಅವನ ಸ್ನೇಹಿತ ವಿಲಿಯಂ ಮಾಡುವ ಮೋಜಿನ ಜೊತೆ ನೀವು ನಲಿಯಬಹುದು.
ಡೆನ್ನಿಸ್ ಮತ್ತು ಗ್ನಾಶರ್:ಈ ಕಥೆಯು ಡೆನ್ನಿಸ್ ಎಂಬ ಹುಡುಗ ಮತ್ತು ಅವನ ಸ್ನೇಹಿತರಾದ ಗ್ನಾಶರ್, ರೂಬಿ, ಜೆಜೆ ಮತ್ತ್ತು ಪೈಫೇಸ್ ಅವರ ಸುತ್ತ ಹೆಣೆದ ಕಥೆಯಾಗಿದೆ. ಈ ಸರಣಿಯು ಅವರ ಶಾಲಾ ಜೀವನದ ಸಮಸ್ಯೆಗಳು ಮತ್ತು ರೋಚಕತೆಗಳನ್ನು ಹೊಂದಿದೆ. ಇದು ಮಕ್ಕಳನ್ನು ಬೇರೆಯದೇ ಜಗತ್ತಿಗೆ ಕೊಂಡೊಯ್ಯುತ್ತದೆ.