ಕರ್ನಾಟಕ

karnataka

ETV Bharat / bharat

ಅತ್ಯುತ್ತಮ ಪ್ರಿಸ್ಕೂಲ್​ ಶೋ ಸೇರಿ ವಿವಿಧ ಪ್ರಶಸ್ತಿ ಗೆದ್ದ 'ಈಟಿವಿ ಬಾಲ ಭಾರತ' - ಈಟಿವಿ ಭಾರತ ಕರ್ನಾಟಕ

ಈಟಿವಿ ಸಂಸ್ಥೆಯಿಂದ ಮಕ್ಕಳಿಗಾಗಿ ಆರಂಭಗೊಂಡಿರುವ ಬಾಲ ಭಾರತ ವಿವಿಧ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

Etv Bharat
Etv Bharat

By

Published : Aug 30, 2022, 7:51 PM IST

ಹೈದರಾಬಾದ್​​(ತೆಲಂಗಾಣ):2021ರ ಏಪ್ರಿಲ್ ತಿಂಗಳಲ್ಲಿ ಲೋಕಾರ್ಪಣೆಗೊಂಡಿರುವ 'ಈಟಿವಿ ಬಾಲ ಭಾರತ' ಅನೇಕ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಮುಖ್ಯವಾಗಿ ಅತ್ಯುತ್ತಮ ಪ್ರಿಸ್ಕೂಲ್ ಶೋ, ಅನಿಮೇಟೆಡ್ ಪಾತ್ರದ ಅತ್ಯುತ್ತಮ ಬಳಕೆ ಸೇರಿದಂತೆ ಅತ್ಯುತ್ತಮ ಅನಿಮೇಷನ್ ಹಾಡು ವಿಭಾಗದಲ್ಲೂ ಪ್ರಶಸ್ತಿ ಗೆದ್ದಿದೆ.

ಇತ್ತೀಚೆಗೆ ನಡೆದ ಕಿಡ್ಸ್, ಅನಿಮೇಷನ್ ಮತ್ತು ಮೋರ್ (ಕೆಎಎಂ) ಮತ್ತು ಆನ್ ಅವಾರ್ಡ್ ಸಮ್ಮಿಟ್‌ನ ಮೂರನೇ ಆವೃತ್ತಿಯ ಮೂರು ವಿಭಾಗದಲ್ಲಿ ಈಟಿವಿ ಬಾಲ ಭಾರತ ವಿಜೇತರಾಗಿ ಹೊರಹೊಮ್ಮಿದೆ. ಮಕ್ಕಳಿಗೆ ಮನರಂಜನೆ ನೀಡುವ ಉದ್ದೇಶದಿಂದ ETV ನೆಟ್‌ವರ್ಕ್​​ನ ಬಾಲ ಭಾರತ ಕನ್ನಡ ಸೇರಿದಂತೆ 12 ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ:ಈಟಿವಿ ಸಂಸ್ಥೆಯಿಂದ ಮಕ್ಕಳಿಗಾಗಿ ಹೊಸ ಕನ್ನಡ ಚಾನಲ್​: ನಿಮ್ಮ ಮನೆಯಂಗಳಕ್ಕೆ 'ಈಟಿವಿ ಬಾಲ ಭಾರತ'

ಚಾನಲ್​​​​ನಲ್ಲಿ ಅತ್ಯುತ್ತಮ ಪ್ರಿಸ್ಕೂಲ್ ಶೋ, ವಿಸ್ಡಮ್ ಟ್ರೀ- ನೈತಿಕ ಕಥೆಗಳು, ಟಿವಿಸಿ ಬ್ರ್ಯಾಂಡ್‌ನಲ್ಲಿ ಅನಿಮೇಟೆಡ್ ಪಾತ್ರದ ಅತ್ಯುತ್ತಮ ಬಳಕೆ, ಪುಷ್ಅಪ್ ಚಾಲೆಂಜ್ ಮತ್ತು ಅತ್ಯುತ್ತಮ ಆನಿಮೇಷನ್ ಹಾಡು, ಅಭಿಮನ್ಯು ದಿ ಯಂಗ್ ಯೋಧಾ ಇದರಲ್ಲಿ ಮೂಡಿ ಬರುತ್ತಿವೆ.

ಮುಖ್ಯವಾಗಿ 4ರಿಂದ 14 ವರ್ಷದೊಳಗಿನ ಮಕ್ಕಳನ್ನ ಮುಖ್ಯವಾಗಿಟ್ಟುಕೊಂಡು ಬಾಲ ಭಾರತ ಕಾರ್ಯನಿರ್ವಹಿಸುತ್ತಿದೆ. ಆಕ್ಷನ್, ಸಾಹಸ, ಹಾಸ್ಯ, ಮಹಾಕಾವ್ಯ, ನಿಗೂಢ, ಫ್ಯಾಂಟಸಿ, ನೈತಿಕ ಮತ್ತು ಜೀವನ ಮೌಲ್ಯದ ಪ್ರಮುಖ ಕಥೆಗಳು ಇದರಲ್ಲಿ ಮೂಡಿ ಬರ್ತಿವೆ. ತಮಾಷೆ ಮೂಲಕ ಕುತೂಹಲಕಾರಿ ವಿಷಯ ಈಟಿವಿ ಬಾಲ ಭಾರತನಲ್ಲಿ ಮೂಡಿ ಬರುತ್ತಿದ್ದು, ಮಕ್ಕಳಿಗೆ ಅಚ್ಚುಮೆಚ್ಚಾಗಿವೆ. ಈ ಆರೋಗ್ಯಕರ ವಿಷಯಗಳಿಗೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ಇದರ ಬೆನ್ನಲ್ಲೇ ಪ್ರಶಸ್ತಿ ಗೆದ್ದಿದೆ.

ABOUT THE AUTHOR

...view details