ಕರ್ನಾಟಕ

karnataka

ETV Bharat / bharat

ಕಮಲ ಮುಡಿದ ಮಾಜಿ ಸಚಿವ ಎಟೆಲಾ ರಾಜೇಂದರ್ - ಟಿಆರ್‌ಎಸ್

ಮೇದಕ್ ಜಿಲ್ಲೆಯಲ್ಲಿ ಭೂ ಕಬಳಿಕೆ ಆರೋಪದ ಮೇಲೆ ಮೇ 1 ರಂದು ತೆಲಂಗಾಣ ಮಂತ್ರಿ ಮಂಡಲದಿಂದ ವಜಾ ಆಗಿದ್ದ ಎಟೆಲಾ ರಾಜೇಂದರ್ ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

Etela's crossover into the BJP was inevitable
ಕಮಲ ಮುಡಿದ ಮಾಜಿ ಸಚಿವ ಎಟೆಲಾ ರಾಜೇಂದರ್

By

Published : Jun 14, 2021, 6:52 PM IST

ಹೈದರಾಬಾದ್:ಭೂ ಕಬಳಿಕೆ ಆರೋಪದ ಮೇಲೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸಂಪುಟದಿಂದ ಹೊರಹಾಕಿದ್ದ ತೆಲಂಗಾಣ ಮಾಜಿ ಸಚಿವ ಎಟೆಲಾ ರಾಜೇಂದರ್ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ಎಟೆಲಾ ರಾಜೇಂದರ್​ಗೆ ಅನೇಕ ಮುಖಂಡರು ಸಾಥ್​ ನೀಡಿದ್ದಾರೆ.

ಪಕ್ಷದ ಸೇರ್ಪಡೆ ಸಮಾರಂಭದ ವೇಳೆ ಸಂಸದ ಧರ್ಮಪುರಿ ಅರವಿಂದ್ ಸಂಸದ ಸೋಯಂ ಬಾಪುರಾವ್, ಶಾಸಕ ಎಂ.ರಘುನಂದನ್ ರಾವ್, ಜಿ ಪ್ರೀಮಂದರ್ ರೆಡ್ಡಿ ಸೇರಿದಂತೆ ತೆಲಂಗಾಣ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಕೇಸರಿ ಪಕ್ಷಕ್ಕೆ ಸೇರುವ ಎರಡು ದಿನಗಳ ಮೊದಲು ರಾಜೇಂದರ್ ತೆಲಂಗಾಣ ರಾಜ್ಯ ವಿಧಾನಸಭೆಯಲ್ಲಿ ತಮ್ಮ ಶಾಸಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯಗಳ ಹಿನ್ನೆಲೆ ಜೂನ್ 4 ರಂದು ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಓದಿ:ಮದುವೆ ನೆಪದಲ್ಲಿ ವ್ಯಕ್ತಿಗೆ ವಂಚನೆ: 10 ಲಕ್ಷ ಪಡೆದು ಮೊದಲ ಗಂಡನೊಂದಿಗೆ ಮಹಿಳೆ ಪರಾರಿ!

ABOUT THE AUTHOR

...view details