ಕರ್ನಾಟಕ

karnataka

ETV Bharat / bharat

ವರ್ಷಾಂತ್ಯದ ವೇಳೆಗೆ ಇಡೀ ಭಾರತದಲ್ಲಿ ESI ಯೋಜನೆ ಸೇವೆಗಳು ಲಭ್ಯ

ಹೊಸ ಡಿಸ್ಪೆನ್ಸರಿ ಕಮ್ ಬ್ರಾಂಚ್ ಆಫೀಸ್ (ಡಿಸಿಬಿಒ)ಗಳನ್ನು ಸ್ಥಾಪಿಸುವ ಮೂಲಕ ಆರೋಗ್ಯ ಸೌಲಭ್ಯ ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

ESI scheme implemented across the country  ESIC to cover entire India under ESI Scheme by year end  Union labour and employment minister Bhupender Yadav  ESI scheme news  ವರ್ಷಾಂತ್ಯದ ವೇಳೆಗೆ ಇಡೀ ಭಾರತದಲ್ಲಿ ESI ಯೋಜನೆ ಸೇವೆಗಳು ಲಭ್ಯ  ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್  ಇಎಸ್ಐ ಯೋಜನೆ ಸುದ್ದಿ
ESI ಯೋಜನೆ ಸೇವೆಗಳು ಲಭ್ಯ

By

Published : Jun 20, 2022, 12:21 PM IST

ನವದೆಹಲಿ: ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) 2022ರ ಅಂತ್ಯದ ವೇಳೆಗೆ ದೇಶಾದ್ಯಂತ ಆರೋಗ್ಯ ವಿಮಾ ಯೋಜನೆ ಇಎಸ್‌ಐ ಜಾರಿಗೊಳಿಸಲು ನಿರ್ಧರಿಸಿದೆ. ಪ್ರಸ್ತುತ ನೌಕರರ ರಾಜ್ಯ ವಿಮಾ (ಇಎಸ್‌ಐ) ಯೋಜನೆಯು 443 ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಮತ್ತು ಭಾಗಶಃ 153 ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿದೆ. ಒಟ್ಟು 148 ಜಿಲ್ಲೆಗಳು ಇನ್ನೂ ಇಎಸ್‌ಐ ಯೋಜನೆಯಲ್ಲಿಲ್ಲ ಎಂಬುದು ತಿಳಿದುಬಂದಿದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಇಎಸ್‌ಐಸಿಯ 188ನೇ ಸಭೆಯಲ್ಲಿ, ದೇಶಾದ್ಯಂತ ವೈದ್ಯಕೀಯ ಸೌಲಭ್ಯ ಮತ್ತು ಸೇವಾ ಪೂರೈಕೆ ವ್ಯವಸ್ಥೆಯನ್ನು ವಿಸ್ತರಿಸಲು ಮತ್ತು ಸಭೆಯಲ್ಲಿ ಈ ವರ್ಷದ ಅಂತ್ಯದೊಳಗೆ ಇಡೀ ದೇಶದಲ್ಲಿ ಇಎಸ್‌ಐ ಯೋಜನೆಯನ್ನು ಜಾರಿಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.

ಓದಿ:ಲಂಚ ಪಡೆಯುತ್ತಿದ್ದ ಇಎಸ್​ಐ ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್ ಎಸಿಬಿ ಬಲೆಗೆ

ಈ ವರ್ಷದ ಅಂತ್ಯದ ವೇಳೆಗೆ ಇಎಸ್‌ಐ ಯೋಜನೆಗೆ ಭಾಗಶಃ ಒಳಪಡದ ಮತ್ತು ಇನ್ನೂ ವ್ಯಾಪ್ತಿಗೆ ಒಳಪಡದ ಎಲ್ಲಾ ಜಿಲ್ಲೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗುವುದು ಎಂದು ಕಾರ್ಮಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಹೊಸ ಡಿಸ್ಪೆನ್ಸರಿ ಕಮ್ ಬ್ರಾಂಚ್ ಆಫೀಸ್ (ಡಿಸಿಬಿಒ)ಗಳನ್ನು ಸ್ಥಾಪಿಸುವ ಮೂಲಕ ಆರೋಗ್ಯ ಸೌಲಭ್ಯ ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗುವುದು. ಇದಲ್ಲದೆ ಇಎಸ್‌ಐಸಿ ದೇಶಾದ್ಯಂತ 23 ಹೊಸ 100 ಹಾಸಿಗೆ ಆಸ್ಪತ್ರೆಗಳನ್ನು ತೆರೆಯಲು ನಿರ್ಧರಿಸಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

ಈ ಪೈಕಿ ಮಹಾರಾಷ್ಟ್ರದಲ್ಲಿ ಆರು, ಹರಿಯಾಣದಲ್ಲಿ ನಾಲ್ಕು, ತಮಿಳುನಾಡು, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ತಲಾ ಎರಡು ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು. ಆಂಧ್ರಪ್ರದೇಶ, ಛತ್ತೀಸ್‌ಗಢ, ಗೋವಾ, ಗುಜರಾತ್, ಮಧ್ಯಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಆಸ್ಪತ್ರೆ ತೆರೆಯಲಾಗುವುದು.

ಓದಿ:ಆಸ್ಪತ್ರೆಗೆ ಹೋಗಿ ಮೃತದೇಹ ಕೇಳಿದ್ರೆ ಗದರಿದ್ದರು : ಇಎಸ್​ಐ ಆಸ್ಪತ್ರೆ ವಿರುದ್ಧ ಮೃತರ ಸಂಬಂಧಿಕರ ಆಕ್ರೋಶ

ಇದಲ್ಲದೇ ವಿವಿಧೆಡೆ ಡಿಸ್ಪೆನ್ಸರಿ ಕಚೇರಿಗಳನ್ನು ಸಹ ತೆರೆಯಲಾಗುವುದು. ಈ ಆಸ್ಪತ್ರೆಗಳು ಮತ್ತು ಡಿಸ್ಪೆನ್ಸರಿಗಳು ವಿಮಾದಾರ ಉದ್ಯೋಗಿಗಳಿಗೆ ಮತ್ತು ಅವರ ಅವಲಂಬಿತರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಕಾರ್ಮಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

For All Latest Updates

ABOUT THE AUTHOR

...view details