ಕರ್ನಾಟಕ

karnataka

ETV Bharat / bharat

ಮೂರ್ಛೆ ರೋಗದಿಂದ ಬೇಗ ಸಾವು ಸಂಭವಿಸಬಹುದು!- ಅಧ್ಯಯನ - ಈಟಿವಿ ಭಾರತ ಕನ್ನಡ

ಅಪಸ್ಮಾರ/ ಮೂರ್ಛೆ ರೋಗ ಮೆದುಳಿನ ಕಾಯಿಲೆ. ಇದರಿಂದ ಬೇಗ ಸಾವು ಸಂಭವಿಸಬಹುದೆಂದು ಅಧ್ಯಯನವೊಂದು ಎಚ್ಚರಿಸಿದೆ.

epilepsy-may-raise-risk-of-early-death-study
ನೇರಳೆ ದಿನ : ಅಪಸ್ಮಾರದಿಂದ ಬೇಗ ಸಾವು ಸಂಭವಿಸಬಹುದು.. ಅಧ್ಯಯನ

By

Published : Mar 26, 2023, 9:27 AM IST

ಪ್ರತಿವರ್ಷ ಮಾರ್ಚ್ 26 ರ ದಿನವನ್ನು 'ಅಂತಾರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ' ಅಥವಾ 'ನೇರಳ ದಿನ' ಎಂದು ಆಚರಿಸಲಾಗುತ್ತದೆ. ಈ ಮುಖೇನ ಅಪಸ್ಮಾರ ಅಥವಾ ಮೂರ್ಛೆ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಅಪಸ್ಮಾರವು ಇತರ ಕಾಯಿಲೆಯಂತಲ್ಲ, ಇದು ಮೆದುಳಿನ ರೋಗದ ಲಕ್ಷಣ. ಈ ಕಾಯಿಲೆಯು ಯಾರಿಗೆ ಬೇಕಾದರೂ ಬರಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರಿಗೂ ಕಾಡಬಲ್ಲದು. ಅಚ್ಚರಿಯ ಸಂಗತಿಯೆಂದರೆ ಮೂರ್ಛೆ ರೋಗವು ಶೇ. 95ರಷ್ಟು ಮೇಲ್ನೋಟಕ್ಕೆ ಗೋಚರವಾಗುವುದಿಲ್ಲ. ಶೇ. 5ರಷ್ಟು ರಕ್ತಸ್ರಾವ, ಮೆದುಳಿಗೆ ಹಾನಿ ಹಾಗು ರಕ್ತ ಹೆಪ್ಪುಗಟ್ಟುವಿಕೆ ಮೂಲಕ ಗೋಚರಿಸುತ್ತದೆ.

ಅಪಸ್ಮಾರದಿಂದ ಬಳಲುತ್ತಿರುವವರು ಅಕಾಲಿಕ ಮರಣವನ್ನಪ್ಪುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನ ಹೇಳಿದೆ. ನ್ಯೂರಾಲಜಿ ಜರ್ನಲ್‌ವೊಂದರಲ್ಲಿ ಪ್ರಕಟವಾದ ಲೇಖನದಲ್ಲಿ, ಯಾರು ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಾರೋ ಅವರು ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಎರಡು ಪಟ್ಟು ಸಾವಿನ ಅಪಾಯ ಹೊಂದಿದ್ದಾರೆ ಎಂದು ತಿಳಿಸಿದೆ. ಇನ್ನೊಂದು ಆಘಾತಕಾರಿ ಅಂಶವನ್ನೂ ಬಹಿರಂಗಪಡಿಸಿದ್ದು, 20,095 ಅಪಸ್ಮಾರ ರೋಗಿಗಳನ್ನು ಅಧ್ಯಯನ ನಡೆಸಿದಾಗ ಅಪಸ್ಮಾರ ಹೊಂದಿರುವ ಕಿರಿಯರು ಹೆಚ್ಚಿನ ಅಪಾಯ ಹೊಂದಿರುತ್ತಾರೆ ಎಂದು ಎಚ್ಚರಿಸಿದೆ. ಸಾವಿನ ಅಪಾಯವು ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ನಾವು ನಮ್ಮ ಕಾಯಿಲೆಗೆ ತೆಗೆದುಕೊಳ್ಳುವ ಔಷಧಗಳನ್ನು ಅವಲಂಬಿಸಿದೆ ಎಂದು ಹೇಳಿದೆ. ಅಪಸ್ಮಾರ ಹೊಂದಿರುವವರು ಇತರ ರೋಗ ಹೊಂದಿರುವುದನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

ದಕ್ಷಿಣ​ ಕೊರಿಯಾದ ಕಾಂಗ್​ವನ್​​ ನ್ಯಾಷನಲ್​​ ಯುನಿವರ್ಸಿಟಿಯ ಸಿಯೋ ಯಂಗ್​ ಲೀ ಅವರ ಪ್ರಕಾರ, ನಮ್ಮ ಸಂಶೋಧನೆಯು ಯಾರು ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿಲ್ಲವೋ ಅಂತವರಿಗೂ ಮತ್ತು ಯಾರು ಒಂದೇ ರೀತಿಯ ಔಷಧೋಪಚಾರ ಮಾಡುತ್ತಾರೋ ಅವರಲ್ಲಿಯೂ ಹೆಚ್ಚಿದ ಸಾವಿನ ಅಪಾಯವನ್ನು ತಿಳಿಸಿದೆ ಎಂದು ಹೇಳಿದ್ದಾರೆ. ಜಗತ್ತಿನ 50 ಮಿಲಿಯನ್​ಗೂ ಅಧಿಕ ಜನರು ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ 5 ಮಿಲಿಯನ್​ಗೂ ಅಧಿಕ ಜನರು ಇದಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಲಾಗಿದೆ.

ಪ್ರೈಮಸ್​ ಸೂಪರ್​ ಸ್ಪೆಷಾಲಿಟಿ ಹಾಸ್ಪಿಟಲ್​​ ನರವಿಜ್ಞಾನ ವಿಭಾಗದ ನಿರ್ದೇಶಕ ರವೀಂದ್ರ ಶ್ರೀ ವಾತ್ಸವ ಹೇಳುವಂತೆ, ಭಾರತದಲ್ಲಿ ಸುಮಾರು 10 ಮಿಲಿಯನ್​ಗೂ ಹೆಚ್ಚು ಜನರು ಮೂರ್ಛೆರೋಗದಿಂದ ಬಳಲುತ್ತಿದ್ದಾರೆ. ಇದು ಜಗತ್ತಿನಾದ್ಯಂತ ಇರುವ 50 ಮಿಲಿಯನ್​ ಅಪಸ್ಮಾರ ರೋಗಿಗಳಲ್ಲಿ ಶೇ. 20ರಷ್ಟು ಎಂದಿದ್ದಾರೆ.

ಯಾರಾದರೂ ಮೂರ್ಛೆ ರೋಗಕ್ಕೆ ತುತ್ತಾಗುವುದನ್ನು ಕಂಡರೆ ಅವರ ಸಹಾಯಕ್ಕೆ ಧಾವಿಸಿ. ಶಾಂತವಾಗಿದ್ದು ಮತ್ತು ವ್ಯಕ್ತಿಯನ್ನು ರಕ್ಷಿಸಲು ಪ್ರಯತ್ನಿಸಿ. ವ್ಯಕ್ತಿಗೆ ಉಸಿರುಗಟ್ಟುವುದನ್ನು ತಡೆಯಲು ಸಹಾಯ ಮಾಡಿ. ಇನ್ನೊಂದು ಬದಿಗೆ ತಿರುಗಿಸಿ ಅವರಿಗೆ ನೆರವಿಗೆ ಧಾವಿಸಿ. ಈ ವೇಳೆ ವ್ಯಕ್ತಿಯನ್ನು ನಿಗ್ರಹಿಸಲು ಹೋಗಬೇಡಿ. ಅವರು ಸಂಪೂರ್ಣ ಸಹಜ ಸ್ಥಿತಿಗೆ ಬರುವವರಿಗೆ ಅಲ್ಲಿಯೇ ಇರಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ:ಹೆಚ್ಚು ಸ್ಮಾರ್ಟ್ ಫೋನ್ ಬಳಕೆಯಿಂದ ನಿದ್ರಾಹೀನತೆಯ ಸಮಸ್ಯೆ: ವೈದ್ಯ ಶಶಿಧರ್ ಕುಮಾರ್

ABOUT THE AUTHOR

...view details