ಸಾಮಾನ್ಯವಾಗಿ ಪಿಎಫ್(ಭವಿಷ್ಯ ನಿಧಿ)ನಿಂದ ಹಣ ಪಡೆದುಕೊಳ್ಳಲು ಕನಿಷ್ಠ ಮೂರರಿಂದ ನಾಲ್ಕು ದಿನ ಬೇಕಾಗುತ್ತದೆ. ಇದರ ಮಧ್ಯೆ ಅನೇಕ ರೀತಿಯ ತೊಂದರೆ ಸಹ ಎದುರಾಗ್ತವೆ. ಆದರೆ, ಇದೀಗ ಹೊಸ ನಿಯಮದ ಪ್ರಕಾರ ಪಿಎಫ್ ಖಾತೆದಾರರು ಕೇವಲ ಒಂದು ಗಂಟೆಯಲ್ಲಿ ಹಣ ವಿತ್‌ಡ್ರಾ ಮಾಡಬಹುದಾಗಿದೆ. ಯಾವುದೇ ವ್ಯಕ್ತಿ ಭವಿಷ್ಯ ನಿಧಿಯಿಂದ ಮುಂಗಡವಾಗಿ 1 ಲಕ್ಷ ರೂ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಹಣವನ್ನು ಆನ್ಲೈನ್ ಮೂಲಕ ಪಡೆದುಕೊಳ್ಳಲು ಇದೀಗ ಅವಕಾಶ ನೀಡಲಾಗಿದೆ.
EPFOನ ವೆಬ್ಸೈಟ್ನಲ್ಲಿ ಅಗತ್ಯ ಮಾಹಿತಿ ನೀಡುವ ಮೂಲಕ ಕೇವಲ ಒಂದು ಗಂಟೆಯಲ್ಲಿ ಹಣ ಪಡೆದುಕೊಳ್ಳಬಹುದಾಗಿದೆ. EPF ಹಣ ಪಡೆದುಕೊಳ್ಳಲು ಯುಎಎನ್ ಅಕೌಂಟ್ ನಂಬರ್ ಆಧಾರ್ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯ. ವ್ಯಕ್ತಿ ಕೆಲಸದಿಂದ ನಿವೃತ್ತರಾದಾಗ ಅಥವಾ ಎರಡು ತಿಂಗಳಗಿಂತಲೂ ಹೆಚ್ಚು ಕಾಲ ನಿರುದ್ಯೋಗಿಯಾದ ಸಂದರ್ಭದಲ್ಲಿ ಪಿಎಫ್ನ ಸಂಪೂರ್ಣ ಹಣ ಪಡೆದುಕೊಳ್ಳುವ ಅವಕಾಶವಿದೆ. ಇದರ ಜೊತೆಗೆ ವೈದ್ಯಕೀಯ, ಗೃಹ ಸಾಲ, ಗೃಹ ಸಾಲ ಮರುಪಾವತಿ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಭಾಗಶಃ ಹಣ ಪಡೆದುಕೊಳ್ಳಬಹುದು.
ಇದನ್ನೂ ಓದಿ:'ವಿಶ್ವದ ವೃಕ್ಷಗಳ ನಗರ' ಎಂಬ ಹೆಗ್ಗಳಿಕೆಗೆ ಪಾತ್ರವಾದ ಮುತ್ತಿನ ನಗರಿ ಹೈದರಾಬಾದ್!
ಹಣ ಪಡೆದುಕೊಳ್ಳುವ ವಿಧಾನ:
1.epfindia.gov.inಗೆ ಲಾಗಿನ್ ಮಾಡಿ.
2.ವೆಬ್ಸೈಟ್ನ ಮುಖಪುಟದ ಬಲ ಮೂಲೆಯಲ್ಲಿ ಆನ್ಲೈನ್ ಮುಂಗಡ ಕ್ಲೈಮ್ ಆಯ್ಕೆಯ ಮೇಲೆ ಕ್ಲಿಕ್ಕಿಸಿ.