ಹರಿದ್ವಾರ(ಉತ್ತರಾಖಂಡ) : ಚಾರ್‌ಧಾಮ್ ಯಾತ್ರೆಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ನ ನಾಯಕಿ ಸಾಧ್ವಿ ಪ್ರಾಚಿ ಒತ್ತಾಯಿಸಿದ್ದಾರೆ. ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ಧಾರ್ಮಿಕ ಸ್ಥಳಗಳಿಗೆ ಯಾವುದೇ ಹಿಂದೂಗಳಿಗೆ ಹೋಗಲು ಅವಕಾಶವಿಲ್ಲ, ಆದರೆ ಹಿಂದೂಗಳಲ್ಲದವರು ಹಿಂದೂಗಳ ಧಾರ್ಮಿಕ ಸ್ಥಳಗಳಿಗೆ ಬರುತ್ತಿದ್ದಾರೆ. ಅದನ್ನು ತಡೆಯಬೇಕೆಂದು ಸಾಧ್ವಿ ಪ್ರಾಚಿ ಆಗ್ರಹಿಸಿದ್ದಾರೆ. ಉತ್ತರಖಂಡ ಚಾರ್‌ಧಾಮ್ ಯಾತ್ರೆಗೆ ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಹೇಳಿದ್ದಾರೆ.
ಹಿಂದೂಗಳಲ್ಲದವರಿಗೆ ಚಾರ್ಧಾಮ್ ಯಾತ್ರೆಗೆ ಪ್ರವೇಶ ನಿಷೇಧಿಸಬೇಕು: ವಿಹೆಚ್ಪಿ ನಾಯಕಿ ಸಾಧ್ವಿ ಪ್ರಾಚಿ
ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ಧಾರ್ಮಿಕ ಸ್ಥಳಗಳಿಗೆ ಯಾವುದೇ ಹಿಂದೂಗಳಿಗೆ ಹೋಗಲು ಅವಕಾಶವಿಲ್ಲ. ಆದರೆ ಹಿಂದೂಗಳಲ್ಲದವರು ಹಿಂದೂಗಳ ಧಾರ್ಮಿಕ ಸ್ಥಳಗಳಿಗೆ ಬರುತ್ತಿದ್ದಾರೆ. ಆದ್ದರಿಂದ ಬೇರೆ ಧರ್ಮದವರಿಗೆ ಚಾರ್ಧಾಮ್ ಯಾತ್ರೆಗೆ ಬರುವುದನ್ನು ನಿಷೇಧಿಸಬೇಕೆಂದು ವಿಹೆಚ್ಪಿ ನಾಯಕಿ ಸಾಧ್ವಿ ಪ್ರಾಚಿ ಒತ್ತಾಯಿಸಿದ್ದಾರೆ.
ಹಿಂದೂಗಳಲ್ಲದವರಿಗೆ ಚಾರ್ಧಾಮ್ ಯಾತ್ರೆಗೆ ಪ್ರವೇಶ ನಿಷೇಧಿಸಬೇಕು: ವಿಹೆಚ್ಪಿ ನಾಯಕಿ ಸಾಧ್ವಿ ಪ್ರಾಚಿ
ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಮತ್ತು ಚಾರ್ಧಾಮ್ ಆಡಳಿತ ಮಂಡಳಿಯನ್ನು ಸಾಧ್ವಿ ಪ್ರಾಚಿ ಒತ್ತಾಯಿಸಿದ್ದಾರೆ. ಇದರ ಜೊತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉತ್ತರ ಪ್ರದೇಶ ಸರ್ಕಾರ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿರುವ ರೀತಿಯನ್ನು ಸಾಧ್ವಿ ಪ್ರಾಚಿ ಶ್ಲಾಘಿಸಿದ್ದಾರೆ. ಅದೇ ರೀತಿ ಉತ್ತರಾಖಂಡದ ಧಾಮಿ ಸರ್ಕಾರ ಹಿಂದುತ್ವದ ಪ್ರಚಾರಕ್ಕಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಸಾಧ್ವಿ ಪ್ರಾಚಿ ಸಲಹೆ ನೀಡಿದ್ದಾರೆ. ಮೇ 3ರಂದು ಉತ್ತರಾಖಂಡದ ಚಾರ್ಧಾಮ್ ಯಾತ್ರೆ ಪ್ರಾರಂಭವಾಗಲಿದೆ.