ಲಾಲ್ ಕಿಲಾ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರ ಬಂದ್: ನಿರ್ಗಮನಕ್ಕೆ ಮಾತ್ರ ಅನುಮತಿ - ದೆಹಲಿ ಸುದ್ದಿ
ದೆಹಲಿಯ ಲಾಲ್ ಕಿಲಾ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರಗಳನ್ನೂ ಸಹ ಮುಚ್ಚಲಾಗಿದೆ. ಆದರೆ ನಿರ್ಗಮನಕ್ಕೆ ಅವಕಾಶ ನೀಡಲಾಗಿದೆ.
ಲಾಲ್ ಕ್ವಿಲಾ ಮೆಟ್ರೋ ನಿಲ್ದಾಣ
ದೆಹಲಿ:ಕೃಷಿ ಕಾಯ್ದೆ ವಿರೋಧಿ ಟ್ರ್ಯಾಕ್ಟರ್ ಪರೇಡ್ ಹಿಂಸಾತ್ಮಕ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ನಿನ್ನೆ ಮುಂಜಾಗ್ರತಾ ಕ್ರಮವಾಗಿ ಮೆಟ್ರೋ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಲಾಲ್ ಕಿಲಾ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರಗಳನ್ನೂ ಸಹ ಮುಚ್ಚಲಾಗಿದೆ. ಆದರೆ ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗಿದೆ.ದೆಹಲಿಯ ಉಳಿದೆಲ್ಲ ನಿಲ್ದಾಣಗಳು ತೆರೆದಿದ್ದು, ಎಲ್ಲ ಮಾರ್ಗಗಳಲ್ಲಿ ಸಾಮಾನ್ಯ ಸೇವೆಗಳು ಮುಂದುವರೆಯಲಿದೆ ಎಂದು ದೆಹಲಿ ಮೆಟ್ರೋ ರೈಲು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.
Last Updated : Jan 27, 2021, 8:20 AM IST