ತಮಿಳುನಾಡು: ತಂಜಾವೂರು ಜಿಲ್ಲೆಯ ಅಝಿವೈಕಲ್ ಗ್ರಾಮದ ದೃಷ್ಟಿ ವಿಕಲಚೇತನ ರವಿಚಂದ್ರನ್ (55) ಎಂಬುವವರು ಟಿಎನ್‌ಪಿಎಸ್‌ಸಿ ಗ್ರೂಪ್ 2 ಪೂರ್ವಭಾವಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಿ ಹಲವು ಕಡೆ ಗಮನ ಸೆಳೆದಿದ್ದಾರೆ.
ರವಿಚಂದ್ರನ್ ಅವರು 1990 ರಲ್ಲಿ ಬಿಎಸ್ಸಿ ಗಣಿತ ಪೂರ್ಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಕೃಷಿ ಕಾರ್ಮಿಕರಾಗಿದ್ದು, ರಾಜೀವ್ ಗಾಂಧಿ ಅವರ 100 ದಿನದ ಉದ್ಯೋಗ ಯೋಜನೆಯಡಿ ಕೂಲಿ ಕೆಲಸ ಮಾಡುವ ಮೂಲಕ ತಮ್ಮ ಅಗತ್ಯಗಳನ್ನು ಪೂರೈಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಸಹಾಯ ಮಾಡಲು ಹಲವಾರು ಕೆಲಸಗಳನ್ನು ಕೂಡಾ ಮಾಡುತ್ತಿದ್ದಾರೆ.
ಈ ವೇಳೆ, ಸರ್ಕಾರಿ ಕೆಲಸಕ್ಕೆ ಸೇರಿ ಬಡವರು, ನಿರ್ಗತಿಕರಿಗೆ ನೆರವಾಗುವ ಯೋಚನೆ ಬಂತು ಎನ್ನುತ್ತಾರೆ ರವಿಚಂದ್ರನ್. ಇದಕ್ಕಾಗಿ ಟಿಎನ್ ಪಿಎಸ್ ಸಿ ಪರೀಕ್ಷೆ ಬರೆಯಲು ನಿರ್ಧರಿಸಿ ಗ್ರೂಪ್ 2 ಪರೀಕ್ಷೆಗೆ ತಯಾರಿ ನಡೆಸಿದ್ದರು. ಕೋಚಿಂಗ್ ಸೆಂಟರ್ಗೆ ಹೋಗಿ ಓದುವ ಸೌಲಭ್ಯ ಇಲ್ಲದ ಕಾರಣ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಖರೀದಿಸಿ ಓದಿದ್ದಾರೆ.