ನವದೆಹಲಿ:ಮೂಲಭೂತ ಸೌಲಭ್ಯಗಳಿಂದ ಸರ್ಕಾರಿ ಶಾಲೆಗಳು ವಂಚಿತವಾಗಿರುತ್ತವೆ ಎಂಬ ಕಾರಣದಿಂದಾಗಿ ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ (Private Schools) ಕಳುಹಿಸುತ್ತಾರೆ. ಆದರೆ ಇದೀಗ ಬಹಿರಂಗಗೊಂಡಿರುವ ಮಹತ್ವದ ಸಮೀಕ್ಷಾ ವರದಿಯೊಂದರ ಪ್ರಕಾರ, ಕಳೆದೊಂದು ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯ ಪ್ರಮಾಣ (Enrollment in govt schools) ಗಣನೀಯವಾಗಿ ಹೆಚ್ಚಳವಾಗಿದೆ.
2020ರ ASER (Annual Status of Education Report) ಸಮೀಕ್ಷೆಯ ಪ್ರಕಾರ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯಲ್ಲಿ ಕಳೆದ ಒಂದು ವರ್ಷದಲ್ಲಿ ಶೇ. 65.8ರಿಂದ ಶೇ. 70.3ರಷ್ಟು ಏರಿಕೆಯಾಗಿದೆ. ಇದಕ್ಕೆ ಕೊರೊನಾ ವೈರಸ್ ಕೂಡ ಒಂದು ಮಟ್ಟದಲ್ಲಿ ಕಾರಣ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ:Jai Bhim : ಪಾರ್ವತಿ ಅಮ್ಮಾಳ್ಗೆ 15 ಲಕ್ಷ ರೂ. ಚೆಕ್ ನೀಡಿದ ನಟ ಸೂರ್ಯ
ದೇಶದ 25 ರಾಜ್ಯಗಳ 581 ಗ್ರಾಮೀಣ ಜಿಲ್ಲೆಯಗಳಲ್ಲಿನ 5-16 ವಯಸ್ಸಿನ 75,234 ಮಕ್ಕಳನ್ನು ದೂರವಾಣಿ ಮೂಲಕ ಇಲ್ಲಿ ಸಮೀಕ್ಷೆಗೆ ಒಳಪಡಿಸಲಾಗಿದೆ.
ಸಮೀಕ್ಷೆ ಬಿಡುಗಡೆ ಮಾಡಿದ ಏಸರ್(ASER) ನಿರ್ದೇಶಕಿ ವಿಲಿಮಾ ವಾಧ್ವಾ, 'ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ನಡೆದ ಸಮೀಕ್ಷೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ. 17,814 ಗ್ರಾಮಗಳಲ್ಲಿ 76,606 ಕುಟುಂಬಗಳು ಈ ಸಮೀಕ್ಷೆಗೊಳಪಟ್ಟಿವೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ 2018ರಲ್ಲಿ ಶೇ. 64.03 ರಿಂದ 2020ರಲ್ಲಿ ಶೇ. 65.8 ಹಾಗೂ 2021ರಲ್ಲಿ ಶೇ 70.3ಕ್ಕೆ ಏರಿಕೆಯಾಗಿದೆ. ಆದರೆ ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗಿದ್ದು, ಶೇ. 28.8ರಿಂದ ಶೇ. 24.4ಕ್ಕೆ ಇಳಿಕೆಯಾಗಿದೆ' ಎಂದು ವಿವರಿಸಿದರು.