ETV Bharat Karnataka

ಕರ್ನಾಟಕ

karnataka

ETV Bharat / bharat

ಸ್ನೇಹಿತರ ಭೇಟಿಗೆ ಹೋಗಿ ಹಿಂದಿರುಗುವಾಗ ಅಪಘಾತ.. ವಿದ್ಯಾರ್ಥಿನಿ ಸಾವು - ENGINEERING STUDENT DIES

ಕೆನಡಾದಲ್ಲಿ M-Tech ಮಾಡ್ತಿದ್ದ ವಿದ್ಯಾರ್ಥಿನಿಯೊಬ್ಬಳು ಸ್ನೇಹಿತರ ಭೇಟಿ ಮಾಡಿ ವಾಪಸ್​ ಬರುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ.

ENGINEERING STUDENT DIES
ENGINEERING STUDENT DIES
author img

By

Published : Aug 2, 2021, 8:54 PM IST

ಹೈದರಾಬಾದ್​​: ಫ್ರೆಂಡ್​​ಶಿಪ್​ ಡೇ(Friendship Day) ದಿನದಂದು ಸ್ನೇಹಿತರ ಭೇಟಿ ಮಾಡಿ ವಾಪಸ್​ ಬರುತ್ತಿದ್ದ ಸಂದರ್ಭದಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಇಂಜಿನಿಯರಿಂಗ್​​ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೈದರಾಬಾದ್​ನ ಗಚ್ಚಿಬೌಲಿಯಲ್ಲಿ ಈ ದುರ್ಘಟನೆ ನಡೆದಿದ್ದು, ಅಶ್ರಿತಾ ಸಾವನ್ನಪ್ಪಿರುವ ವಿದ್ಯಾರ್ಥಿನಿಯಾಗಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬ್ಯುಸಿನೆಸ್​ ಸ್ಕೂಲ್​​ನ ವಿದ್ಯಾರ್ಥಿ ಅಭಿಷೇಕ್​ ಹಾಗೂ ಆತನ ಸ್ನೇಹಿತರಾದ ಸತ್ಯಪ್ರಕಾಶ್​, ತರುಣಿ ಹಾಗೂ ಅಶ್ರಿತಾ ಎಲ್ಲರೂ ಸ್ನೇಹಿತರಾಗಿದ್ದು, ಫ್ರೆಂಡ್​ಶಿಪ್​ ಡೇ ದಿನ ಭೇಟಿಯಾಗುವ ಯೋಜನೆ ಹಾಕಿಕೊಂಡಿದ್ದಾರೆ.

ಸತ್ಯಪ್ರಕಾಶ್ ಹಾಗೂ ತರುಣಿ ಈಗಾಗಲೇ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದು, ಅಶ್ರಿತಾ ಕೆನಡಾದಲ್ಲಿ MTech ಮಾಡ್ತಿದ್ದಾರೆ. ಇವರೆಲ್ಲರೂ ಶಾಲಾ ದಿನಗಳಲ್ಲೇ ಸ್ನೇಹಿತರಾಗಿದ್ದ ಕಾರಣ, ಒಬ್ಬರನ್ನೊಬ್ಬರು ಭೇಟಿ ಮಾಡುವ ಯೋಜನೆ ಹಾಕಿಕೊಂಡಿದ್ದರು.

ಇದನ್ನೂ ಓದಿರಿ: ಸ್ನೇಹಿತನ ರಕ್ಷಣೆಗೆ ಹೋಗಿ ಪ್ರಾಣ ಕಳೆದುಕೊಂಡ ಮೂವರು...'ಫ್ರೆಂಡ್​ಶಿಪ್ ಡೇ'ಯಂದೇ ನಡೆದ ದುರ್ಘಟನೆ!

ತೆಲ್ಲಾಪುರದಿಂದ ಹೊರಟಿರುವ ಎಲ್ಲರೂ ಕೊಂಡಪುರ ಪಬ್​ನಲ್ಲಿ ಪಾರ್ಟಿ ಮಾಡಿದ್ದು, ಈ ವೇಳೆ ಮದ್ಯ ಸೇವನೆ ಮಾಡಿದ್ದಾರೆ. ಇದಾದ ಬಳಿಕ ಅಭಿಷೇಕ್​ ಕಾರು ಡ್ರೈವ್ ಮಾಡಿದ್ದಾನೆ. ರಾತ್ರಿ ಸುಮಾರು 11:30ರ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆ ಡಿವೈಡರ್​​ಗೆ ಜೋರಾಗಿ ಹೊಡೆದಿದ್ದಾನೆ. ಹೀಗಾಗಿ ಕಾರು ಮೂರ್ನಾಲ್ಕು ಸಲ ಪಲ್ಟಿ ಹೊಡೆದಿದೆ.

ಘಟನೆಯಿಂದ ಅಭಿಷೇಕ್ ಹಾಗೂ ಸತ್ಯಪ್ರಕಾಶ್ ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅಶ್ರಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಗಚ್ಚಿಬೌಲಿ ಪೊಲೀಸರು ಅಭಿಷೇಕ್​ನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸ್ನೇಹಿತರ ದಿನವೇ ಮೋಜು-ಮಸ್ತಿಗಾಗಿ ತೆರಳಿದ್ದ ಆರು ಸ್ನೇಹಿತರ ಪೈಕಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಘಟನೆ ತೆಲಂಗಾಣದ ನಿಜಾಮಾಬಾದ್​​ ಜಿಲ್ಲೆಯ ನಂದಿಪೇಟೆ ಪ್ರದೇಶದಲ್ಲಿ ನಡೆದಿದೆ.

ABOUT THE AUTHOR

...view details