ಹಜಾರಿಬಾಗ್ (ಜಾರ್ಖಂಡ್):ಜಾರ್ಖಂಡ್ ರಾಜ್ಯದ ಹಜಾರಿಬಾಗ್‌ನ ಅಮರನಾಥ ದಾಸ್ ಎಂಬುವವರು ಬಿಐಟಿ ಮೆಸ್ರಾದಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದವರು. 14 ವರ್ಷಗಳ ಕಾಲ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಆ ಬಳಿಕ ಇವರು ಮತ್ತೆ ಹಳ್ಳಿಗೆ ಮರಳಿದರು. ಸಾಯಿಲ್ - ಲೆಸ್(SOIL LESS) ತಂತ್ರಜ್ಞಾನದ ಆಧಾರದ ಮೇಲೆ ಪಾಲಿಹೌಸ್ ನಿರ್ಮಿಸುವ ಮೂಲಕ ರೈತರಿಗೆ ಸಹಾಯ ಮಾಡಲು ನಿರ್ಧರಿಸಿದರು.
ಅಮರನಾಥ್ ಅವರು ಮಣ್ಣಿನ ಬದಲು ಕೋಕೋ ಪೀಟ್ ಅನ್ನು ಬಳಸಿದರು. ಇದರಿಂದಾಗಿ ಶೇ 90ಕ್ಕೂ ಹೆಚ್ಚು ಬೀಜಗಳು ಮಣ್ಣಿಲ್ಲದೆಯೇ ಸಸ್ಯಗಳಾಗಿ ಪರಿವರ್ತನೆಗೊಳ್ಳಲು ಪ್ರಾರಂಭಿಸಿದವು. ಈ ತಂತ್ರಜ್ಞಾನದಿಂದಾಗಿ ಸಸ್ಯವು ವೈರಸ್ ಮತ್ತು ಬ್ಯಾಕ್ಟೀರಿಯಾ ಮುಕ್ತವಾಗಿ ಉಳಿದವು. ಇದು ರೈತರಿಗೆ ಉತ್ತಮ ಇಳುವರಿಯನ್ನು ನೀಡಲು ಸಹ ಪ್ರಯೋಜನಕಾರಿಯಾಗಿದೆ.