ಕರ್ನಾಟಕ

karnataka

ETV Bharat / bharat

ಮೊರೆನಾ ಕಾಡಿನಲ್ಲಿ ಅಪಘಾತಕ್ಕೀಡಾದ ಮಿರಾಜ್ ಜೆಟ್‌ನ ಅವಶೇಷ ಪತ್ತೆ - ಫೈಟರ್ ಜೆಟ್ ಮಿರಾಜ್

ಭಾರತೀಯ ವಾಯುಪಡೆ (ಐಎಎಫ್) ತಂಡವು ಜಾಜಿಪುರ ಗ್ರಾಮದ ಬಳಿಯ ಅರಣ್ಯದಲ್ಲಿ 500 ಅಡಿ ಆಳದ ಕಂದಕದಲ್ಲಿ ಪತನಗೊಂಡ ಮಿರಾಜ್-2000 ವಿಮಾನದ ಎಂಜಿನ್​ವೊಂದನ್ನು ಪತ್ತೆ ಮಾಡಿದೆ.

Mirage jet
ಅಪಘಾತಕ್ಕೀಡಾದ ಫೈಟರ್ ಜೆಟ್ ಮಿರಾಜ್-2000

By

Published : Feb 1, 2023, 11:10 AM IST

ಮೊರೆನಾ (ಮಧ್ಯಪ್ರದೇಶ): ಅಪಘಾತಕ್ಕೀಡಾದ ಫೈಟರ್ ಜೆಟ್ ಮಿರಾಜ್-2000ನ ಇಂಜಿನ್​​ವೊಂದು ಜ.31 ರಂದು ಮೊರೆನಾದ ಜಾಜಿಪುರ ಗ್ರಾಮದ ಬಳಿಯ ಕಾಡಿನಲ್ಲಿ 500 ಅಡಿ ಆಳದ ಕಂದಕದಲ್ಲಿ ಪತ್ತೆಯಾಗಿದೆ. ಭಾರತೀಯ ವಾಯುಪಡೆಯ (IAF) ತಂಡವು ಕಾಡಿನಲ್ಲಿನ ಮರಗಳನ್ನು ಕಡಿದು ಎಂಜಿನ್ ಅನ್ನು ಹೊರತಂದಿದೆ. ಅಪಘಾತ ಸ್ಥಳದಿಂದ 500 ಅಡಿ ದೂರದಲ್ಲಿ ಪತನಗೊಂಡ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಜಾಜಿಪುರ ಗ್ರಾಮದ ಅರಣ್ಯದಿಂದ ಪಹರ್‌ಗಂಜ್‌ಗೆ ವಿಮಾನದ ಅವಶೇಷಗಳನ್ನು ಸಾಗಿಸಲು ಮೂರು ಟ್ರಕ್‌ಗಳನ್ನು ಬಳಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜ.28 ರಂದು ಸುಖೋಯ್-30 ಮತ್ತು ಮಿರಾಜ್-2000 ತರಬೇತಿ ಕಾರ್ಯಾಚರಣೆಯಲ್ಲಿದ್ದಾಗ ಅಪಘಾತ ಸಂಭವಿಸಿದೆ. ಎರಡೂ ವಿಮಾನಗಳು ಗ್ವಾಲಿಯರ್ ವಾಯುನೆಲೆಯಿಂದ ಟೇಕಾಫ್ ಆದ ನಂತರ ಮಧ್ಯಪ್ರದೇಶದ ಮೊರೆನಾದಲ್ಲಿ ಪರಸ್ಪರ ಡಿಕ್ಕಿ ಹೊಡೆದವು. ಅಪಘಾತದ ನಂತರ, ಮಿರಾಜ್ 2000 ಮೊರೆನಾದಲ್ಲಿ ಪತನವಾದರೆ, ಸುಖೋಯ್ ಪಹರ್‌ಘರ್‌ನಿಂದ ಸುಮಾರು 90 ಕಿಮೀ ದೂರದಲ್ಲಿರುವ ಭರತ್‌ಪುರದ ಪಿಂಗೌರಾ ಗ್ರಾಮದಲ್ಲಿ ಬಿದ್ದಿತು.

ಇದನ್ನೂ ಓದಿ:3 ವರ್ಷದ ಮಗಳು, 1 ವರ್ಷದ ಮಗನ ಅಗಲಿದ 'ಸಾರಥಿ': ಹುತಾತ್ಮ ಹನುಮಂತರಾವ್ ತಂದೆ, ಅಣ್ಣನಿಗೂ ಸೇನೆಯ ನಂಟು

ಕನ್ನಡಿಗ ಹನುಮಂತರಾವ್ ಸಾರಥಿ ಮರಣ:ಮಧ್ಯಪ್ರದೇಶದ ಗ್ವಾಲಿಯರ್ ವಾಯು ನೆಲೆಯ ಬಳಿ ಜ.28ರಂದು ಸಂಭವಿಸಿದ ಭಾರತೀಯ ವಾಯು ಪಡೆಯ ಯುದ್ಧ ವಿಮಾನಗಳ ಅಪಘಾತದಲ್ಲಿ ಕರ್ನಾಟಕ ರಾಜ್ಯದ ಬೆಳಗಾವಿ ಮೂಲದ ಪೈಲಟ್​ ಮರಣ ಹೊಂದಿದ್ದರು. ಮೃತ ಪೈಲಟ್​ನನ್ನು ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಎಂದು ಗುರುತಿಸಲಾಗಿತ್ತು. ಹನುಮಂತರಾವ್ ಅವರು ಮಿರಾಜ್ 2000 ಯುದ್ಧ ವಿಮಾನವನ್ನು ಹಾರಾಟ ಮಾಡುತ್ತಿದ್ದರು ಎಂದು ವಾಯು ಪಡೆಯ ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ:ಯುದ್ಧ ವಿಮಾನ ದುರಂತ: ಪೈಲಟ್ ಹನುಮಂತರಾವ್ ಸಾರಥಿಗೆ ಬೆಳಗಾವಿಯಲ್ಲಿ ಗಣ್ಯರಿಂದ ಅಂತಿಮ‌ ನಮನ

ಜ.28ರಂದು ಬೆಳಗ್ಗೆ ವಾಯು ಪಡೆಯ ಯುದ್ಧ ಜೆಟ್​ಗಳಾದ ಸುಖೋಯ್ 30 ಮತ್ತು ಮಿರಾಜ್ 2000 ವಿಮಾನಗಳ ನಡುವೆ ಆಕಾಶದಲ್ಲೇ ಅಪಘಾತ ಸಂಭವಿಸಿತ್ತು. ಆಗ ಈ ಘಟನೆ ಮಾಹಿತಿ ಹಂಚಿಕೊಂಡಿದ್ದ ಭಾರತೀಯ ವಾಯು ಪಡೆಯು ಮೂವರು ಪೈಲಟ್​​ಗಳ ಪೈಕಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿತ್ತು. ಇದಾದ ಬಳಿಕ ಇದರಲ್ಲಿ ಇಬ್ಬರು ಪೈಲಟ್​​ಗಳು ಸುರಕ್ಷಿತವಾಗಿದ್ದು, ಮಾರಣಾಂತಿಕ ಗಾಯಗೊಂಡಿದ್ದ ಮತ್ತೊಬ್ಬ ಪೈಲಟ್​ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಆದರೆ, ತಕ್ಷಣಕ್ಕೆ ಮೃತ ಈ ಪೈಲಟ್​ನ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ಲಭ್ಯವಾಗಿರುವ ಮಾಹಿತಿ ಪ್ರಕಾರ ಮತೃ ಪೈಲಟ್​ ನನ್ನು ಕರ್ನಾಟಕದ ಬೆಳಗಾವಿ ಮೂಲದ 34 ವರ್ಷದ ಹನುಮಂತರಾವ್ ಸಾರಥಿ ಎಂದು ಬಹಿರಂಗ ಪಡಿಸಲಾಗಿತ್ತು. ವಿಂಗ್ ಕಮಾಂಡರ್ ಆಗಿದ್ದ ಹನುಮಂತರಾವ್ ಅವರು ಮಿರಾಜ್ 2000 ಯುದ್ಧ ವಿಮಾನವನ್ನು ನಡೆಸುತ್ತಿದ್ದರು.

ಇದನ್ನೂ ಓದಿ:ಸುಖೋಯ್ - ಮಿರಾಜ್ ಯುದ್ಧ ವಿಮಾನಗಳ ಅಪಘಾತ: ವಿಂಗ್ ಕಮಾಂಡರ್, ಕನ್ನಡಿಗ ಹನುಮಂತರಾವ್ ಸಾರಥಿ ಮರಣ

ಮೊರೆನಾದಲ್ಲಿ ಯುದ್ಧ ಮಿಮಾನಗಳು ಪತನ: ಸುಖೋಯ್-30 ಮತ್ತು ಮಿರಾಜ್ 2000 ವಿಮಾನಗಳು ಮಧ್ಯಪ್ರದೇಶದ ಮೊರೆನಾ ಬಳಿ ಜ.28ರಂದು ಪತನಗೊಂಡಿದ್ದವು. ಜಿಲ್ಲೆಯ ಪಹಾರ್‌ಗಢ ಅರಣ್ಯದಲ್ಲಿ ಫೈಟರ್ ಜೆಟ್ ಬಿದ್ದ ನಂತರ ಬೆಂಕಿ ಕಾಣಿಸಿಕೊಂಡಿದ್ದು, ಮಾಹಿತಿ ತಿಳಿದ ಕೂಡಲೇ ಪೊಲೀಸ್ ಪಡೆ ಪಹಾರ್‌ಗಢ ಅರಣ್ಯಕ್ಕೆ ದೌಡಾಯಿಸಿದ್ದರು.

ಇದನ್ನೂ ಓದಿ:ಮಧ್ಯಪ್ರದೇಶದಲ್ಲಿ ಸುಖೋಯ್​-30, ಮಿರಾಜ್​-2000 ಯುದ್ಧ ವಿಮಾನಗಳು ಪತನ.. ಒಬ್ಬ ಪೈಲಟ್​ ಸಾವು

ABOUT THE AUTHOR

...view details