ಶ್ರೀನಗರ(ಜಮ್ಮು ಕಾಶ್ಮೀರ): ಕಣಿವೆನಾಡಿನಲ್ಲಿ ಉಗ್ರರು ಮತ್ತು ಸೇನಾಪಡೆ ನಡುವೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಬಾರಾಮುಲ್ಲಾ ಜಿಲ್ಲೆಯ ಸೋಪೋರ್ನಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ಉಗ್ರರ ಬಗ್ಗೆ ನಿಖರ ಮಾಹಿತಿ ಆಧರಿಸಿ ಪೆಥ್ಸೀರ್ ಅಡಗುದಾಣದ ಮೇಲೆ ದಾಳಿ ನಡೆಸಿದ ಭದ್ರತಾ ಪಡೆಗಳು ಉಗ್ರರನ್ನು ಗುಂಡಿಕ್ಕಿ ಕೊಂದಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸೋಮವಾರವಷ್ಟೇ ಶ್ರೀನಗರದ ಅಲೋಚಿ ಬಾಗ್ನಲ್ಲಿ ಅವಿತಿದ್ದ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹತ್ಯೆ ಮಾಡಿತ್ತು. ಈ ಕುರಿತು ಕಾಶ್ಮೀರ ಪೊಲೀಸ್ ವಲಯ ಕೂಡ ಟ್ವೀಟ್ ಮಾಡಿತ್ತು. ಹತ್ಯೆಗೊಳಗಾದ ಇಬ್ಬರೂ ಉಗ್ರರು ಶ್ರೀನಗರ ಮೂಲದ ನಿಷೇಧಿತ ಸಂಘಟನೆಗೆ ಸೇರಿದ್ದರು.
ಲಷ್ಕರ್-ಏ-ತೊಯ್ಬಾದ ಅಬ್ಬಾಸ್ ಶೇಖ್ ಮತ್ತು ಸಾಕಿಬ್ ಮಂಜೂರ್ ಹತ್ಯೆಗೊಳಗಾಗಿದ್ದು, ಇಬ್ಬರೂ ಕೂಡಾ ಮೋಸ್ಟ್ ವಾಂಟೆಡ್ ಉಗ್ರರಾಗಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಶ್ರೀನಗರದಲ್ಲಿ ಎನ್ಕೌಂಟರ್: ಟಾಪ್ ಕಮಾಂಡರ್ ಸೇರಿ ಇಬ್ಬರು 'ಮೋಸ್ಟ್ ವಾಂಟೆಡ್' ಉಗ್ರರ ಹತ್ಯೆ