ಸಿಧ್ರಾ(ಜಮ್ಮು ಕಾಶ್ಮೀರ):ಜಮ್ಮು ಜಿಲ್ಲೆಯ ಸಿಧ್ರಾ ಪ್ರದೇಶದಲ್ಲಿ ಇಂದು ಬೆಳಗ್ಗೆ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರ ಸದ್ದಡಗಿಸಲಾಗಿದೆ. ಭಯೋತ್ಪಾದಕರು ಟ್ರಕ್ನಲ್ಲಿ ಸಾಗುತ್ತಿದ್ದ ವೇಳೆ ತಡೆದು ನಿಲ್ಲಿಸಿದಾಗ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿದಾಳಿ ನಡೆಸಿದ ಸೇನಾಪಡೆ ನಾಲ್ವರನ್ನು ಹೊಡೆದುರುಳಿಸಿದ್ದಾರೆ.
ಸಿಧ್ರಾದಲ್ಲಿ ಟ್ರಕ್ ಅನುಮಾನಾಸ್ಪದವಾಗಿ ಚಲಿಸುತ್ತಿದ್ದಾಗ ಅದನ್ನು ತಡೆದು ಪರಿಶೀಲನೆಗೆ ಮುಂದಾದೆವು. ಟ್ರಕ್ ಚಾಲಕ ಪರಾರಿಯಾದ. ಅದರಲ್ಲಿದ್ದ ಉಗ್ರರು ಗುಂಡು ಹಾರಿಸಲು ಶುರು ಮಾಡಿದರು. ಬಳಿಕ ಭದ್ರತಾ ಪಡೆಗಳು ದಾಳಿ ನಡೆಸಿದರು ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಮಾಹಿತಿ ನೀಡಿದರು.