ಕರ್ನಾಟಕ

karnataka

ETV Bharat / bharat

ಗಣರಾಜ್ಯೋತ್ಸದಂದೇ ಶೋಪಿಯಾನ್​​ನಲ್ಲಿ ಎನ್​ಕೌಂಟರ್​, ಇಬ್ಬರು ಯೋಧರಿಗೆ ಗಾಯ - ಕಣಿವೆ ನಾಡಿನಲ್ಲಿ ಉಗ್ರರು-ಯೋಧರ ಗುಂಡಿನ ದಾಳಿ

ಗಣರಾಜ್ಯೋತ್ಸದ ಸಂಭ್ರಮದಲ್ಲೇ ಜಮ್ಮು-ಕಾಶ್ಮೀರದಲ್ಲಿ ಉಗ್ರರು ಬಾಲ ಬಿಚ್ಚಿದ್ದು, ಶೋಪಿಯಾನ್ ಜಿಲ್ಲೆಯ ನೊಗಮ್​ ಚೌಕ್​​​ ಪ್ರದೇಶದಲ್ಲಿ ಯೋಧರನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಇದಕ್ಕೆ ಸೂಕ್ತ ತಿರುಗೇಟು ನೀಡಿರುವ ಸೇನೆ, ಇಬ್ಬರನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Encounter started in Shopian at J&K
Encounter started in Shopian at J&K

By

Published : Jan 26, 2022, 8:35 PM IST

Updated : Jan 26, 2022, 9:16 PM IST

ಶೋಪಿಯಾನ್​(ಜಮ್ಮು-ಕಾಶ್ಮೀರ):ಜಮ್ಮು-ಕಾಶ್ಮೀರದ ಶೋಪಿಯಾನ್​ ಜಿಲ್ಲೆಯ ನೊಗಮ್ ಚೌಕ್​ ಪ್ರದೇಶದಲ್ಲಿ ಭಾರತೀಯ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದೆ. ಕಾರ್ಯಾಚರಣೆ ವೇಳೆ ಇಬ್ಬರು ಯೋಧರಿಗೆ ಗಾಯಗಳಾಗಿದ್ದು, ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಇಬ್ಬರು ಉಗ್ರರನ್ನ ಸೆರೆಹಿಡಿಯುವಲ್ಲಿ ಯೋಧರು ಯಶಸ್ವಿಯಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ. ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಾಶ್ಮೀರ ಪೊಲೀಸ್ ಇಲಾಖೆ ಟ್ವೀಟ್ ಮಾಡಿದ್ದು, ಸ್ಥಳದಲ್ಲಿ ಹೆಚ್ಚಿನ ಯೋಧರರನ್ನು ನಿಯೋಜನೆ ಮಾಡಲಾಗಿದೆ ಎಂದಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 26, 2022, 9:16 PM IST

ABOUT THE AUTHOR

...view details