ಮುಂಬೈ: ಎನ್ಕೌಂಟರ್ ತಜ್ಞ ಎಂದೇ ಖ್ಯಾತರಾಗಿರುವ ದಯಾ ನಾಯಕ್ ಅವರನ್ನು ಗೊಂಡಿಯಾ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಜುಹು ಎಟಿಎಸ್ ಉಸ್ತುವಾರಿಯಾಗಿರುವ ನಾಯಕ್ ಅವರನ್ನ ಗೊಂಡಿಯಾ ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿಗೆ ವರ್ಗಾಯಿಸಲಾಗಿದೆ.
ಇದಕ್ಕೂ ಮೊದಲು ದಯಾ ನಾಯಕ್ ಅವರನ್ನು 2014 ರಲ್ಲಿ ನಾಗ್ಪುರಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ, ನಾಗ್ಪುರದಲ್ಲಿ ಡ್ಯೂಟಿಗೆ ಹಾಜರಾಗಲು ದಯಾ ನಾಯಕ್ ಒಪ್ಪಿಕೊಂಡಿರಲಿಲ್ಲ. ಮನ್ಸುಖ್ ಹಿರೇನ್ ಕೊಲೆ ಪ್ರಕರಣವನ್ನು ಮುಂಬೈ ಎಟಿಎಸ್ ತನಿಖೆ ನಡೆಸುತ್ತಿದ್ದು, ಈ ಪ್ರಕರಣದ ತನಿಖೆಗಾಗಿ ಆರು ತಂಡಗಳನ್ನು ರಚಿಸಲಾಗಿದೆ. ಅವರಲ್ಲಿ, ದಯಾ ನಾಯಕ್ ಜುಹು ಎಟಿಎಸ್ ಉಸ್ತುವಾರಿ ವಹಿಸಿದ್ದರು. ಈಗ ಅವರನ್ನು ಗೊಂಡಿಯಾಗೆ ವರ್ಗಾಯಿಸಿ ಎಟಿಎಸ್ ಆದೇಶ ಮಾಡಿದೆ.
ದಯಾ ನಾಯಕ ಕೆಲಸದ ಡಿಟೇಲ್ಸ್
- 1995 ರಲ್ಲಿ ಮಹಾರಾಷ್ಟ್ರ ಪೊಲೀಸ ಇಲಾಖೆಗೆ ದಯಾ ನಾಯಕ್ ಸೇರ್ಪಡೆ
- 1999ರಲ್ಲಿ ದಯಾ ನಾಯಕ್ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿ ಪ್ರಸಿದ್ಧಿ
- ಪ್ರದೀಪ್ ಶರ್ಮಾ ಅವರೊಂದಿಗೆ ಅಪರಾಧ ಶಾಖೆಯಲ್ಲಿ ಕೆಲಸ ಮಾಡಿದ ಅನುಭವ