ಬೇಗುಸರಾಯ್ (ಬಿಹಾರ): ಪಾಟ್ನದ 3 ಶೂಟರ್‌ಗಳು 16 ನರಭಕ್ಷಕ ಬೀದಿ ನಾಯಿಗಳನ್ನು ಶೂಟ್ ಮಾಡಿ ಹತ್ಯೆ ಮಾಡಿರುವ ಘಟನೆ ಬಿಹಾರದ ಬೇಗುಸರಾಯ್ ಎಂಬಲ್ಲಿ ನಡೆದಿದೆ. ನಾಯಿಗಳ ಹತ್ಯೆಯಿಂದಾಗಿ ಊರಿನ ಜನರು ಬೀದಿ ನಾಯಿಗಳ ಹಾವಳಿಯು ಬಹುತೇಕ ಕೊನೆಗೊಂಡಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ನರಭಕ್ಷಕ ಬೀದಿ ನಾಯಿಗಳಿಂದ ಗ್ರಾಮದಲ್ಲಿ ಸುಮಾರು ಎಂಟು ಜನರು ಧಾರುಣವಾಗಿ ಸಾವನ್ನಪ್ಪಿದ್ದರು ಮತ್ತು ಸಾಕಷ್ಟು ಮಂದಿ ಗಂಭೀರವಾಗಿ ಗಾಯಗೊಂಡ ಸಾವಿನ ದವಡೆಯಿಂದ ಪಾರಾಗಿದ್ದರು. ಇದರಿಂದ ಬೆಸತ್ತ ಗ್ರಾಮದ ಜನರು, ಊರಿನ ಮುಖಂಡರು ಮತ್ತು ಜನಪ್ರತಿನಿಧಿಗಳು ಎಸ್ಡಿಎಂ (ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್)ಗೆ ಪತ್ರ ಬರೆದು ರಾಕ್ಷಸ ಬೀದಿ ನಾಯಿಗಳನ್ನು ಸಾಯಿಸುವಂತೆ ಮನವಿ ಮಾಡಿದ್ದರು.
ಎನ್‌ಕೌಂಟರ್ ಮಾಡಿದ ರಾಷ್ಟ್ರೀಯ ಶೂಟರ್‌ಗಳು: ಮಾಹಿತಿಗಳ ಪ್ರಕಾರ ಮಂಗಳವಾರ ಜಿಲ್ಲಾಡಳಿತದ ಸೂಚನೆ ಮೇರೆಗೆ ಬಚ್ವಾರಾ ಬ್ಲಾಕ್ ಬಳಿ ಇರುವ ಹೊಳೆಯ ಬಳಿ ನರಭಕ್ಷಕ ನಾಯಿಗಳನ್ನು ರಾಷ್ಟ್ರೀಯ ಶೂಟರ್‌ಗಳು 16 ನಾಯಿಗಳನ್ನು ಎನ್‌ಕೌಂಟರ್ ಮಾಡಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ನರಭಕ್ಷಕ ನಾಯಿಗಳ ಕಾಟ ಹೆಚ್ಚಾಗುತ್ತಲೆ ಇತ್ತು ಒಬ್ಬಂಟಿ ಯಾಗಿ ಯಾರಾದರು ಓಡಾಡುತ್ತಿರುವ ಸಂದರ್ಭದಲ್ಲಿ ಗುಂಪು ಗುಂಪಾಗಿ ಬಂದು ದಾಳಿ ಮಾಡಿ ಅವರನ್ನು ಕಚ್ಚಿ ಸಾಯಿಸಿಬಿಡುತ್ತಿದ್ದವು. ಈ ರಾಕ್ಷಸ ನಾಯಿಗಳು ಇದುವರೆಗೂ ಸುಮಾರು 8 ರಿಂದ 9 ಮಂದಿಯನ್ನು ಸಾಯಿಸಿದೆ ಹಾಗೂ 35 ರಿಂದ 40 ಮಂದಿಯನ್ನು ಗಂಭೀರವಾಗಿ ಗಾಯ ಗೊಳಿಸಿದೆ.