ಶ್ರೀನಗರ(ಜಮ್ಮು-ಕಾಶ್ಮೀರ): ಹಳೆ ಶ್ರೀನಗರದ ರೈನಾವಾರಿ ಪ್ರದಶದಲ್ಲಿ ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇಂದು ಬೆಳ್ಳಂ ಬೆಳಗ್ಗೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಎನ್‌ಕೌಂಟರ್ ಸ್ಥಳದಲ್ಲಿ ಶಸ್ತ್ರಾಸ್ತ್ರಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಹತ್ಯೆಯಾದವರ ಪೈಕಿ ಓರ್ವ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿ ಸದಸ್ಯನಾಗಿದ್ದಾನೆ. ಓರ್ವ ಮಾಧ್ಯಮದ ಗುರುತಿನ ಚೀಟಿ (ಐಡಿ) ಹೊಂದಿದ್ದರು. ಇದು ಮಾಧ್ಯಮದ ದುರ್ಬಳಕೆಯ ಸ್ಪಷ್ಟ ಪ್ರಕರಣ ಸೂಚಿಸುತ್ತದೆ ಎಂದು ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಇದೇ ತಿಂಗಳ ಎರಡನೇ ವಾರದಲ್ಲಿ ಪುಲ್ವಾಮಾ ಜಿಲ್ಲೆಯ ನೈನಾ ಗ್ರಾಮದಲ್ಲಿ ಮೊದಲ ಎನ್‌ಕೌಂಟರ್ ನಡೆದಿತ್ತು. ಗುಂಡಿನ ಚಕಮಕಿಯಲ್ಲಿ ಇಬ್ಬರು ಎಲ್‌ಇಟಿ ಉಗ್ರರನ್ನು ಹೊಡೆದುರುಳಿಸಿದರೆ ಮತ್ತೊಂದು ಘಟನೆಯಲ್ಲಿ ಪಾಕಿಸ್ತಾನಿ ನಿವಾಸಿಯಾಗಿದ್ದ ಮತ್ತೊಬ್ಬ ಉಗ್ರನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಇದನ್ನೂ ಓದಿ:ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ, 3 ದಿನಗಳ ಬಳಿಕ ಯೋಧನ ಮೃತದೇಹ ಪತ್ತೆ