ಕರ್ನಾಟಕ

karnataka

ETV Bharat / bharat

ಬಂಡಿಪೋರಾದಲ್ಲಿ ಎನ್​ಕೌಂಟರ್​.. ಭದ್ರತಾ ಪಡೆಯಿಂದ ಇಬ್ಬರು ಉಗ್ರರ ಬೇಟೆ

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ವಾಟ್ನಿರಾ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಈ ವೇಳೆ ಸೇನೆ ಇಬ್ಬರು ಉಗ್ರರನ್ನು ಸೈನಿಕರು ಎನ್​ಕೌಂಟರ್ ಮಾಡಿದ್ದಾರೆ.

Encounter breaks
Encounter breaks

By

Published : Sep 26, 2021, 9:41 AM IST

Updated : Sep 26, 2021, 12:51 PM IST

ಬಂಡಿಪೋರಾ (ಜಮ್ಮು-ಕಾಶ್ಮೀರ): ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ಮಿತಿ ಮೀರಿದೆ. ಬಂಡಿಪೋರಾ ಜಿಲ್ಲೆಯ ವಾಟ್ನಿರಾ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಯೋಧರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಭದ್ರತಾ ಪಡೆಯಿಂದ ಇಬ್ಬರು ಉಗ್ರರ ಬೇಟೆ

ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾಶ್ಮೀರ ಪೊಲೀಸರು, ‘ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ವಾಟ್ನಿರಾ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳಿ ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಗಾಯಗೊಂಡಿರುವ ಮೂವರು ಸೈನಿಕರು 12 ಜಾಟ್ ರೆಜಿಮೆಂಟ್‌ಗೆ ಸೇರಿದವರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸೆಪ್ಟೆಂಬರ್ 18 ರಂದು, ಅದೇ ವಲಯದಲ್ಲಿ ಸೇನೆಯು ಮತ್ತೊಂದು ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿತ್ತು.

ಇದನ್ನೂ ಓದಿ: ಶೋಪಿಯಾನದಲ್ಲಿ​ ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾಪಡೆ

Last Updated : Sep 26, 2021, 12:51 PM IST

ABOUT THE AUTHOR

...view details