ಕರ್ನಾಟಕ

karnataka

ETV Bharat / bharat

ಪೊಲೀಸರ ಮೇಲೆ ಏಕಾಏಕಿ ಗುಂಡು ಹಾರಿಸಿದ ದುಷ್ಕರ್ಮಿಗಳು.. ಆರೋಪಿಗೆ ಗುಂಡೇಟು, ಉಳಿದವರು ಪರಾರಿ! - ದೆಹಲಿಯ ಎನ್​ಕೌಂಟರ್​ನಲ್ಲಿ ದುಷ್ಕರ್ಮಿಗೆ ಗಾಯ

ದುಷ್ಕರ್ಮಿಗಳು ಏಕಾಏಕಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ, ದಾಳಿಗೆ ಪ್ರತ್ಯುತ್ತರ ನೀಡಿದ ಪೊಲೀಸರು ಆರೋಪಿಯೊಬ್ಬನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಈ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

Encounter in Cr park police in Delhi  Delhi Police and miscreants between gun fight  one miscreant injured in Delhi  New delhi crime news  ದೆಹಲಿಯ ಸಿಆರ್​ ಪಾರ್ಕ್​ ಪೊಲೀಸ್​ ಠಾಣಾ ವ್ಯಾಪ್ತಯಲ್ಲಿ ಗುಂಡಿನ ದಾಳಿ  ದೆಹಲಿಯಲ್ಲಿ ದುಷ್ಕರ್ಮಿಗಳು ಮತ್ತು ಪೊಲೀಸರ ಮಧ್ಯೆ ಗುಂಡಿನ ದಾಳಿ  ದೆಹಲಿಯ ಎನ್​ಕೌಂಟರ್​ನಲ್ಲಿ ದುಷ್ಕರ್ಮಿಗೆ ಗಾಯ  ನವದೆಹಲಿ ಅಪರಾಧ ಸುದ್ದಿ
ದೆಹಲಿಯ ಸಿಆರ್​ ಪಾರ್ಕ್​ ಪೊಲೀಸ್​ ಠಾಣಾ ವ್ಯಾಪ್ತಯಲ್ಲಿ ಗುಂಡಿನ ದಾಳಿ

By

Published : Apr 29, 2022, 10:45 AM IST

ನವದೆಹಲಿ: ಶುಕ್ರವಾರ ಮುಂಜಾನೆ ನಗರದ ಸಿಆರ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೆಹಲಿ ಪೊಲೀಸರು ಮತ್ತು ದುಷ್ಕರ್ಮಿಗಳ ನಡುವಿನ ಗುಂಡಿನ ದಾಳಿ ನಡೆದಿದೆ. ಎನ್‌ಕೌಂಟರ್‌ನಲ್ಲಿ ದುಷ್ಕರ್ಮಿಯೊಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ಗಾಯಗೊಂಡಿದ್ದ ದುಷ್ಕರ್ಮಿಯನ್ನು ಪೊಲೀಸರು ವಶಕ್ಕೆ ಪಡೆದು ಆಸ್ಪತ್ರೆಗೆ ರವಾನಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ನೋಡಿದಾಕ್ಷಣ ದುಷ್ಕರ್ಮಿಗಳು ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ದುಷ್ಕರ್ಮಿಗಳ ಗುಂಡಿನ ದಾಳಿ ಪೊಲೀಸರು ಪ್ರತಿದಾಳಿ ನಡೆಸಿದರು. ಈ ಗುಂಡಿನ ಚಕಮಕಿಯಲ್ಲಿ ದುಷ್ಕರ್ಮಿಯೊಬ್ಬನ ಕಾಲಿಗೆ ಗುಂಡು ತಗಲಿದೆ. ಈ ವೇಳೆ, ಪೊಲೀಸರಿಂದ ತಪ್ಪಿಸಿಕೊಳ್ಳುವ ದುಷ್ಕರ್ಮಿ ಯತ್ನ ವಿಫಲವಾಗಿದೆ.

ಓದಿ:ಶಿಗ್ಗಾವಿಯಲ್ಲಿ ಕೆಜಿಎಫ್​-2 ಸಿನಿಮಾ ವೀಕ್ಷಣೆ ವೇಳೆ ಗುಂಡು ಹಾರಿಸಿದ ದುಷ್ಕರ್ಮಿ.. ಓರ್ವನಿಗೆ ಗಾಯ

ಗುಂಡು ತಗುಲಿ ಗಾಯಗೊಂಡಿದ್ದ ದುಷ್ಕರ್ಮಿ ಕೆಳಗೆ ಬಿದ್ದಿದ್ದಾನೆ. ಆದರೆ ಆತನ ಇತರ ಸಹಚರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ, ಪೊಲೀಸರು ಗಾಯಗೊಂಡ ದುಷ್ಕರ್ಮಿಯನ್ನು ಹಿಡಿದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆರೋಪಿ ಚಿಕಿತ್ಸೆ ಬಳಿಕ ಪೊಲೀಸರು ವಿಚಾರಣೆ ನಡೆಸಲಿದ್ದು, ದುಷ್ಕರ್ಮಿಗಳು ಗುಂಡು ಹಾರಿಸಿರುವ ಉದ್ದೇಶದ ಬಗ್ಗೆ ತಿಳಿಯಲಿದೆ.

ABOUT THE AUTHOR

...view details