ಶೋಪಿಯಾನ್ (ಜಮ್ಮು ಮತ್ತು ಕಾಶ್ಮೀರ):ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಜೈನಪೋರಾ ಗ್ರಾಮದ ಶಿರ್ಮಲ್ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಶುರುವಾಗಿದೆ.
ಈ ಪ್ರದೇಶದಲ್ಲಿ ಉಗ್ರಗಾಮಿಗಳ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿ ಆಧಾರದ ಮೇಲೆ ಕಾರ್ಡನ್ ಆ್ಯಂಡ್ ಸರ್ಚ್ ಆಪರೇಷನ್ (CASO) ಅನ್ನು ಪ್ರಾರಂಭಿಸಲಾಯಿತು. ಈ ಪ್ರದೇಶವು ಸೇನೆಯಿಂದ ಮುತ್ತಿಗೆಗೆ ಒಳಗಾದ ಮೇಲೆ ಕೆಲ ಉಗ್ರರು ಸಿಕ್ಕಿಬಿದ್ದಿದ್ದಾರೆ. ಸೇನೆಯ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ:ಹರಿಯಾಣದಲ್ಲಿ ನಾಲ್ವರು ಶಂಕಿತ ಭಯೋತ್ಪಾದಕರ ಬಂಧನ: ಸ್ಫೋಟಕಗಳು, ನಗದು ವಶ
ಭಾನುವಾರ ಮುಂಜಾನೆ ಕುಲ್ಗಾಮ್ ಜಿಲ್ಲೆಯಲ್ಲಿ ಲಷ್ಕರ್-ಇ-ತೊಯ್ಬಾ (ಎಲ್ಇಟಿ) ನ ಪಾಕಿಸ್ತಾನಿ ಉಗ್ರಗಾಮಿ ಮತ್ತು ಸ್ಥಳೀಯ ಉಗ್ರನನ್ನು ಸೇನಾ ಕಾರ್ಯಾಚರಣೆಯಲ್ಲಿ ಉಡಾಯಿಸಲಾಗಿತ್ತು.
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ಪಾಕಿಸ್ತಾನಿ ಉಗ್ರ ಉತ್ತರ ಕಾಶ್ಮೀರದಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಸಕ್ರಿಯನಾಗಿದ್ದ. ವಿವಿಧ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಇನ್ನೊಬ್ಬ ಸ್ಥಳೀಯ ಉಗ್ರಗಾಮಿಯಾಗಿದ್ದು, ಏಪ್ರಿಲ್ 13 ರಂದು ಕುಲ್ಗಾಮ್‌ನ ಕಕ್ರಾನ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸತೀಶ್ ಕುಮಾರ್ ಸಿಂಗ್ ಎಂಬ ನಾಗರಿಕನ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಮಾಹಿತಿ ನೀಡಿದರು.