ಪಶ್ಚಿಮ ಸಿಂಗ್‌ಭೂಮ್ (ಜಾರ್ಖಂಡ್): ಜಾರ್ಖಂಡ್‌ನ ಚೈಬಾಸಾದಲ್ಲಿ ಗುರುವಾರ ಬೆಳಗ್ಗೆ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಗಾಯಗೊಂಡಿದ್ದಾರೆ. ಕಾರ್ಯಾಚರಣೆ ನಡೆದ ಸ್ಥಳದಿಂದ ಗಾಯಾಳು ಯೋಧರನ್ನು ಸ್ಥಳಾಂತರಿಸಲಾಗಿದೆ ಎಂದು ಜಾರ್ಖಂಡ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಜಾರ್ಖಂಡ್‌ನಲ್ಲಿ ನಕ್ಸಲ್ ಎನ್ಕೌಂಟರ್: ಐವರು ಯೋಧರಿಗೆ ಗಾಯ - Five soldiers injured
ಇಲ್ಲಿನ ಚೈಬಾಸಾ ಎಂಬಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಎರಡು ಬಾರಿ ಘರ್ಷಣೆ ನಡೆದಿದ್ದು ಐವರು ಕೋಬ್ರಾ ಸೈನಿಕರು ಗಾಯಗೊಂಡಿದ್ದಾರೆ.
ಎಡಿಜಿಪಿ ಸಂಜಯ್ ಆನಂದರಾವ್ ಲಾಠ್ಕರ್
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಸಂಜಯ್ ಆನಂದರಾವ್ ಲಾಠ್ಕರ್ ಮಾತನಾಡಿ, 'ಚೈಬಾಸಾದಲ್ಲಿ ಬೆಳಗ್ಗೆಯಿಂದ ನಕ್ಸಲರೊಂದಿಗೆ ಎರಡು ಬಾರಿ ಘರ್ಷಣೆ ನಡೆಯಿತು. ಇದರಲ್ಲಿ ನಮ್ಮ 5 ಕೋಬ್ರಾ ಸೈನಿಕರು ಗಾಯಗೊಂಡರು. ಅವರನ್ನು ಹೆಲಿಕಾಪ್ಟರ್ ಮೂಲಕ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ' ಎಂದು ತಿಳಿಸಿದರು.
ಇದನ್ನೂ ಓದಿ:ಕಾಶ್ಮೀರದಲ್ಲಿ ನಿಲ್ಲದ ಉಗ್ರರ ಉಪಟಳ: ಕಡಿಮೆ ತೀವ್ರತೆಯ ಸ್ಫೋಟ, ಓರ್ವ ಉಗ್ರನ ಹತ್ಯೆ