ಕರ್ನಾಟಕ

karnataka

ETV Bharat / bharat

ಜಮ್ಮು ಕಾಶ್ಮೀರದಲ್ಲಿ ಮುಂದುವರೆದ ಎನ್​ಕೌಂಟರ್​: ಇಬ್ಬರು ಉಗ್ರರು ಅವಿತಿರುವ ಶಂಕೆ - terrorists killed in jammu

ಜಮ್ಮು ಕಾಶ್ಮೀರದಲ್ಲಿ ನಿಖರ ಮಾಹಿತಿ ಆಧರಿಸಿ ಈಗಾಗಲೇ ಸೇನೆ ಓರ್ವ ಎಲ್​​​ಇಟಿ ಕಮಾಂಡರ್​ನನ್ನು ಸೆರೆಹಿಡಿಯಲಾಗಿದ್ದು, ಅವಿತು ಕುಳಿತಿರುವ ಇನ್ನಿಬ್ಬರು ಉಗ್ರರ ಬೇಟೆಗೆ ಕಾರ್ಯಾಚರಣೆ ಮುಂದುವರಿದಿದೆ.

encounter-between-security-forces-and-millitants-at-pampore
ಜಮ್ಮು ಕಾಶ್ಮೀರದಲ್ಲಿ ಮುಂದುವರೆದ ಗುಂಡಿನ ಚಕಮಕಿ: ಇಬ್ಬರು ಉಗ್ರರು ಅವಿತಿರುವ ಶಂಕೆ

By

Published : Oct 16, 2021, 10:29 AM IST

ಶ್ರೀನಗರ(ಜಮ್ಮು ಕಾಶ್ಮೀರ):ಪುಲ್ವಾಮಾ ಜಿಲ್ಲೆಯ ಪಾಂಪೋರ್ ಪಟ್ಟಣದ ಸೇನೆ ಮತ್ತು ಉಗ್ರರ ನಡುವೆ ಘರ್ಷಣೆ ಮುಂದುವರೆದಿದೆ. ಲಷ್ಕರ್ ಎ ತೋಯ್ಬಾದ ಕಮಾಂಡರ್​ನನ್ನು ಸೆರೆ ಹಿಡಿದ ನಂತರವೂ ಭಾರತೀಯ ಸೇನೆ ಕಾರ್ಯಾಚರಣೆಯನ್ನು ಮುಂದುವರೆಸಿದೆ.

ನಿಖರ ಮಾಹಿತಿ ಆಧರಿಸಿ, ಪಾಂಪೋರ್​ನ ದ್ರಾಂಗ್​​ಬಲ್​​ನಲ್ಲಿ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಸೇನೆ ತಾನೂ ಕೂಡಾ ಗುಂಡು ಹಾರಿಸಿದ್ದು, ಎಲ್​ಇಟಿಯ ಉಮರ್ ಮುಸ್ತಾಖ್ ಖಾಂಡೆಯನ್ನು ಬಂಧಿಸಿದೆ.

ಮೂಲಗಳ ಪ್ರಕಾರ ಇನ್ನೂ ಎನ್​ಕೌಂಟರ್​ ಕಾರ್ಯಾಚರಣೆ ಮುಂದುವರೆದಿದೆ. ಇನ್ನೂ ಇಬ್ಬರು ಉಗ್ರರು ಕಟ್ಟಡದೊಳಗೆ ಅವಿತಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಇದನ್ನೂ ಓದಿ:ಪಾರ್ವತಿ ನದಿಯಲ್ಲಿ ಮುಳುಗಿ ಐವರು ಸಾವು.. ದುರ್ಗಾ ಮೂರ್ತಿ ನಿಮಜ್ಜನ ವೇಳೆ ದುರಂತ

ABOUT THE AUTHOR

...view details