ಬಿಜಾಪೂರ(ಛತ್ತೀಸಗಢ):ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, 10 ಯೋಧರು ಗಾಯಗೊಂಡಿರುವ ಘಟನೆ ಛತ್ತೀಸಗಢದ ಬಿಜಾಪುರದಲ್ಲಿ ನಡೆದಿದೆ.
ಛತ್ತೀಸಗಢದಲ್ಲಿ ನಕ್ಸಲರ ದಾಳಿ: ಐವರು ಯೋಧರು ಹುತಾತ್ಮ, 10 ಜನರಿಗೆ ಗಾಯ - ಛತ್ತೀಸಗಢದಲ್ಲಿ ನಕ್ಸಲರ ದಾಳಿ,
15:23 April 03
ಬಿಜಾಪುರದಲ್ಲಿ ಕೆಂಪು ಉಗ್ರರ ಅಟ್ಟಹಾಸ
ನಕ್ಸಲರ ವಿರುದ್ಧ ಡಿಆರ್ಜಿ ಹಾಗೂ ಸಿಆರ್ಪಿಎಫ್ ಯೋಧರು ಮಹತ್ವದ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಇಬ್ಬರು ನಕ್ಸಲರು ಸಹ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: ಜಿಲ್ಲಾ ಪಂಚಾಯ್ತಿ ಸದಸ್ಯರೇ ಟಾರ್ಗೆಟ್... ಮಾವೋವಾದಿಗಳ ದಾಳಿಗೆ ಮತ್ತೋರ್ವ ಬಲಿ!
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಡಿಜಿಪಿ ಆವಸ್ತಿ, ಐವರು ಯೋಧರು ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದು, ಉಳಿದಂತೆ 10 ಯೋಧರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನಕ್ಸಲರು ನಡೆಸಿದ್ದ ದಾಳಿಯಲ್ಲಿ ಜಿಲ್ಲಾ ಪಂಚಾಯತ್ ಮುಖಂಡನನ್ನು ನಕ್ಸಲರು ಭೀಕರವಾಗಿ ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ ಭದ್ರತಾ ಪಡೆಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು.