ದಿಪು (ಅಸ್ಸೋಂ ):ಅಸ್ಸೋಂನ ಹಲವಾರು ನೆರೆಯ ರಾಜ್ಯಗಳ ಗಡಿ ಪ್ರದೇಶಗಳು ಮಾದಕ ದ್ರವ್ಯ ಕಳ್ಳಸಾಗಣೆಯ ಕೇಂದ್ರಗಳಾಗಿ ಮಾರ್ಪಟ್ಟಿವೆ. ನಿನ್ನೆ ರಾತ್ರಿ ಅಸ್ಸೋಂನಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದ್ದ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸ್ ಎನಕೌಂಟರ್ನಲ್ಲಿ ಗಾಯಗೊಂಡಿರುವ ಡ್ರಗ್ ಡೀಲರ್ ಶಾಹೀದ್ ಹುಸೇನ್ ಎಂದು ಗುರುತಿಸಲಾಗಿದೆ. ಆರೋಪಿ ಶಾಹೀದ್ ಹುಸೇನ್ನನ್ನು ಚಿಕಿತ್ಸೆಗಾಗಿ ದಿಫು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಯಿತು. ಪೊಲೀಸ್ ಹೇಳಿಕೆ ಪ್ರಕಾರ, ಕಳ್ಳಸಾಗಾಣಿಕೆದಾರನು ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಇಟ್ಟಿಗೆಗಳಿಂದ ದಾಳಿ ಮಾಡಿ ಪೊಲೀಸ್ ಬಂದೂಕನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಗುಂಡಿನ ದಾಳಿಯಲ್ಲಿ ಕಳ್ಳಸಾಗಣೆದಾರ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ದಿಫು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಸ್ಪಿ ಹೇಳಿದ್ದಿಷ್ಟು: ''ಬೊಕಾಜಾನ್‌ನಲ್ಲಿ ಡ್ರಗ್ ಮಾಫಿಯಾದ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಪೊಲೀಸರು ಆರೋಪಿಗೆ ಗುಂಡು ಹಾರಿಸಿದ್ದಾರೆ. ಬೋಕಜಾನ್ ಉಪವಿಭಾಗದ ಪೊಲೀಸರು ಸಿಆರ್‌ಪಿಎಫ್ ತಂಡದ ಸಹಯೋಗದೊಂದಿಗೆ ಖಟ್ಖಾತಿ ಪೊಲೀಸ್ ಠಾಣೆ ವ್ಯಾಪ್ತಿಯ ಲಹರಿಜನ್‌ನಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದರು. ಪೊಲೀಸರು ಮನೆಯಿಂದ 94 ಸೋಪ್ ಬಾಕ್ಸ್ಗಳಲ್ಲಿ 1.176 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಅವರು ಹೆರಾಯಿನ್‌ನೊಂದಿಗೆ ಶಾಹಿದ್ ಹುಸೇನ್ (44) ಮತ್ತು ಲಹರಿಜನ್‌ನ ಮೋಜಿಬುರ್ ರೆಹಮಾನ್ ಅವರ ಮಗ ಅಶಾದುಲ್ಲಾ ರಹಮಾನ್ (27) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ‘‘ ಎಂದು ಕರ್ಬಿ ಆಂಗ್ಲಾಂಗ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಶೈಕಿಯಾ ಮಾಹಿತಿ ನೀಡಿದರು.