ಇಡುಕ್ಕಿ (ಕೇರಳ):ಕೇರಳದ ಇಡುಕ್ಕಿ ಜಿಲ್ಲೆಯ ಆದಿಮಾಲಿ ಎಂಬಲ್ಲಿ ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಸಿಬ್ಬಂದಿಯೊಬ್ಬನ ಬಲಗೈಯನ್ನು ಮಾಲೀಕನೇ ಕತ್ತರಿಸಿರುವ ಭೀಕರ ಘಟನೆ ಭಾನುವಾರ ನಡೆದಿದೆ. ಕಟ್ಟಿಗೆ ಮಾರಾಟಕ್ಕೆ ಸಂಬಂಧಿಸಿದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಳಂಪಕಲ್ ವಿಜಯರಾಜ್ (43) ಹಾಗೂ ಮಾಲೀಕ ಬಿನು ಅವರ ನಡುವೆ ಜಗಳ ನಡೆದಿದೆ.
ಕೈ ಕಡಿದ ಆರೋಪಿಯ ಬಂಧನ: ಎಳಂಪ್ಲಾಕಲ್ ವಿಜಯರಾಜ ಪೊಲಿಂಜಪಾಲಂ ಮೂಲದವರಾಗಿದ್ದಾರೆ. ಬಿನು ಜಿಲ್ಲೆಯ ಆದಿಮಲಿ ಪ್ರದೇಶದಲ್ಲಿ ನೆಲೆಸಿದ್ದಾರೆ. ಬಿನು ಮರದ ಕಟ್ಟಿಗೆ ವ್ಯಾಪಾರಿ. ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಪೊಲಿಂಜಪಾಲಂ ಟ್ರಾಫಿಕ್ ಇಂಟರ್ಸೆಕ್ಷನ್ ಬಳಿಯ ಅಡಿಮಾಲಿ ಎಂಬಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಘಟನೆ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಿನು ಈ ಕೃತ್ಯ ಎಸಗಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ.
ಸಂತ್ರಸ್ತ ಎಳಂಪಕಲ್ ವಿಜಯರಾಜ ಅಪಾಯದಿಂದ ಪಾರು:ದಾಳಿಯಲ್ಲಿ ವಿಜಯರಾಜ್ ಅವರ ಶೇ.80 ರಷ್ಟು ಕೈ ತುಂಡಾಗಿದೆ. ಸಂತ್ರಸ್ತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ಮಾಡಿಸಲಾಯಿತು. ತುಂಡರಿಸಿದ ಕೈಗೆ ವೈದ್ಯರು ಹಲವು ಹೊಲಿಗೆಗಳನ್ನು ಹಾಕಿದ್ದಾರೆ. ಸಂತ್ರಸ್ತ ಎಳಂಪಕಲ್ ವಿಜಯರಾಜ ಅವರು ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.