ಕರ್ನಾಟಕ

karnataka

ETV Bharat / bharat

ದುಬೈನಿಂದ ಆಕ್ಲೆಂಡ್​​ಗೆ ಹೊರಟಿದ್ದ ವಿಮಾನ : 13 ಗಂಟೆಗಳ ಹಾರಾಟ ನಡೆಸಿ ಮತ್ತೆ ದುಬೈಗೆ ಆಗಮನ - ಈಟಿವಿ ಭಾರತ ಕನ್ನಡ

ಆಕ್ಲೆಂಡ್​ನಲ್ಲಿ ಭಾರಿ ಮಳೆ - ದುಬೈನಿಂದ ಆಕ್ಲೆಂಡ್​​ಗೆ ಹೊರಟಿದ್ದ ವಿಮಾನ - 13 ಗಂಟೆಗಳ ಕಾಲ ಹಾರಾಟ ನಡೆಸಿ ಮತ್ತೆ ದುಬೈಗೆ ವಾಪಸ್​

emirates-flight-from-dubai-to-auckland-flies-for-13-hours-lands-back-where-it-took-off-from
ದುಬೈನಿಂದ ಆಕ್ಲೆಂಡ್​​ಗೆ ಹೊರಟಿದ್ದ ವಿಮಾನ : 13 ಗಂಟೆಗಳ ಹಾರಾಟ ನಡೆಸಿ ಮತ್ತೆ ದುಬೈಗೆ ಆಗಮನ

By

Published : Jan 30, 2023, 11:04 PM IST

ಹೈದರಾಬಾದ್ : ದುಬೈನಿಂದ ಆಕ್ಲೆಂಡ್​ಗೆ ಹೊರಟಿದ್ದ ವಿಮಾನವು ಮತ್ತೆ ದುಬೈಗೆ ಮರಳಿರುವ ಘಟನೆ ಶನಿವಾರ ನಡೆದಿದೆ. ಇಲ್ಲಿನ ಎಮಿರೇಟ್ಸ್​​ ವಿಮಾನವು ದುಬೈನಿಂದ ಆಕ್ಲೆಂಡ್​ಗೆ ಹೊರಟಿತ್ತು. ಸುಮಾರು 13 ಗಂಟೆಗಳ ಕಾಲ ಹಾರಾಟ ನಡೆಸಿ ಮತ್ತೆ ದುಬೈಗೆ ಮರಳಿದ್ದು,ಪ್ರ ಯಾಣಿಕರು ನಿರಾಸೆಗೊಂಡಿದ್ದರು.

ದುಬೈನಿಂದ ಆಕ್ಲೆಂಡ್​ಗೆ ಹೊರಟಿದ್ದ ವಿಮಾನ :ಜನವರಿ 27ರಂದು ಬೆಳಿಗ್ಗೆ 10.30ಕ್ಕೆ ದುಬೈನಿಂದ ಆಕ್ಲೆಂಡ್​ಗೆ EK448 ವಿಮಾನ ಟೇಕ್​ ಆಫ್​ ಆಗಿತ್ತು. ಸುಮಾರು 9000 ಮೈಲುಗಳಷ್ಟು ಹಾರಾಟ ನಡೆಸಿದ ವಿಮಾನ ಆಕ್ಲೆಂಡ್​ನ ಹವಾಮಾನ ವೈಪರೀತ್ಯದಿಂದಾಗಿ ಮರಳಿ ದುಬೈನ ಏರ್​ಪೋರ್ಟ್​ಗೆ ಮಧ್ಯರಾತ್ರಿ ಮರಳಿತ್ತು. ಆಕ್ಲೆಂಡ್​ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಆಕ್ಲೆಂಡ್​ನ ವಿಮಾನ ನಿಲ್ದಾಣ ಜಲಾವೃತವಾಗಿತ್ತು. ಹೀಗಾಗಿ ಈ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು. ಭಾರಿ ಮಳೆಗೆ ಆಕ್ಲೆಂಡ್​ ವಿಮಾನ ನಿಲ್ದಾಣದಲ್ಲಿ ನೀರು ಹರಿಯುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಟ್ವಿಟರ್​ನಲ್ಲಿ ಮಾಹಿತಿ ನೀಡಿದ ಅಧಿಕಾರಿಗಳು: ಈ ಬಗ್ಗೆ ಟ್ವಿಟರ್​ನಲ್ಲಿ ಮಾಹಿತಿ ನೀಡಿರುವ ವಿಮಾನ ನಿಲ್ದಾಣದ ಅಧಿಕಾರಿಗಳು, ಇದು ತುಂಬಾ ನಿರಾಸೆಯ ಸಂಗತಿಯಾಗಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಇದು ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಆಕ್ಲೆಂಡ್ ವಿಮಾನ ನಿಲ್ದಾಣದಲ್ಲಿನ ಅಂತರಾಷ್ಟ್ರೀಯ ಟರ್ಮಿನಲ್‌ಗೆ ಹಾನಿಯಾಗಿದೆ. ಇದರಿಂದಾಗಿ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ಇಲ್ಲಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಇದು ಅತ್ಯಂತ ನಿರಾಶಾದಾಯಕ. ಆದರೆ ಪ್ರಯಾಣಿಕರ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಅಧಿಕಾರಿಗಳು ಟ್ವೀಟ್​ನಲ್ಲಿ ತಿಳಿಸಿದ್ದರು. ಅಲ್ಲದೆ ಜನವರಿ 29 ರ ಬೆಳಿಗ್ಗೆವರೆಗೂ ಯಾವುದೇ ಅಂತರರಾಷ್ಟ್ರೀಯ ವಿಮಾನ ಸಂಚಾರ ಇರಲಿಲ್ಲ.ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಗಳನ್ನು ರದ್ದುಗೊಳಿಸಲಾಗಿತ್ತು.

ಆಕ್ಲೆಂಡ್​ನಲ್ಲಿ ಭಾರಿ ಮಳೆ :ಸ್ಥಳೀಯ ವರದಿಗಳ ಪ್ರಕಾರ, ಧಾರಾಕಾರ ಮಳೆಯಿಂದಾಗಿ ಆಕ್ಲೆಂಡ್ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಮಾಡಲಾಗಿದೆ. ಆಕ್ಲೆಂಡ್​ನ ಹವಾಮಾನ ಸಂಸ್ಥೆ ಮೆಟ್‌ಸರ್ವಿಸ್, ಶನಿವಾರದಂದು ಸುಮಾರು 24 ಗಂಟೆಗಳಲ್ಲಿ 249 mm ಮಳೆಯಾಗಿದೆ ಎಂದು ಹೇಳಿದೆ. ಅಷ್ಟೇ ಅಲ್ಲದೆ ಮಳೆಯಿಂದಾಗಿ ಅಪಾರ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗಿದೆ. ಪ್ರವಾಹ ಹಿನ್ನೆಲೆ ಇಲ್ಲಿನ ರಾಜ್ಯ ಹೆದ್ದಾರಿ ಮತ್ತು ಆಕ್ಲೆಂಡ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು ಎಂದು ತಿಳಿದುಬಂದಿದೆ.

ಪ್ರವಾಹದಲ್ಲಿ ಸಿಲುಕಿ ಓರ್ವ ಸಾವು :ಆಕ್ಲೆಂಡ್‌ನ ನಾರ್ತ್ ಶೋರ್‌ನಲ್ಲಿ ಪ್ರವಾಹದಲ್ಲಿ ಸಿಲುಕಿ ಓರ್ವ ವ್ಯಕ್ತಿ ಮೃತಪಟ್ಟಿರುವುದು ವರದಿಯಾಗಿದೆ. ಈ ಸಂಬಂಧ ಆಕ್ಲೆಂಡ್ ಮೇಯರ್ ವೇಯ್ನ್ ಬ್ರೌನ್ ನಗರದಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಮಳೆ ಮತ್ತು ಪ್ರವಾಹದಿಂದ ಸಂತ್ರಸ್ತರಾಗಿರುವ ಜನರಿಗೆ ವಸತಿ ಸೌಲಭ್ಯ ಒದಗಿಸಲು ಮೂರು ನಿರಾಶ್ರಿತ ಶಿಬಿರಗಳನ್ನು ತೆರೆಯಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ :ಪಕ್ಷಿ ಡಿಕ್ಕಿ: ಏರ್ ಏಷ್ಯಾ ವಿಮಾನ ತುರ್ತು ಭೂಸ್ಪರ್ಶ

ABOUT THE AUTHOR

...view details