ನವದೆಹಲಿ: ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಸುನ್ನಿ ಇಸ್ಲಾಮಿಕ್ ವಿದ್ವಾಂಸ, ಶಿಕ್ಷಣ ತಜ್ಞ ಹಾಗೂ ರಹಮಾನಿ ಸ್ಥಾಪಕ ಮೌಲಾನಾ ವಾಲಿ ನಿಧನರಾಗಿದ್ದಾರೆ.
1943ರ ಜೂನ್ 5ರಂದು ಜನಸಿದ್ದ ಅವರು, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೌಲಾನಾ ಇಸ್ಲಾಮಿಕ್ ವಿದ್ವಾಂಸರಾಗಿದ್ದು, 1991ರಲ್ಲಿ ಇವರ ತಂದೆ ಸಯ್ಯದ್ ಮಿನತುಲ್ಲಾ ಮರಣದ ನಂತರ ಸಜ್ಜಾದ ನಾಶಿನ್ನ ಮುಖಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು.