ಕೋಲ್ಕತ್ತಾ (ಪಶ್ಚಿಮ ಬಂಗಾಳ):ಬಂಗಾಳಿ ಸಾಹಿತ್ಯದಲ್ಲಿ ಹೆಸರು ಮಾಡಿದ ಖ್ಯಾತ ಲೇಖಕ ಬುದ್ಧದೇವ್ ಗುಹಾ (85) ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವರದಿಗಳ ಪ್ರಕಾರ, ಏಪ್ರಿಲ್‌ನಲ್ಲಿ ಕೊರೊನಾಗೆ ತುತ್ತಾಗಿದ್ದ ಗುಹಾ ಅವರು ಕೋವಿಡ್ ನಂತರದ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ತಿಂಗಳ ಆರಂಭದಲ್ಲಿ ಮೂತ್ರಕೋಶ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇದನ್ನೂ ಓದಿ: "ಬಾತ್ರಾ ಜೊತೆ ಡಿಂಪಲ್ ಕಳೆದಿದ್ದು ಕೇವಲ 40 ದಿನ".. 'ಅಮರ' ಪ್ರೇಮದ ಕಹಾನಿ ಬಿಚ್ಚಿಟ್ಟ ಸಂದೀಪ್ ಶ್ರೀವಾಸ್ತವ್
ಅವರ 'ಮಧುಕರಿ' ಕೃತಿ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು, ಇದಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಗುಹಾ ಪಡೆದಿದ್ದಾರೆ. ಇತರ ಗಮನಾರ್ಹ ಕೃತಿಗಳಲ್ಲಿ 'ಕೋಲೆರ್ ಕಚ್ಚೆ' ಮತ್ತು 'ಸೋಬಿನೋಯ್ ನಿಬೆಡಾನ್' ಕೂಡ ಹೌದು. ಇವರ 'ಬಾಬಾ ಹೌವಾ' ಮತ್ತು 'ಸ್ವಾಮಿ ಹೊವಾ' ಕೃತಿಗಳನ್ನಾಧರಿಸಿ 'ಡಿಕ್ಷನರಿ' ಎಂಬ ಬಂಗಾಳಿ ಸಿನಿಮಾ ನಿರ್ಮಾಣವಾಗಿದೆ. ಆನಂದ ಪುರಸ್ಕಾರ್, ಶಿರೋಮಣಿ ಪುರಸ್ಕಾರ್ ಮತ್ತು ಶರತ್ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗುಹಾರನ್ನು ಗೌರವಿಸಲಾಗಿದೆ.