ನೀಲಗಿರಿ (ತಮಿಳುನಾಡು):ನೀಲಗಿರಿ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಲ್ಕು ಜನರನ್ನು ಕೊಂದಿದ್ದ ಟಿ-23 ಹೆಸರಿನ ಗಂಡು ಹುಲಿಯನ್ನು ಸುದೀರ್ಘ ಶೋಧ ಕಾರ್ಯಾಚರಣೆ ಬಳಿಕ ಜೀವಂತವಾಗಿಯೇ ಸೆರೆ ಹಿಡಿಯಲಾಗಿದೆ.
ನಿನ್ನೆಯಷ್ಟೇ ಈ ವ್ಯಾಘ್ರನಿಗೆ ಅರವಳಿಕೆ ನೀಡುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದರು. ಆದರೆ, ಆ ಬಳಿಕವೂ ಅದು ತಪ್ಪಿಸಿಕೊಂಡಿತ್ತು. ಆದರೆ, ಇಂದು ಮಾಸಿನಗುಡಿ ಅರಣ್ಯದಲ್ಲಿ ಸೆರೆ ಸಿಕ್ಕಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಸುದೀರ್ಘ ಹುಡುಕಾಟದ ಬಳಿಕ ಜೀವಂತ ಸೆರೆ ಸಿಕ್ಕ ನರಭಕ್ಷಕ ವ್ಯಾಘ್ರ ಇದನ್ನೂ ಓದಿ: ಮಾಸಿನಗುಡಿ.. 4 ಜನರನ್ನು ಕೊಂದ ಹುಲಿ ಹತ್ಯೆಗೆ ಆದೇಶ, ಇನ್ನೂ ಪತ್ತೆಯಾಗಿಲ್ಲ ವ್ಯಾಘ್ರ..
ಕಳೆದ ಜುಲೈ ತಿಂಗಳಿನಿಂದ ಈ ನರಭಕ್ಷಕ ಹುಲಿಯು ನೀಲಗಿರಿ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಲ್ಕು ಜನರನ್ನು ಹಾಗೂ 12 ಜಾನುವಾರುಗಳನ್ನು ಕೊಂದಿತ್ತು. ತಮಿಳುನಾಡು ಅರಣ್ಯ ಹಾಗೂ ವನ್ಯಜೀವಿ ಇಲಾಖೆಯ ಮುಖ್ಯ ವಾರ್ಡನ್ ಶೇಖರ್ ಕುಮಾರ್ ನೀರಜ್ ಅವರು ಈ ಹುಲಿಯನ್ನು ಬೇಟೆಯಾಡಿ ಕೊಲ್ಲಲು ಆದೇಶ ಹೊರಡಿಸಿದ್ದರು. ಇದಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಇದನ್ನೂ ಓದಿ: ತಮಿಳುನಾಡಲ್ಲಿ ನಾಲ್ವರನ್ನು ಕೊಂದಿದ್ದ ಹುಲಿಗೆ ಕೊನೆಗೂ ಅರವಳಿಕೆ; ಸೆರೆಗೆ ಶೋಧ
ಸುಮಾರು 20 ದಿನಗಳಿಂದ ಹುಲಿ ಕೊಲ್ಲಲು ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಆದರೆ, ಮದ್ರಾಸ್ ಹೈಕೋರ್ಟ್ ಅರಣ್ಯ ಇಲಾಖೆಗೆ ಹುಲಿಯನ್ನು ಜೀವಂತವಾಗಿ ಸೆರೆಹಿಡಿಯುವಂತೆ ಮತ್ತು ಅದನ್ನು ಶೂಟ್ ಮಾಡದಂತೆ ಆದೇಶಿಸಿತ್ತು.