ಕರ್ನಾಟಕ

karnataka

ETV Bharat / bharat

Watch: ಮಹಾನದಿಯಲ್ಲಿ ಸಿಲುಕಿದ ಆನೆ ರಕ್ಷಣಾ ಕಾರ್ಯಾಚರಣೆ ವೇಳೆ ಪತ್ರಕರ್ತ ಸಾವು: ಸಿಬ್ಬಂದಿ ನಾಪತ್ತೆ! - ಆನೆ ರಕ್ಷಣಾ ಕಾರ್ಯಾಚರಣೆ

ಕಟಕ್ ಜಿಲ್ಲೆಯ ಮುಂಡಾಲಿ ಸೇತುವೆಯ ಬಳಿಯ ಮಹಾನದಿ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಆನೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವೇಳೆ ಪತ್ರಕರ್ತ ಸಾವಿಗೀಡಾಗಿದ್ದು, ರಕ್ಷಣಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

rescue operation
ಮಹಾನದಿ ನದಿಯಲ್ಲಿ ಸಿಲುಕಿದ ಆನೆ ರಕ್ಷಣಾ ಕಾರ್ಯಚರಣೆ ವೇಳೆ ಮಗುಚಿದ ದೋಣಿ

By

Published : Sep 25, 2021, 1:22 PM IST

Updated : Sep 25, 2021, 2:06 PM IST

ಕಟಕ್ (ಒಡಿಶಾ): ಕಟಕ್ ಜಿಲ್ಲೆಯ ಮುಂಡಾಲಿ ಸೇತುವೆ ಬಳಿಯ ಮಹಾನದಿಯಲ್ಲಿ ಸಿಲುಕಿದ್ದ ಆನೆ ರಕ್ಷಣಾ ಕಾರ್ಯಾಚರಣೆಯ ವೇಳೆ ಪತ್ರಕರ್ತನೊಬ್ಬ ಮೃತಪಟ್ಟಿದ್ದು, ರಕ್ಷಣಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

ಅರಿಂದಮ್ ದಾಸ್ ಮೃತಪಟ್ಟ ಒಡಿಶಾದ ಮಾಧ್ಯಮವೊಂದರ ಹಿರಿಯ ವರದಿಗಾರ. ಆನೆ ನದಿಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ನೋಡಿದ ಸ್ಥಳೀಯರು ಈ ಕುರಿತು ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನದಿ ಮಧ್ಯೆ ಸಿಲುಕಿಕೊಂಡ ಆನೆ ರಕ್ಷಣೆ ಮಾಡಲು ಅರಣ್ಯ ಅಧಿಕಾರಿಗಳು ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕ್ರಿಯಾ ಪಡೆ (ODRAF) ಸದಸ್ಯರು ನದಿಗಿಳಿದು ಶುಕ್ರವಾರ ಕಾರ್ಯಚರಣೆ ಪ್ರಾರಂಭಿಸಿದ್ದರು.

ಮಹಾನದಿ ನದಿಯಲ್ಲಿ ಸಿಲುಕಿದ ಆನೆ ರಕ್ಷಣಾ ಕಾರ್ಯಚರಣೆ ವೇಳೆ ಮಗುಚಿದ ದೋಣಿ

ಇದನ್ನೂ ಓದಿ:Watch... "ಮಹಾನದಿ"ಯಲ್ಲಿ ಸಿಲುಕಿದ ಆನೆಗಳು: ಮುಂದುವರಿದ ರಕ್ಷಣಾ ಕಾರ್ಯಾಚರಣೆ

ನದಿಗಿಳಿದ ರಕ್ಷಣಾ ತಂಡದ ದೋಣಿ, ನೀರಿನ ಭಾರಿ ಹರಿವಿನಿಂದಾಗಿ ಮಗುಚಿದೆ. ಪರಿಣಾಮ ಪತ್ರಕರ್ತ ಸಾವಿಗೀಡಾಗಿದ್ದು, ODRAF ನ ತಂಡದ ಸದಸ್ಯರು ನಾಪತ್ತೆಯಾಗಿದ್ದಾರೆ. ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗಿದೆ.

Last Updated : Sep 25, 2021, 2:06 PM IST

ABOUT THE AUTHOR

...view details