ಕರ್ನಾಟಕ

karnataka

ETV Bharat / bharat

Watch... ಮದ್ಯದಂಗಡಿಗೆ ಲಗ್ಗೆ ಇಟ್ಟ ಗಜರಾಜನ ಪಡೆ.. ಮದ್ಯಪ್ರಿಯರು ಚೆಲ್ಲಾಪಿಲ್ಲಿ - ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

Elephants at liquor shop: ಆನೆ ಮದ್ಯದಂಗಡಿಗೆ ಲಗ್ಗೆ ಇಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

Elephants at liquor shop
ಮದ್ಯದಂಗಡಿಗೆ ಕಾಲಿಟ್ಟ ಗಜರಾಜನ ಪಡೆ.. ಮದ್ಯಪ್ರಿಯರು ಚೆಲ್ಲಾಪಿಲ್ಲಿ

By ETV Bharat Karnataka Team

Published : Sep 11, 2023, 5:33 PM IST

ಮದ್ಯದಂಗಡಿಗೆ ಕಾಲಿಟ್ಟ ಗಜರಾಜನ ಪಡೆ.. ಮದ್ಯಪ್ರಿಯರು ಚೆಲ್ಲಾಪಿಲ್ಲಿ

ಹರಿದ್ವಾರ :ಇತ್ತೀಚೆಗೆ ದೇಶಾದ್ಯಂತ ಒನ್ಯಮೃಗಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ ದಾಳಿ ಮಾಡುತ್ತಿರುವ ವಿಚಾರ ಕಾಮನ್​. ಕಾಡಿನಿಂದ ಗ್ರಾಮಗಳಿಗೆ ಲಗ್ಗೆ ಇಡುತ್ತಿದ್ದ ಗಜರಾಜನ ಪಡೆ ಈ ಬಾರಿ ಮದ್ಯದಂಗಡಿಗೆ ಕಾಲಿಟ್ಟಿರುವ ವಿಶೇಷ ಘಟನೆಯೊಂದು ಉತ್ತರಾಖಂಡದ ಹರಿದ್ವಾರದ ಜಗದೀಶ್​ಪುರ ಪ್ರದೇಶದಲ್ಲಿ ನಡೆದಿದೆ.

ಭಾನುವಾರ ತಡರಾತ್ರಿ ಜಗದೀಶ್​ ಪುರ ಪ್ರದೇಶದಲ್ಲಿರುವ ಮದ್ಯದಂಗಡಿ ಬಳಿ ಎರಡು ಆನೆಗಳು ಏಕಾಏಕಿ ಲಗ್ಗೆ ಇಟ್ಟಿದ್ದವು. ಆನೆಗಳು ಅಂಗಡಿ ಹತ್ತಿರ ಧಾವಿಸುತ್ತಿದ್ದಂತೆ ಅಂಗಡಿ ಬಳಿ ಇದ್ದ ಮದ್ಯಪ್ರಿಯರೆಲ್ಲ ಎದ್ದೆನೋ ಬಿದ್ದೆನೋ ಎಂಬಂತೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮದ್ಯ ಸೇವಿಸುತ್ತಿದ್ದ ಜನರೆಲ್ಲ ಗಲಿಬಿಲಿಗೊಂಡು ಅಂಗಡಿಯಿಂದ ಹೊರ ಓಡಿ ಬಂದಿದ್ದಾರೆ. ಮದ ಗಜಗಳು ಗಂಭೀರ ನಡೆಗಳೊಂದಿಗೆ ಮದ್ಯದ ಅಂಗಡಿಯತ್ತ ಆಗಮಿಸುತ್ತಿದ್ದಂತೆ ಭಯಭೀತಗೊಂಡ ಜನರು ಚೆಲ್ಲಾಪಿಲ್ಲಿಯಾಗಿ ಓಡುತ್ತಿರುವ ದೃಶ್ಯ ಅಲ್ಲೇ ಇದ್ದವರೊಬ್ಬರ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಆಗಿಯೇ ವೈರಲ್​ ಆಗುತ್ತಿದೆ.

ಅಧಿಕಾರಿಗಳು ಹೇಳುವುದೇನು? :ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋ ಬಗ್ಗೆ ಮಾತನಾಡಿರುವಹರಿದ್ವಾರ ರೇಂಜ್​ ಆಫೀಸರ್​ ಡಿ ಪಿ ನೌಡಿಯಾಲ್​ ಅವರು, ಆನೆ ಜಗದೀಶಪುರ ಏರಿಯಾಕ್ಕೆ ಲಗ್ಗೆ ಇಟ್ಟಿರುವ ಬಗ್ಗೆ ಇಡೀ ಪ್ರದೇಶದ ಪ್ರತಿಯೊಂದು ಚೆಕ್​ಪೋಸ್ಟ್​ಗಳಲ್ಲೂ ಕ್ವಿಕ್​ ರೆಸ್ಪಾನ್ಸ್​ ಟೀಂಗಳನ್ನು ನಿಯೋಜನೆ ಮಾಡಲಾಗಿದೆ. ಈ ತಂಡವು ದಿನದ ಮಾಹಿತಿಯ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಯಾವುದಾದರೂ ಮಾಹಿತಿ ಬಂದ ತಕ್ಷಣವೇ ಸ್ಥಳಕ್ಕೆ ತಲುಪುವ ಕೆಲಸವನ್ನು ಈ ತಂಡಗಳು ಮಾಡುತ್ತವೆ. ಕಾಡಾನೆಗಳಾಗಲಿ ಅಥವಾ ಇತರ ಯಾವುದೇ ಒನ್ಯ ಮೃಗಗಳು ನಾಡಿಗೆ ಬಂದರೆ, ಅಂತಹ ಪ್ರಾಣಿಗಳ ದಾಳಿ ಬಗ್ಗೆ ನಿರಂತರ ನಿಗಾ ವಹಿಸಲಾಗುತ್ತದೆ. ಕಾಲ ಕಾಲಕ್ಕೆ ಯೋಜನೆಯ ಪ್ರಕಾರ ಕೆಲಸ ಮಾಡಲಾಗುತ್ತದೆ. ಈಗ ಆನೆಗಳು ದಾಳಿ ಮಾಡಿರುವ ಹಾದಿ, ಬಹಳ ವರ್ಷಗಳಿಂದ ಪ್ರಯಾಣಿಕರು ಇದೇ ಮಾರ್ಗವಾಗಿ ಸಂಚರಿಸುವ ಹಾದಿಯಾಗಿದೆ. ಇದನ್ನು ಬದಲಾಯಿಸಲು ಸಮಯಾವಕಾಶ ಬೇಕಾಗುತ್ತದೆ. ಮಾರ್ಗ ಬದಲಾವಣೆಯ ಬಗ್ಗೆ ನಾವು ಯೋಜನೆಯನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಆನೆಗಳಿಗೆ ಕಬ್ಬು ಎಂದರೆ ಪಂಚಪ್ರಾಣ. ಹಾಗಾಗಿ ಆನೆಗಳು ಕಬ್ಬು ಕಂಡೊಡನೆ ಆ ಪ್ರದೇಶಗಳ ಮೇಲೆ ದಾಳಿ ಮಾಡುತ್ತವೆ. ಇದರಿಂದ ರಕ್ಷಣೆ ಪಡೆಯಬೇಕಾದರೆ, ಕಬ್ಬಿನ ಬದಲು ಬೇರೆಯದಾದ ಬೆಳೆಯನ್ನು ಬೆಳೆಯುವಂತೆ ಇಲ್ಲಿನ ರೈತರಲ್ಲಿ ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆ ಮನವಿ ಮಾಡಿಕೊಳ್ಳುತ್ತಲೇ ಬರುತ್ತಿದೆ. ಅಷ್ಟೇ ಅಲ್ಲ ಜೊತೆಗೆ ಜೇನು ಸಾಕಾಣೆಗೆ ಪ್ರಾಮುಖ್ಯತೆ ನೀಡುವಂತೆಯೂ ರೈತರನ್ನು ಪ್ರೇರೇಪಿಸಲಾಗುತ್ತಿದೆ ಎಂದು ರೇಂಜ್​ ಆಫೀಸರ್​​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಕೊಡಗು: ಕಾರ್ಯಾಚರಣೆ ವೇಳೆ ಕಾಡಾನೆ ದಾಳಿ.. ಅರಣ್ಯ ಇಲಾಖೆಯ ಸಿಬ್ಬಂದಿ ಸಾವು

ABOUT THE AUTHOR

...view details