ರಿಷಿಕೇಶ/ಹರಿದ್ವಾರ :ರಾಮಝುಲಾದ ಸ್ವರ್ಗಾಶ್ರಮ ಪ್ರದೇಶದಲ್ಲಿ ಆನೆಗಳ ಕಾಟ ಅಧಿಕವಾಗಿದೆ. ಇದರಿಂದ ಮಾನವ-ವನ್ಯಜೀವಿ ಸಂಘರ್ಷದ ಭೀತಿ ಎದುರಾಗಿದೆ. ವಿಷಯ ಗಮನಕ್ಕೆ ಬಂದರೂ ಜನವಸತಿ ಪ್ರದೇಶದಲ್ಲಿ ಆನೆಗಳ ಓಡಾಟ ತಡೆಯುವಲ್ಲಿ ಅರಣ್ಯ ಇಲಾಖೆ ಸಫಲತೆ ಕಾಣುತ್ತಿಲ್ಲ. ಆನೆಯ ಭೀತಿಯಿಂದಾಗಿ ನೀಲಕಂಠ ಯಾತ್ರೆಗೆ ತೆರಳುವ ಸಾವಿರಾರು ಯಾತ್ರಾರ್ಥಿಗಳ ಪ್ರಾಣಕ್ಕೂ ಅಪಾಯ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮಹಾಶಿವರಾತ್ರಿಯ ನಿಮಿತ್ತ ಈ ದಿನ ಸಾವಿರಾರು ಭಕ್ತರು ನೀಲಕಂಠ ಮಹಾದೇವ ದೇವಸ್ಥಾನಕ್ಕೆ ಕಣ್ವರ ಸಮೇತ ಜಲಾಭಿಷೇಕಕ್ಕೆ ಆಗಮಿಸುತ್ತಾರೆ. ಈ ವೇಳೆ ಆನೆ ಫುಟ್ಪಾತ್ ಮೇಲೆ ಸಂಚರಿಸುತ್ತದೆಯೇ? ಎಂಬುದರ ಮೇಲೆ ಕಣ್ಣಿಡಲಾಗಿದೆ.
ಸ್ವರ್ಗಾಶ್ರಮ ಪ್ರದೇಶದ ಬಾಬಾ ಕಾಳಿ ಕಮಲಿ ವಾಲೆ ಮಹಾರಾಜರ ಗದ್ದುಗೆಯ ಮೂಲಕ ಆನೆಯೊಂದು ಜನವಸತಿ ಪ್ರದೇಶವನ್ನು ತಲುಪಿದೆ. ಜನವಸತಿ ಪ್ರದೇಶದಲ್ಲಿ ಆನೆಗಳ ಕಾಟ ಹೆಚ್ಚಿರುವುದು ಸ್ಥಳೀಯ ಜನರ ಆತಂಕಕ್ಕೆ ಕಾರಣವಾಗಿದೆ.
ಆನೆ ಕಾಟಕ್ಕೆ ಬೇಸತ್ತ ಜನ ತಟ್ಟೆ ಬಡಿಯುವ ಮೂಲಕ ಆನೆಯನ್ನು ಕಾಡಿನ ಕಡೆಗೆ ಓಡಿಸಿದ್ದಾರೆ. ಜನವಸತಿ ಪ್ರದೇಶದಲ್ಲಿ ಆನೆ ಓಡಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.